Monday, December 23, 2024

ಕುಮಾರಸ್ವಾಮಿಗೆ ಸಾರಥಿ ನಾನು : ಸಿಎಂ ಇಬ್ರಾಹಿಂ

ಬಾಗಲಕೋಟೆ : ಕನಾ೯ಟಕ ದುಡ್ಡು ಎಲ್ಲಿಯೂ ಹೋಗೋವಂಗಿಲ್ಲ ನಮ್ಮ ದುಡ್ಡು ನಮ್ಮಲ್ಲೇ ಇರುತ್ತೇ ಎಂದು ಬಾದಾಮಿಯಲ್ಲಿ ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಯಾರು ನಿಂತರೂ ನನಗೇನು ಪ್ರಶ್ನೇ ಇಲ್ಲ. ಮಹಾಭಾರತ ಇದು ನಮ್ಮದು ಪಾಂಡವರ ಸೈನ್ಯ. ಅಜು೯ನರಾಗಿ ಕುಮಾರಸ್ವಾಮಿ ಇದ್ದಾರೆ, ಅವರಿಗೆ ಸಾರಥಿಯಾಗಿ ನಾನಿದ್ದೇನೆ. ಕುದುರೆ ಓಡಿಸೋದು ನನ್ನ ಕೆಲಸ ಬಾಣ ಬಿಡೋದು ಅವರ ಕೆಲಸ ಬಿಡ್ತಾರಂದ್ರೆ ಬಿಡ್ಲಿ ನಡಿತಿರುತ್ತೆ, ಜಯ ನಮ‌ ಪಾವ೯ತಿ ಪತಿ ಹರ ಹರ ಮಹಾದೇವ ಬೇಡರ ಜಂಗಮ ಹಾಕೊಂಡು ಹೊರಡ್ತೀವಿ ಜೋಳಿಗೆ ಹಾಕ್ಕೊಂಡು ನಮ್ಮೆದುರಿಗೆ ಯಾರೂ ನಿಲ್ತಾರೆ ಅನ್ನೋದಲ್ಲ ನಮ್ಮ ಅಭ್ಯಥಿ೯ ಗೆಲ್ಲಬೇಕು ರಾಜ್ಯದಲ್ಲಿ ಸಜ್ಜನರ ಸಕಾ೯ರ ಬೇಕಾಗಿದೆ ಎಂದರು.

ಅದುವಲ್ಲದೇ, ಚಿಕ್ಕದೊಡ್ಡಪ್ಪನ ಮಕ್ಕಳಾದ ಕಮಿಷನರ್​​ಗಳು, ಇನ್ಸಪೆಕ್ಟರ್​ಗಳು, ಬಾಗರಗಿ, ದೇವರಿಗೆ, ಹಾಗರಗಿ ಮಹಾಪತಿವೃತೆ, ಸತಿಸಾವಿತ್ರಿಯರಿದ್ದಾರಲ್ಲ. ಈ ಪೇಪರ್ ನಲ್ಲಿ ಬರುತ್ತಲ್ಲ, ಅದ್ಯಾವುದು ನಮ್ಮದಿಲ್ಲ. ನಾವ್ಯಾರು ಮೇಲ್ಗಡೆ, ಕೆಳಗಡೆ ದುಡ್ಡು ಕೊಡೋ ಹಾಗಿಲ್ಲ. ನಮ್ಮ ಸಾಮಾನು, ಜೋಳಿಗೆ ನಮ್ಮ ಹತ್ತಿರ ಇರುತ್ತೆ. ಕನಾ೯ಟಕ ದುಡ್ಡು ಎಲ್ಲಿಯೂ ಹೋಗೋವಂಗಿಲ್ಲ. ನಮ್ಮ ದುಡ್ಡು ನಮ್ಮಲ್ಲೇ ಇರುತ್ತೇ. ಇದ್ರಿಂದ ಕನಾ೯ಟಕ ಇನ್ನೂ ಸಮೃದ್ಧಿ ಆಗುತ್ತೆ ಯತ್ನಾಳಗೆ 2500ಕೋಟಿ ಹೋಗಿತ್ತು. ಅದೇ ದುಡ್ಡು ನಮ್ಮಲ್ಲಿದಿದ್ದರೆ ಎಷ್ಟು ಸಮೃದ್ದಿಯಾಗುತ್ತಿತ್ತು ಎಂದು ಹೇಳಿದರು.

ಇನ್ನು, ಜೆಡಿಎಸ್​ಗೆ ಕಾಂಗ್ರೆಸ್​​ನವರನ್ನ ಕರೆ ತರುವ ವಿಚಾರವಾಗಿ ಮಾತನಾಡಿದ ಅವರು, ಓ ಬಂದೆ ಬತಾ೯ರೆ, 13ನೇ ದಿನಾಂಕ ನಂತ್ರ ನೋಡ್ತಿರಿ ದರ ದರ ಹಾಗೇಯೇ ನಮ್ಮ ಪಕ್ಷಕ್ಕೆ ಬತಾ೯ರೆ. ದೇವೇಗೌಡರೇ ನಮ್ಮ ಅಂತಿಮ ಹೈಕಮಾಂಡ್ ಅವರು ಯಾರನ್ನ ಕ್ಲೀಯರ್ ಮಾಡಿ ಕೊಡ್ತಾರೋ, ನಾವು ಸರ ಸರ ಹಾಗೇ ಹೋಗ್ತಿತಿ೯ವಿ ನೂರಕ್ಕೆ ನೂರರಷ್ಟು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಸಂಪಕ೯ದಲ್ಲಿದ್ದಾರೆ. ಕೆಲವರು ಜೆಡಿಎಸ್ ನಿಂದಲೇ ಹೋಗ್ತಾರೆನ್ನುವ ವಿಚಾರ ಅದರ ಬಗ್ಗೆ ಆತುರ ಬೇಡ, ನಾವೇ ಲಿಸ್ಟ್ ಕೊಡ್ತಿವಿ ಕರೆದುಕೊಂಡು ಹೋಗಿ ಎಂದಿದ್ದೇವೆ. ನಾಡಗೌಡ, ವೀರೇಂದ್ರ ಪಾಟೀಲ ಪುತ್ರ, ಜೆ.ಎಚ್.ಪಟೇಲ ಮಗ ಇದ್ದಾರೆ, ಎಲ್ಲ ಸಜ್ಜನರನ್ನ ಒಂದ ಕಡೆಗೆ ಸೇರಸಬೇಕೆಂದು ವಿಚಾರ ಮಾಡಿದ್ದೇನೆ. ಎಂಎಲ್ಎ ಗಳು ಯಾರೂ ಅಂತ ಹೇಳಲ್ಲ, ಸಮಯ ಬರುತ್ತೇ ಅವಾಗ ಹೇಳುತ್ತೇನೆ ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿದರು.

RELATED ARTICLES

Related Articles

TRENDING ARTICLES