ಮೈಸೂರು: ನಂಜನಗೂಡು, ದಕ್ಷಿಣ ಕಾಶಿ ಆಂತಾನೇ ಪ್ರಸಿದ್ಧವಾಗಿರೋ ನಂಜುಡೇಶ್ವರನ ಸನ್ನಿಧಿ. ಈ ಕ್ಷೇತ್ರಕ್ಕೆ ಬರೋ ಭಕ್ತರು ಕಪಿಲೆಯಲ್ಲಿ ಮಿಂದು ನಂಜುಡೇಶ್ವರನ ದರ್ಶನ ಪಡೆದ್ರೆ ಪಾಪಗಳೆಲ್ಲವೂ ಪರಿಹಾರ ಆಗುತ್ತೆ ಅನ್ನೋ ನಂಬಿಕೆ. ಈ ನಂಬಿಕೆಯಿಂದಲೇ ವರ್ಷದಲ್ಲಿ ಲಕ್ಷಾಂತರ ಮಂದಿ ಭಕ್ತರು ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ನಂಜುಡೇಶ್ವರನ ದರ್ಶನ ಪಡೆಯುತ್ತಾರೆ. ಆದ್ರೆ ಕಪಿಲೆಯಲ್ಲಿ ಮಿಂದು ಮೇಲೆಳುವ ಭಕ್ತರು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ. ದಡದ ಮೇಲೆ ಭಕ್ತರು ತಮ್ಮ ಬ್ಯಾಗ್ ಇಟ್ಟು ಮೂರು ಬಾರಿ ಕಪಿಲೆ ನದಿಯಲ್ಲಿ ಮುಳುಗಿ ಏಳುವ ವೇಳೆಗೆ ತಾವು ತಂದಿರೋ ಲಗೇಜ್ ನಾಪತ್ತೆಯಾಗ್ಬಿಡುತ್ತೆ.
ಎಸ್ ..ಅಂದಹಾಗೆ ನಂಜುಡೇಶ್ವರನ ಸನ್ನಿಧಿಯಲ್ಲಿ ಹಲವಾರು ವರ್ಷಗಳಿಂದ ಈ ರೀತಿಯ ಕಳ್ಳತನ ಪ್ರಕರಣಗಳು ಬೆಳಕಿಗೆ ಬರ್ತಿವೆ. ಪಾಪ ಪರಿಹಾರಕ್ಕೆ ಬರೋ ಭಕ್ತ ವೃಂದ ಬರಿಗೈಯಲ್ಲಿ ವಾಪಸ್ ಹೋಗುವಂತಾಗಿದೆ. ನದಿಯಲ್ಲಿ ಮುಳುಗಿ ಮೇಲೆ ಬರೋ ಭಕ್ತರ ಬ್ಯಾಗ್ , ಹಣ, ಮೊಬೈಲ್, ಬಟ್ಟೆ ಕಳುವಾಗ್ತಿದೆ ಅಂತಾ ನಂಜನಗೂಡು ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ದೂರು ಕೊಟ್ಟರೆ ಪೊಲೀಸರು ಮಾತ್ರ ಕ್ಯಾರೆ ಎನ್ನುತ್ತಿಲ್ಲ.
ನಿಮ್ಮ ವಸ್ತುಗಳಿಗೆ ನೀವೇ ಜವಬ್ದಾರಿ ಅಂತಾ ಬೋರ್ಡ್ ತಗುಲು ಹಾಕಿ ನಮಗು ಭಕ್ತರಿಗೋ ಸಂಬಂಧ ಇಲ್ವೆ ಇಲ್ಲ ಅಂತಾ ಪೊಲೀಸರು ವರ್ತನೆ ಮಾಡ್ತಿದ್ದಾರೆ ಅನ್ನೋ ಆರೋಪ ಇದೆ.
ಒಟ್ಟಿನಲ್ಲಿ ಪಾಪ ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇಟ್ಟು ನಂಜುಡೇಶ್ವರನ ಸನ್ನಿಧಿಗೆ ಬರೋ ಭಕ್ತರು ಕಳ್ಳರ ಹಾವಳಿಗೆ ಬೆಸ್ತು ಬಿದ್ದಿದ್ದಾರೆ. ಪೊಲೀಸರು ಇಂತಹ ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸಿ, ಭಕ್ತರಿಗೆ ರಕ್ಷಣೆ ಒದಗಿಸಬೇಕಿದೆ.