Wednesday, January 22, 2025

ದಂಗಲ್ ಹಿಂದಿಕ್ಕಿದ KGF-2

ಕನ್ನಡದ KGF-2 ಸಿನಿಮಾ ಈ ಮಟ್ಟಕ್ಕೆ ಸಾಧನೆ ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಪರಭಾಷೆಯ ಘಟಾನುಘಟಿಗಳು ಮಾಡಿದ್ದ ದಾಖಲೆಗಳನ್ನೆಲ್ಲ ಅಳಿಸಿ ಹಾಕುವ ಮಟ್ಟಕ್ಕೆ KGF-2 ಸಿನಿಮಾ ಗೆದ್ದು ಬೀಗಿದೆ.

ಈ ಸಿನಿಮಾ ತೆರೆಕಂಡು 23 ದಿನ ಕಳೆದಿದ್ದು, ವಿಶ್ವದಾದ್ಯಂತ ಅಬ್ಬರಿಸಿರುವ ರಾಕಿ ಭಾಯ್ ಭರ್ಜರಿ ಕಲೆಕ್ಷನ್ ಮಾಡಿದ್ದಾನೆ. ಹಿಂದಿ ಪ್ರೇಕ್ಷಕರು ಈ ಸಿನಿಮಾಗೆ ಭರಪೂರ ಮೆಚ್ಚುಗೆ ನೀಡಿದ್ದಾರೆ. ಇದೀಗ ಬಾಲಿವುಡ್ ಬಾಕ್ಸ್ ಆಫೀಸ್ ಇತಿಹಾಸದಲ್ಲಿ ಕೆಜಿಎಫ್- 2 ನೂತನ ದಾಖಲೆ ಸೃಷ್ಟಿಸಿದೆ. 400 ಕೋಟಿ ಕಲೆಕ್ಷನ್​​ನಿಂದ ಆಮೀರ್ ಖಾನ್  ನಟನೆಯ ‘ದಂಗಲ್’ ಸಿನಿಮಾವನ್ನ ಹಿಂದಿಕ್ಕಿದೆ. ಹಿಂದಿಯಲ್ಲಿ 510.99 ಕೋಟಿ ಗಳಿಕೆಯಿಂದ ಬಾಹುಬಲಿ- 2  ಅಗ್ರಸ್ಥಾನದಲ್ಲಿದೆ. ಆದ್ರೀಗ 401. 80 ಕೋಟಿ ಕಲೆಕ್ಷನ್​​ನಿಂದ 2ನೇ ಸ್ಥಾನದಲ್ಲಿದ್ದ ದಂಗಲ್ ನ KGF-2 ಹಿಂದಿಕ್ಕಿದೆ.

RELATED ARTICLES

Related Articles

TRENDING ARTICLES