Wednesday, January 22, 2025

ವಿಶ್ವದ ಸಿರಿವಂತನಿಗೆ ಶುರುವಾಯ್ತಾ ಸಾವಿನ ಭಯ..?

ಎಲೆನ್ ಮಸ್ಕ್‌ ವಿಶ್ವದ ಸಿರಿವಂತ. ಯಾರ ಬಾಯಲ್ಲೂ ಇವರದೇ ಮಾತು.. ಭಾರತಕ್ಕೆ ಟೆಸ್ಲಾ ಬರಲಿ ಅಂತ ಕೇಂದ್ರ ಸರ್ಕಾರವೇ ರೆಡ್‌ ಕಾರ್ಪೆಟ್‌ ಹಾಸಿದೆ. ಹಲವು ಉದ್ಯಮಿಗಳು ಟೆಸ್ಲಾ ಮೋಟರ್ಸ್‌ ಘಟಕ ಇಂಡಿಯಾದಲ್ಲೇ ಆಗ್ಲಿ ಅಂತಿದ್ದಾರೆ. ಅಂದ್ರೆ, ಅದೊಂದು ಹೆಸರು ವಿಶ್ವದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಕೇವಲ, ಇಷ್ಟಕ್ಕೆ ಸೀಮಿತವಾಗದ ಎಲೆನ್ ಮಸ್ಕ್‌ ಅಂತರಿಕ್ಷ ತಂತ್ರಜ್ಞಾನವನ್ನು ಸಹ ಹೊಂದಿದ್ದಾರೆ. ಆದ್ರೆ, ಅವರು ಮಾಡಿರೋ ಒಂದೇ ಒಂದು ಟ್ವೀಟ್‌ ಇದೀಗ ಭಾರಿ ಚರ್ಚೆಗೆ ಕಾರಣವಾಗ್ತಿದೆ.. ಹೌದು, ಒಂದು ನಿಗೂಢ ಪರಿಸ್ಥಿತಿಯಲ್ಲಿ ನನ್ನ ಸಾವು ಆದರೆ ಅಂತ ಸಾವಿನ ವಿಚಾರ ಟ್ವೀಟ್‌ನಲ್ಲಿ ಪ್ರಸ್ತಾಪ ಮಾಡಿ ಹಲವು ಆಯಾಮಗಳಿಗೆ ನಾಂದಿ ಹಾಡಿದ್ದಾರೆ.

ಇದೇ ಮೊದಲೇನು ಅಲ್ಲ. ಈ ಮುಂಚೆಯೂ ಇಂತಹ ಗೂಢಾರ್ಥಗಳ ಟ್ವೀಟ್‌ ಮಾಡಿರೋದು ಉಂಟು ಆದ್ರೆ, ಈಗ ಮಾಡಿರೋ ಟ್ವೀಟ್‌ ನಿಜಕ್ಕೂ ಸಾವಿನ ಭಯ ಕಾಡ್ತಿದ್ಯಾ ಅನ್ನೋ ಅನುಮಾನ ಹುಟ್ಟಿಕೊಂಡಿದೆ.
ಟೆಸ್ಲಾ ಕಂಪನಿಯ ಸಿಇಒ ಎಲೆನ್ ಮಸ್ಕ್ ಸಾವಿನ ದವಡೆಯಲ್ಲಿದ್ದಾರಾ..? ಹಾಗಾದ್ರೆ, ಯಾರು ಅವರ ಸಾವಿಗೆ ಕಾರಣರಾಗ್ತಾರೆ..? ಸರಿ ಯಾಕೆ ಈ ವಿಚಾರ ಈಗ ಪ್ರಸ್ತಾಪ ಮಾಡಿದ್ದಾರೆ..? ಇದು ಸದ್ಯಕ್ಕೆ ಸ್ಪಷ್ಟತೆ ಇಲ್ಲದ ವಿಚಾರ ಆದ್ರೂ, ಸಾವಿನ ವಿಚಾರ ಪ್ರಸ್ತಾಪಕ್ಕೂ ರಷ್ಯಾ-ಉಕ್ರೇನ್‌ ಯುದ್ಧಕ್ಕೂ ತಳುಕು ಹಾಕಿಕೊಂಡಿದೆ.
ನಾನೇನಾದರೂ ನಿಗೂಢ ಸಂದರ್ಭದಲ್ಲಿ ಸತ್ತರೆ ಅದನ್ನು ತಿಳಿಯುವುದು ಎಷ್ಟು ಚೆನ್ನಾ ಎಂದು ಎಲೆನ್ ಮಸ್ಕ್ ಟ್ವೀಟ್‌ ಮಾಡಿದ್ದಷ್ಟೇ ಅಲ್ಲ. ರಷ್ಯಾದ ಅಧಿಕಾರಿಯೊಬ್ಬರು ತನಗೆ ಬೆದರಿಕೆ ಹಾಕಿರುವ ವಿಚಾರವನ್ನು ಬೇರೆ ಬೇರೆ ಟ್ವೀಟ್‌ಗಳಲ್ಲಿ ಬರೆದುಕೊಂಡಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ತಿದೆ. ವಿಶೇಷ ಅಂದ್ರೆ, ರಷ್ಯಾದ ದಾಳಿಯನ್ನು ಎದುರಿಸಲು ಉಕ್ರೇನ್ ಸೆಟಲೈಟ್‌ ಉಪಕರಣ ಸಹಾಯ ಪಡೆದಿದೆ. ಅದು ಎಲೆನ್ ಮಸ್ಕ್‌ ಮಾಲಿಕತ್ವದ ಸ್ಪೇಸ್‌ಎಕ್ಸ್‌ ಕಂಪನಿಯ ಸ್ಟಾರ್ಲಿಂಗ್‌ ಸೆಟಲೈಟ್‌ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಉಕ್ರೇನ್‌ನಲ್ಲಿ ಆರಂಭಿಸಲಾಗಿತ್ತು. ಇದರಿಂದ ಉಕ್ರೇನ್ ಸೈನಿಕರಿಗೆ ರಷ್ಯನ್ ದಾಳಿಯನ್ನು ಎದುರಿಸಲು ಸಹಾಯವಾಗಿದೆ. ಇದು ಬಲಿಷ್ಠ ರಷ್ಯಾ ಪಡೆಯ ಹಿನ್ನೆಡೆಗೆ ಕಾರಣವಾಗಿದೆ ಅನ್ನೋದು ಲೆಕ್ಕಾಚಾರ. ಇದೇ ವಿಚಾರಕ್ಕೆ ರಷ್ಯಾದ ಕೆಲ ಅಧಿಕಾರಿಗಳು ಪದೇ ಪದೇ ಎಲೆನ್ ಮಸ್ಕ್‌ ವಿರುದ್ಧ ವಾಗ್ದಾಳಿ ನಡೆಸಿದ್ರು. ಇದೀಗ, ರಷ್ಯಾದಿಂದ ಜೀವ ಬೆದರಿಕೆ ಇದೆ ಅನ್ನೋದು ಎಲೆನ್ ಟ್ವೀಟ್‌ನಿಂದಲೇ ಗೊತ್ತಾಗುತ್ತಿದೆ.

