ಕಾರವಾರ : ಅಕ್ರಮವಾಗಿ ಸಂಗ್ರಹಿಸಿಟ್ಟು ಅಪ್ರಾಪ್ತರಿಗೆ ಮಾರಾಟ ಮಾಡುತಿದ್ದ 2.25,500 ರೂಪಾಯಿ ಮೌಲ್ಯದ ವಿದೇಶಿ ಸಿಗರೇಟುಗಳನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಶಹರ ಠಾಣೆ ಪೊಲೀಸರು ವಶಕ್ಕೆ ಪಡೆದು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ನಗರದ ರಿಮ್ಸ್ ಹೆಸರಿನ ಅಂಗಡಿಯ ಮೇಲೆ ದಾಳಿ ನಡೆಸಿ 18 ವರ್ಷದೊಳಗಿನ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮಾರಟ ಮಾಡುತ್ತಿದ್ದಾಗ ನಗರ ಠಾಣೆಯ ಸಿ.ಪಿ.ಐ ದಿವಾಕರ ನೇತೃತ್ವ ತಂಡ ಏಕ ಕಾಲದಲ್ಲಿ ದಾಳಿ ನಡೆಸಿ ಸಂಗ್ರಹಿಸಿಟ್ಟ 2,25,500 ರೂಪಾಯಿ ಮೌಲ್ಯದ ಸುಮಾರು 3500 ವಿದೇಶಿ ಸೀಗರೇಟ್ ಪ್ಯಾಕೇಟಗಳು ವಶಪಡಿಸಿಕೊಂಡು ಆರೋಪಿ ಮರಜುಕ್ ಅಹ್ಮದ ತಂದೆ ಮಹಮ್ಮದ್ ಪಾರೂಕ್ ಬಂದರ ರೋಡ್ 2ನೇ ಕ್ರಾಸ್ ನಿವಾಸಿಯನ್ನು ಬಂಧಿಸಿದ್ದಾರೆ.
ತಾಲೂಕಿನಲ್ಲಿ ಈ ಪ್ರಕರಣವು ಮೊದಲು ಬಾರಿ ಆಗಿದ್ದು ಈ ಬಗ್ಗೆ ನಗರ ಠಾಣೆ ಪಿ.ಎಸೈ ಯಲ್ಲಪ್ಪ ಮಾದರ ದೂರು ನೀಡಿದ್ದು ಕೊಟ್ಪಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡ ಪಿ ಎಸ್ ಐ ಸುಮಾ ಆಚಾರ್ಯ ತನಿಖೆ ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ನಾರಾಯಣ ನಾಯ್ಕ, ಲೋಕೇಶ ಕಪ್ಪಿ, ನಾಗರಾಜ ಮೊಗೇರ, ಸಿದ್ದು ಕಾಂಬ್ಳೆ, ಸಿದ್ದು, ಈರಣ್ಣ ಉಪಸ್ಥಿತರಿದ್ದರು.