ದಕ್ಷಿಣ ಕನ್ನಡ : ಆಜಾನ್ ಸದ್ದು ನಿಯಂತ್ರಣ ಮಾಡಬೇಕು ಅನ್ನೋದು ಕೋರ್ಟ್ ಆದೇಶವಾಗಿದೆ. ದುರಾದೃಷ್ಟವಶಾತ್ ಈ ಸರ್ಕಾರ ಕೋರ್ಟ್ ಆದೇಶ ಪಾಲಿಸುತ್ತಿಲ್ಲ ಎಂದು ಯುವ ಬ್ರೀಗೆಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರು ಪ್ರತಿಕ್ರಿಯಿಸಿದ್ದಾರೆ.
ಮಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರು ರಾಜ್ಯ ಸರ್ಕಾರ ಕೋರ್ಟ್ ಆದೇಶ ಪಾಲಿಸಲು ಹಿಂದೆ ಬಿದ್ದಾಗ ಒತ್ತಾಯವೂ ಮಾಡುತ್ತಿಲ್ಲ. ಸರ್ಕಾರ ಮತ್ತು ವಿರೋಧ ಪಕ್ಷಗಳು ಈ ವಿಚಾರದಲ್ಲಿ ಒಂದಾಗಿವೆ. ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ಮುಸ್ಲಿಮರ ವೋಟು ಯಾರು ಜಾಸ್ತಿ ತಗೋತಾರೆ ಎಂಬ ಜಿದ್ದಿಗೆ ಬಿದ್ದಿದೆ. ವೋಟಿನ ನೆಪದಲ್ಲಿ ರಾಜ್ಯದ ಹಿತಾಸಕ್ತಿ ಕಡೆಗಣಿಸುತ್ತಿದ್ದಾರೆ ಎಂದು ರಾಜಕೀಯ ಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯುಪಿ ಸರ್ಕಾರ ಕೋರ್ಟ್ ಆದೇಶವನ್ನು ಸ್ಪಷ್ಟವಾಗಿ ಪಾಲಿಸಿದೆ. ಎಲ್ಲಾ ಧರ್ಮದ 50 ಸಾವಿರಕ್ಕೂ ಅಧಿಕ ಲೌಡ್ ಸ್ಫೀಕರ್ಗಳನ್ನು ತೆಗೆದಿದೆ. ಕರ್ನಾಟಕದಲ್ಲಿ ಇದು ಸಾಧ್ಯವಿಲ್ಲ ಅಂತಾದ್ರೆ ಬಿಜೆಪಿ ಸಿದ್ಧಾಂತ ಚಿಂತನೆ ಪಕ್ಕಕಿಡಿ, ಕೊನೆಯಪಕ್ಷ ನ್ಯಾಯಾಲಯದ ಆದೇಶವನ್ನಾದರೂ ಪಾಲಿಸಬೇಕು. ಆದರೆ, ಈ ವಿಚಾರದಲ್ಲಿ ಬಿಜೆಪಿ ನೂರು ಪ್ರತಿಶತ ವಿಫಲವಾಗಿವೆ ಎಂದು ಅವರು ಕಿಡಿಕಾರಿದರು.
ಇದೇ ವೇಳೆ ಹಿಂದೂ ಮುಖಂಡರು ಟಾರ್ಗೆಟ್ ವಿಚಾರದ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಮುಸ್ಲಿಮರು ಬಹಿರಂಗ ಬೆದರಿಕೆ ಹಾಕುತ್ತಿದ್ದಾರೆ. ಬಹಿರಂಗವಾಗಿ ಕಲ್ಲೆಸೆಯುತ್ತಾರೆ. ಹಾಡುಹಗಲೇ ಕೊಲೆ ಮಾಡುತ್ತಾರೆ. ಕಲ್ಲೆಸೆದವರಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸುವ ಮೊದಲು ಶಾಸಕ ಮನೆಗೆ ಹೋಗಿ ಅವರ ಮನೆಗೆ ಹತ್ತು ಸಾವಿರ ರೂಪಾಯಿ ಹಣ ಕೊಡ್ತಾರೆ. ಇದು ಸರ್ಕಾರದ ದಿವಾಳಿತನವನ್ನು ತೋರಿಸುತ್ತದೆ. ಶಿವಮೊಗ್ಗ ಹತ್ಯೆಯಾದಾಗ ಯುಪಿ ಮಾದರಿಯಲ್ಲಿ ಇಬ್ಬರನ್ನು ಎನ್ ಕೌಂಟರ್ ಮಾಡಿ ಬಿಸಾಡಬೇಕಿತ್ತು. ಅವರ ಮನೆಗಳನ್ನು ಬುಲ್ಡೋಜರ್ ತಂದು ಉರುಳಿಸಬೇಕಿತ್ತು. ಎಲ್ಲರೂ ಮುಸ್ಲಿಮರು ಓಟುಗಾಗಿ ಹಪಾಹಪಿಸುತ್ತಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಗುಡುಗಿದರು.