Sunday, January 19, 2025

ಯತ್ನಾಳ್​ ಹೇಳಿಕೆ ಸೀರಿಯಸ್​​ ಆಗಿ ತೆಗೆದುಕೊಂಡಿದ್ದೀರಾ? – ಸಿ.ಟಿ ರವಿ ಪ್ರಶ್ನೆ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಅಧಿಕಾರ. ಪಕ್ಷದ ಜೊತೆ ಸಮಾಲೋಚನೆ ಮಾಡಿ‌ ಅಭಿಪ್ರಾಯ ಪಡೆದು ಸ್ವಯಂ ನಿರ್ಣಯ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಶನಿವಾರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಒಂದೇ ವಿಚಾರ ಹೇಳೋದಂದ್ರೆ, ಎಲ್ಲರ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಸ್ವತಂತ್ರವಾಗಿ ನಿರ್ಣಯ ಮಾಡಬೇಕು ಎಂದರು.

ಇನ್ನು ಇದೇ ವೇಳೆ ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಊಹಾಪೂಹಕ್ಕೆ ಬೆಲೆ ಕೊಡುವ ಅವಶ್ಯಕತೆ ಇಲ್ಲ. ಎಲ್ಲರ ಅಭಿಪ್ರಾಯ, ಯಡಿಯೂರಪ್ಪ ಅವರು, ಜಗದೀಶ್ ಶೆಟ್ಟರ್, ಪೂರ್ಣಿಮಾ, ಅಶೋಕ್ ಎಲ್ಲರೂ ಸರ್ವಾನುಮತ ಪಡೆದು ಮಾಡಲಾಗಿದೆ. ಮಾಧ್ಯಮದಲ್ಲಿ ಬೆಂಕಿ ಇಲ್ಲದೇ ಒಮ್ಮೊಮ್ಮೆ ಹೊಗೆ ಆಡಲಿದೆ. ಸಮಾಲೋಚನೆ ಮಾಡೋದು ಸ್ವಾಭಾವಿಕ ಎಂದು ಹೇಳಿದರು.

ಮೊನ್ನೆ ಬಸನಗೌಡ ಪಾಟೀಲ್ ಯತ್ನಾಳ್ ಅವರ 2,500 ಕೋಟಿ ಕೊಟ್ರೆ ಬಿಜೆಪಿಯಲ್ಲಿ ಸಿಎಂ‌ ಆಗಬಹುದು ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್​ ಹೇಳಿಕೆಯನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದೀರಾ(?) ನಮ್ಮ ಪಕ್ಷ ಹತ್ತಾರು ಆಲೋಚನೆ ಮಾಡಿ ನಿರ್ಣಯ ತೆಗೆದುಕೊಳ್ತಾರೆ. ಯತ್ನಾಳ್ ಅವರು ಚರ್ಚೆ ಮಾಡಿದ್ದಾರೆ. ನಮ್ಮ ಪಕ್ಷ ಅಲ್ಲದವರು ಮಾಡಿಸುತ್ತಿರಬಹುದು. ಸಿಎಂ‌ ಆಯ್ಕೆ ವೇಳೆ ಅನೇಕರು ಇದ್ದರು. ಎಲ್ಲಾ ಶಾಸಕರು ಉಪಸ್ಥಿತಿ ಇದ್ದರು. ಯಾರನ್ನೂ ಮರೆಮಾಚಿ ಸಿಎಂ ಆಯ್ಕೆ ಮಾಡಿಲ್ಲ. ಕೆಲವರು ಸಂತೆ ಮಾತನಾಡ್ತಾರೆ. ಬೇರೆ ಪಕ್ಷದವರ ದಾರಿ ತಪ್ಪಿಸಲು ಈ ರೀತಿ ಹೇಳಿರಬಹುದು. ಯತ್ನಾಳ್ ಹೇಳಿರೋದು ಇದು ತಪ್ಪು. ಅವರೇ ಸ್ಪಷ್ಟೀಕರಣ ನೀಡಬೇಕು. ವಿಪಕ್ಷಗಳಿಗೆ ಈ ಹೇಳಿಕೆಗಳು ಆಹಾರವಾಗಬಹುದು. ಅವರೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES