Monday, December 23, 2024

ಜನ ಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆಯ ಶಾಕ್..!

ಬೆಂಗಳೂರು: ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ಅಡುಗೆ ಸಿಲಿಂಡರ್‌ ಬೆಲೆಯನ್ನು 50 ರೂಪಾಯಿ ಹೆಚ್ಚಳ ಮಾಡಲಾಗಿದ್ದು, 14.2 ಕೆ.ಜಿ ಗ್ಯಾಸ್ ಸಿಲಿಂಡರ್ ಬೆಲೆ 999.50ಕ್ಕೆ ಏರಿಕೆಯಾಗಿದೆ. ಹೊಸ ದರ ಈಗಾಗಲೇ ಜಾರಿಯಾಗಿದ್ದು, ಈ ಮೂಲಕ ಎರಡು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ದರ ಏರಿಕೆಯಾದಂತಾಗಿದೆ.ಇನ್ನು ಈ ತಿಂಗಳ ಆರಂಭದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 102.50 ರೂ.ಹೆಚ್ಚಿಸಲಾಗಿತ್ತು.ಈ ಬೆನ್ನಲ್ಲೇ 14.2 ಕೆಜಿ ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ಇನ್ನು 999.50ರೂ.ಆಗಿದೆ.

ಮಾರ್ಚ್ 22 ರಂದು ಕೊನೆಯ ಬಾರಿಗೆ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿತ್ತು. ಆಗ ಬೆಲೆಯನ್ನು 50 ರೂ.ಹೆಚ್ಚಿಸಲಾಗಿತ್ತು. ಏಪ್ರಿಲ್ ತಿಂಗಳಲ್ಲಿ ಈ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿರಲಿಲ್ಲ. ಪ್ರಸ್ತುತ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 2,355.50ರೂ.ಇದೆ. ಇದನ್ನು 2,253 ರಿಂದ ಹೆಚ್ಚಳ ಮಾಡಲಾಗಿತ್ತು. ಈ ನಡುವೆ 5 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 655ರೂ. ಆಗಿದೆ.

ವ್ಯಾಟ್‌ನಂತಹ ಸ್ಥಳೀಯ ತೆರಿಗೆಗಳನ್ನು ಆಧರಿಸಿ ದರಗಳು ನಗರದಿಂದ ನಗರಕ್ಕೆ ಬದಲಾಗುತ್ತವೆ. ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದ ಜನರು ಈಗಾಗಲೇ ಹೆಣಗಾಡುತ್ತಿರುವ ಸಮಯದಲ್ಲಿ ಗ್ಯಾಸ್​ನ ಬೆಲೆಯೂ ಏರಿಕೆಯಾಗಿರೋದು ಜನರಿಗೆ ತಲೆನೋವು ಹೆಚ್ಚಿಸಿದೆ.

RELATED ARTICLES

Related Articles

TRENDING ARTICLES