Thursday, December 19, 2024

ಟಿಟೌನ್​​​ನಲ್ಲೇ ಸೆಟಲ್ ಆಗ್ತಾರಾ ಪ್ರಶಾಂತ್ ನೀಲ್..?

ಪ್ರಭಾಸ್ ನಂತ್ರ ಜೂನಿಯರ್ ಎನ್​ಟಿಆರ್, ಅಲ್ಲು ಅರ್ಜುನ್, ರಾಮ್ ಚರಣ್, ಚಿರಂಜೀವಿ ಹೀಗೆ ಇಡೀ ಟಾಲಿವುಡ್ ನೀಲ್​ಗಾಗಿ ಕ್ಯೂ ನಿಂತಿದೆ. ಹಾಗಾದ್ರೆ ಹೈದ್ರಾಬಾದ್​ಗೆ ಶಿಫ್ಟ್ ಆಗಿಬಿಡ್ತಾರಾ ನೀಲ್ ಅನ್ನೋ ಮಾಹಿತಿ ಇಲ್ಲಿದೆ.

ಟಿಟೌನ್​​​​ನಲ್ಲೇ ಸೆಟಲ್ ಆಗ್ತಾರಾ ಪ್ರಶಾಂತ್ ನೀಲ್..? ಹೀಗೊಂದು ಬಿಲಿಯನ್ ಡಾಲರ್ ಪ್ರಶ್ನೆ ಎಲ್ಲರಲ್ಲೂ ಕಾಡ್ತಿದೆ. ಕಾರಣ ಕೆಜಿಎಫ್ ಸಕ್ಸಸ್ ಹಾಗೂ ಸಲಾರ್ ಸಿನಿಮಾದ ಮೇಕಿಂಗ್. ಹೌದು.. ವಿಶ್ವವೇ ತಿರುಗಿ ನೋಡುವಂತಹ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಹಿಟ್ ನೀಡಿದ ಗರಿಮೆ ಕ್ಯಾಪ್ಟನ್ ಪ್ರಶಾಂತ್ ನೀಲ್​ಗೆ ಸಲ್ಲುತ್ತೆ. ಅದ್ರ ಬೆನ್ನಲ್ಲೀಗ ಮತ್ತೊಂದು ಅಂಥದ್ದೇ ಪ್ಯಾನ್ ಇಂಡಿಯಾ ಸಬ್ಜೆಕ್ಟ್​ನ ಇಟ್ಕೊಂಡು ಡಾರ್ಲಿಂಗ್ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಮಾಡ್ತಿದ್ದಾರೆ.

ಈ ಮಧ್ಯೆ ಜೂನಿಯರ್ ಎನ್​ಟಿಆರ್ ಜೊತೆ ಒಂದು ಸಿನಿಮಾ ಅಫಿಶಿಯಲಿ ಅನೌನ್ಸ್ ಆಗಿದೆ. ಅದಕ್ಕೆ ಪೂರಕವಾಗಿ ಇವರಿಬ್ಬರೂ ಫ್ಯಾಮಿಲಿ ಸಮೇತ ಪದೇ ಪದೇ ಭೇಟಿ ಆಗ್ತಿದ್ದಾರೆ. ಇನ್ನು ಅಲ್ಲು ಅರ್ಜುನ್, ರಾಮ್ ಚರಣ್ ಹಾಗೂ ಮೆಗಾಸ್ಟಾರ್ ಚಿರಂಜೀವಿ ಜೊತೆಗೂ ಮಾತುಕತೆ ಯಶಸ್ವಿ ಆಗಿದ್ದು, ಇವರುಗಳಿಗೂ ಸಿನಿಮಾ ಮಾಡಲಿದ್ದಾರೆ ನೀಲ್. ಅಲ್ಲಿಗೆ ಪರ್ಮನೆಂಟ್ ಆಗಿ ಹೈದ್ರಾಬಾದ್​ಗೇ ಶಿಫ್ಟ್ ಆಗಿಬಿಡ್ತಾರಾ ಅನ್ನೋ ಅನುಮಾನ ಕನ್ನಡಿಗರಲ್ಲಿ ಮೂಡಿದೆ.

ಕೀರ್ತಿ ಪಾಟೀಲ್​, ಫಿಲ್ಮ್ ಬ್ಯೂರೋ, ಪವರ್​ ಟಿವಿ.

RELATED ARTICLES

Related Articles

TRENDING ARTICLES