Monday, December 23, 2024

2023ಕ್ಕೆ ಜೆಡಿಎಸ್​​ಗೆ ಸಿದ್ದು ಕ್ಷೇತ್ರವೇ ಟಾರ್ಗೆಟ್..!

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಬದಾಮಿಯಲ್ಲಿ ಸಮಾವೇಶ ನಡೆಸುವ ಮೂಲಕ ಸಿದ್ದುಗೆ ಟಕ್ಕರ್ ಕೊಡಲು ಜೆಡಿಎಸ್​ ಸಜ್ಜಾಗಿದೆ. ನಾಡಿನಾದ್ಯಂತ ಸಂಚರಿಸಿರುವ ಜನತಾ ಜಲಧಾರೆ ಯಾತ್ರೆ ಸದ್ಯ ಬಾಗಲಕೋಟೆ ಜಿಲ್ಲೆಗೆ ಕಾಲಿಟ್ಟಿದ್ದು, ಜಿಲ್ಲೆಯ 7 ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಂಚರಿಸಿ ಕೊನೆಯದಾಗಿ ಬದಾಮಿಯಲ್ಲಿ ಸಮಾರೋಪಗೊಳ್ಳಲಿದೆ.ಹೀಗಾಗಿ ಜೆಡಿಎಸ್​ ಮುಖಂಡರು ಶತಾಯಗತಾಯ ಈ ಬಾರಿ ಬದಾಮಿಯಲ್ಲಿ JDS ಬಾವುಟ ಹಾರಿಸಲೇಬೇಕೆಂದು ಪಣ ತೊಟ್ಟಿದ್ದಾರೆ. ಸೋಮವಾರ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಸಿ ಸಿದ್ದರಾಮಯ್ಯಗೆ ಟಕ್ಕರ್ ಕೊಡಲು ಸಜ್ಜಾಗಿದ್ದಾರೆ. ಈ ಮಧ್ಯೆ ಅಲ್ಪಸಂಖ್ಯಾತರ ಮುಖಂಡ, ಮಾಜಿ ಸಚಿವ ಸಿ.ಎಂ.ಇಬ್ರಾಹಿಂರನ್ನು ಸಹ ಕರೆಸಲಾಗುತ್ತಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಜನತಾ ಜಲಧಾರೆ ಯಾತ್ರೆ ಸಂಪೂರ್ಣ ಸಂಚಾರ ಮಾಡಿದ್ದು, ಉದ್ದೇಶಪೂರ್ವಕವಾಗಿ ಸ್ವಕ್ಷೇತ್ರದಲ್ಲೇ ಸಿದ್ದುಗೆ ಟಕ್ಕರ್ ​ ಕೊಡೋಕೆ ಬದಾಮಿಯಲ್ಲಿಯೇ ಸಮಾರೋಪ ಸಮಾವೇಶ ನಡೆಸಲು JDS ಉದ್ದೇಶಿಸಿದೆ.ಜೆಡಿಎಸ್​ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ನೇತೃತ್ವದಲ್ಲಿ ನೇತೃತ್ವದಲ್ಲಿ ಬದಾಮಿಯ ಎಪಿಎಂಸಿ ಎದುರಿಗೆ ಇರುವ ಕುಂದಗೋಳ ಆವರಣದಲ್ಲಿ ಜೆಡಿಎಸ್​ ಸಮಾರೋಪ ಸಮಾವೇಶಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.

ಒಟ್ಟಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರನ್ನೇ ಟಾರ್ಗೆಟ್​ ಮಾಡಿ ಜೆಡಿಎಸ್ ಬದಾಮಿಯಲ್ಲಿ ಬೃಹತ್ ಸಮಾರೋಪ ಸಮಾವೇಶಕ್ಕೆ ಮುಂದಾಗಿದ್ದು, ಇದು ಮುಂದಿನ ದಿನಗಳಲ್ಲಿ ಯಾವ ರೀತಿ ಸಿದ್ದು ಮೇಲೆ ಪರಿಣಾಮ ಬೀರಲಿದೆ ಅಂತ ಕಾದು ನೋಡಬೇಕಿದೆ..

 

RELATED ARTICLES

Related Articles

TRENDING ARTICLES