Friday, November 22, 2024

ಗೋಕಾಕ್ ಸಾಹುಕಾರ ಈಗ ಭಿಕ್ಷುಕ : ಡಿಕೆ ಶಿವಕುಮಾರ್

ಬೆಳಗಾವಿ: ಗೋಕಾಕ್ ಸಾಹುಕಾರ್ ಬಿಕ್ಷುಕರಾಗಿದ್ದಾರೆ ಎಂದು ಬೆಳಗಾವಿಯಲ್ಲಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕೆ.ಎಸ್ ಈಶ್ವರಪ್ಪ ಮತ್ತು ನನ್ನ ಮೇಲೆ ಡಿ.ಕೆ.ಶಿ ಷಡ್ಯಂತರ ಮಾಡಿದ್ದಾರೆ ಎಂದು ಜಾರಕಿಹೋಳಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾನು ಏಷ್ಟು ಕೋಟಿ ಟ್ಯಾಕ್ಸ್ ಕಟ್ಟಿದ್ದೇನೆ. ನಮ್ಮ ವ್ಯಹಾರ ಏನು ವಹಿವಾಟು ಏನು ಎಂದು ಹೇಳಲಿ. ಅವನು ಯಾವನು ಸ್ಟಿಂಗ್ ಮಾಡಲಿಕ್ಕೆ ಬಂದವನಿಗೆ ಅವನಿಗೆ ಸ್ವಲ್ಪ ಗಿಪ್ಟ್ ಕೊಟ್ಟು ಕಳಿಸಿದ್ದಾರೆ. ನಾನು ಈಗಾ ಅದರ ಬಗ್ಗೆ ಮಾತನಾಡಲು ಹೋಗುವುದಿಲ್ಲಾ ನೀವೆಲ್ಲಾ ರಮೇಶ್ ಜಾರಕಿಹೋಳಿಗೆ ಸಾಹುಕಾರ್ ಅಂತಿದ್ರೆ, ಈಗಾ ಅವರು ಪ್ರತಿಕೆಯಲ್ಲಿ ಜಾಹಿರಾತು ನೀಡಿದ್ದಾರೆ ನಮ್ಮ ಕಾರ್ಖಾನೆ ದಿವಾಳಿಯಾಗಿದೆ ಎಂದು ಅದಕ್ಕೆ ಸೋಮಶೇಖರ್ ಉತ್ತರ ನೀಡಲಿ ಆಮೇಲೆ ಮಾತನಾಡುತ್ತೇನೆ ಎಂದು ಬೆಳಗಾವಿಯಲ್ಲಿ ಡಿ.ಕೆ ಶಿವಕುಮಾರ್ ಹೇಳಿದರು.

ಅದುವಲ್ಲದೇ, ಬಿಡಿಸಿಸಿ ಬ್ಯಾಂಕ್ ಗೆ ರಮೇಶ್ ಜಾರಕಿಹೋಳಿ ಸಾಲ ಮರುಪಾವತಿ ಮಾಡದ ವಿಚಾರವಾಗಿ ಮುಖ್ಯಮಂತ್ರಿ, ಸಹಕಾರ ಸಚಿವರು ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಮಂತ್ರಿಗಳು ಏನು ಕ್ರಮ ತೆಗೆದುಕೊಳ್ಳುತ್ತಾರೆ ನೋಡುತ್ತೇನೆ. ನಂತರ ತೀರ್ಮಾನ ತೆಗದುಕೊಳ್ಳುತ್ತೇನೆ ಎಂದರು.

ಇನ್ನು ಸಿಎಂ ಬದಲಾವಣೆ ಕೂಗು ವಿಚಾರ ನನಗೆ ಗೋತ್ತಿಲ್ಲಾ ಆದರೆ ಸಿಎಂಗೆ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿಯಂತ್ರಣ ಮಾಡಲು ಆಗುತ್ತಿಲ್ಲಾ. ಮಂತ್ರಿಗಳ ಮೇಲೆಯಾಗಲಿ ಶಾಸಕರ ಮೇಲಾಗಲಿ ಕ್ರಮ ತೆಗೆದುಕೊಳ್ಳಲು ಸಿಎಂಗೆ ಆಗುತ್ತಿಲ್ಲಾ ಹೀಗಾಗಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಬೆಳಗಾವಿಯಲ್ಲಿ ಡಿ‌ಕೆ ಶಿವಕುಮಾರ್ ಹೇಳಿದರು.

RELATED ARTICLES

Related Articles

TRENDING ARTICLES