ಅಷ್ಟೇ ಅಲ್ಲ. ಎಲೊನ್ ಮಸ್ಕ್‌ ಟ್ವಿಟ್ಟರ್‌ಗಳನ್ನು ರಷ್ಯಾ ಮೀಡಿಯಾಗಳಿಗೂ ಪೋಸ್ಟ್‌ ಮಾಡಿದ್ದಾರೆ. ಜೊತೆಗೆ, ರಷ್ಯಾದ ಅಧಿಕಾರಿಗಳು ಎಲೆನ್ ವಿರುದ್ಧ ಕೊಟ್ಟಿದ್ದ ಹೇಳಿಕೆಯನ್ನು ಕೂಡ ಲಿಂಕ್‌ ಮಾಡಿ ಪೋಸ್ಟ್‌ ಮಾಡಿದ್ದಾರೆ.
ಇಷ್ಟೇ ಅಲ್ಲ. ಇತ್ತೀಚೆಗೆ ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್‌ಕಿ ಜೊತೆ ವಿಡಿಯೋ ಕಾನ್ಫರೆನ್ಸ್‌ ಮಾಡಿ ಬೆಂಬಲ ನೀಡಿದ್ರು. ಅದಕ್ಕಾಗಿ ಝೆಲೆನ್ಸ್‌ಕಿ ಧನ್ಯವಾದ ತಿಳಿಸಿ ಟ್ವೀಟ್‌ ಮಾಡಿದ್ರು.

ಎಲೆನ್ ಮಸ್ಕ್‌ ಒಡೆತನದ ಸೆಟಲೈಟ್ಸ್‌ ಯಾಕೆ ರಷ್ಯಾದ ಸೈನಿಕರನ್ನು ಗುರಿಯಾಗಿಸಿದ್ದು..? ಹಾಗಾದ್ರೆ, ಪುಟಿನ್ ವಿರೋಧ ಕಟ್ಟಿಕೊಂಡಿರುವ ಎಲೆನ್‌ಗೆ ಉಳಿಗಾಲವಿಲ್ವಾ..? ಸಾಕಷ್ಟು ಚರ್ಚೆಗೆ ಕಾರಣವಾಗಿರುವ ಈ ನಿಗೂಢ ವಿಚಾರಗಳು ಇದೀಗ ಎಲ್ಲೆಲ್ಲೂ ಸದ್ದು ಮಾಡ್ತಿದ್ದು. ರಷ್ಯಾ -ಉಕ್ರೇನ್ ಯುದ್ಧದ ಮಧ್ಯೆ, ಎಲೆನ್ ಮಸ್ಕ್‌ ವರ್ಸಸ್‌ ವ್ಲಾಡಿಮಿರ್‌ ಪುಟಿನ್ ಅನ್ನೋ ಸದ್ದೇ ಹೆಚ್ಚಾಗುವ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES