Monday, December 23, 2024

ಇಡ್ಲಿ ಅಮ್ಮನಿಗೆ ಮನೆ ಗಿಫ್ಟ್​​​ ಕೊಟ್ಟ ಉದ್ಯಮಿ ಆನಂದ್​ ಮಹೀಂದ್ರಾ

ತಮಿಳುನಾಡು: ಆಹಾರ ಪದಾರ್ಥಗಳ ದರ ದಿನದಿನಕ್ಕೆ ಹೆಚ್ಚುತ್ತಿರುವ ಈ ಕಾಲದಲ್ಲಿ ಕೇವಲ ಒಂದು ರೂಪಾಯಿಗೆ ಇಡ್ಲಿ ಮಾರಾಟ ಮಾಡುತ್ತಿದ್ದ ವೃದ್ಧ ಮಹಿಳೆಗೆ ಕೈಗಾರಿಕ ಉದ್ಯಮಿ ಆನಂದ ಮಹೀಂದ್ರಾ ಅವರು ಮನೆಯನ್ನು ಕೊಡುಗೆಯಾಗಿ ನೀಡಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ತಮಿಳುನಾಡಿನ ಕೊಯಮತ್ತೂರಿನ ಹೊರ ವಲಯದಲ್ಲಿರುವ ವಡಿವೇಳಂಪಾಳಯರಿನ ಕಮಲತ್ತಾಳ್(85) ಅವರಿಗೆ ಆನಂದ ಮಹೀಂದ್ರಾ ಅವರು ಮದರ್ಸ್​​ ಸ್ಪೆಷಲ್​ ಇಡ್ಲಿ ಅಮ್ಮನಿಗೆ ಮನೆಯನ್ನು ಗಿಫ್ಟ್​​​ ಆಗಿ ನೀಡಿದ್ದಾರೆ. ಗೋಡೆ ಕುಸಿದ ಮನೆ, ಸೌದೆ ಒಲೆಯಲ್ಲಿಯೇ ಹಸಿದ ಬಂದ ಜೀವಕ್ಕೆ ಹೊಟ್ಟೆ ತುಂಬ ಇಡ್ಲಿ ಉಣಬಡಿಸುವ ಈ ಅನ್ನಪೂರ್ಣೆಶ್ವರಿಗೆ ಕೊನೆಗೂ ಒಂದು ಸೂರು ಸಿಕ್ಕಿದೆ.

ಈ ಹಿಂದೆ ಸೌದೆ ಒಲೆಯಲ್ಲಿ ಇಡ್ಲಿ ಬೇಯಿಸಿ, ರುಬ್ಬು ಕಲ್ಲು ಬಳಸಿ ಚಟ್ನಿ ರುಬ್ಬುತ್ತಿದ್ದ ಇಡ್ಲಿ ಅಮ್ಮನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಈ ವಿಡಿಯೋವನ್ನು ಉದ್ಯಮಿ ಆನಂದ ಮಹೀಂದ್ರಾ ಅವರು ತಲುಪಿ ಅವರಿಗೆ ಸಹಾಯಾಸ್ತ ಚಾಚಿದ್ದಾರೆ.

RELATED ARTICLES

Related Articles

TRENDING ARTICLES