Sunday, January 19, 2025

ನಾನು ಸಿಎಂ ಆದ್ರೆ ಬುಲ್ಡೋಜರ್ ರೆಡಿ ಇಟ್ಟಿದ್ದೀನಿ : ಯತ್ನಾಳ್​

ವಿಜಯಪುರ : ಯತ್ನಾಳ್ ಸಿಎಂ ಆದ್ರೆ ತಮ್ಮ ರಾಜಕೀಯ ಭವಿಷ್ಯ ಅಂತ್ಯವಾಗುತ್ತೆ ಎನ್ನುವ ಭಯ ಡಿಕೆಶಿಗೆ ಇದೆ ಎಂದು ಯತ್ನಾಳ್​ ಡಿಕೆ ಶಿವಕುಮಾರ್​ಗೆ ಟಾಂಗ್​ ನೀಡಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿಗೆ ನನ್ನ ಭಯ ಬಗ್ಗೆ ಶುರುವಾಗಿದೆ. ಯತ್ನಾಳ್ ಸಿಎಂ ಆದ್ರೆ ತಮ್ಮ ರಾಜಕೀಯ ಭವಿಷ್ಯ ಅಂತ್ಯವಾಗುತ್ತೆ ಎನ್ನುವ ಭಯ ಡಿಕೆಶಿಗೆ ಇದೆ. ಮತ್ತೆ ಅದೆ ಜಾಗಕ್ಕೆ (ಜೈಲಿಗೆ) ಹೋಗಬೇಕಾಗುತ್ತೆ ಅನ್ನೋ ಭಯ ಶುರುವಾಗಿದೆ ಎಂದರು.

ಅದುವಲ್ಲದೇ, ಡಿಕೆಶಿಗೆ ಏನೋ ಒಂದು ಸಂದೇಶ‌ ಸಿಕ್ಕಿದೆ. ಯತ್ನಾಳ್ ಪವರ್‌ಪುಲ್ ಮನುಷ್ಯ ಆದ್ರೆ ಅನ್ನೋ ಭಯ ಇದೆ. ನಾನು ಸಚಿವ ಸ್ಥಾನ ಕೇಳಿಯೇ ಇಲ್ಲ. ನಾನು ವಿಧಾನ ಸೌಧದಲ್ಲಿ 2 ಸಾವಿರ ಕೋಟಿ ವಿಚಾರ ಮಾತನಾಡಿದಾಗ ಇದು ಇಶ್ಯೂ ಆಗಲಿಲ್ಲ. ವಿಧಾನ ಸೌಧದಲ್ಲಿ ಹೇಳಿದಾಗ ಯಾಕೆ ಚರ್ಚೆ ಆಗಲಿಲ್ಲ. ಕೆಲವೇ ದಿನಗಳಲ್ಲಿ ಸಚಿವ ಸಂಪುಟದಲ್ಲಿ ಬದಲಾವಣೆಯ ಸುಳಿವಿದೆ, ಯತ್ನಾಳ್ ಏನಾದರೂ ಆದ್ರೆ ಬುಲ್ಡೋಜರ್ ತರ್ತಾರೆ ಅಂತಾ ಭಯ. ಅಕ್ರಮ ಆಸ್ತಿ ಒಡೆಯೋಕೆ ಶುರು ಮಾಡ್ತಾರೆ ಅಂತಾ ಭಯ. ನಾನು ಸಿಎಂ ಆದ್ರೆ ಬುಲ್ಡೊಜರ‍್ ರೆಡಿ ಇಟ್ಟಿದ್ದೀನಿ. ಬುಲ್ಡೋಜರ್​ಗೆ ಆರ್ಡರ್ ಕೊಟ್ಟಿದ್ದೀನಿ ನನ್ನ ಸಚಿವ ಸ್ಥಾನ ತಪ್ಪಿಸಲು ಇದು ಷಡ್ಯಂತ್ರ ಎಂದು ಯತ್ನಾಳ್ ಹೇಳಿದರು.

RELATED ARTICLES

Related Articles

TRENDING ARTICLES