ಬೆಂಗಳೂರು: ಆಜಾನ್ ಧ್ವನಿವರ್ಧಕದ ಶಬ್ಧ ಇನ್ನೂ ನಿಂತಿಲ್ಲ. ಹೀಗಾಗಿ ಮೇ 9ರಿಂದ 1 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಸುಪ್ರಭಾತ, ಓಂಕಾರ, ಭಜನೆ, ಹನುಮಾನ್ ಚಾಲೀಸಾ ಪಠಣ ಮಾಡಲಾಗುವುದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ
ಸುಪ್ರೀಂಕೋರ್ಚ್ ಆದೇಶ ಉಲ್ಲಂಘನೆ ನಿರಂತರವಾಗಿ ಆಗುತ್ತಿದೆ. ತಹಶೀಲ್ದಾರ್, ಜಿಲ್ಲಾಧಿಕಾರಿಗೆ ಮನವಿ ಕೊಟ್ಟಿದ್ರೂ ಯಾವುದೇ ಕ್ರಮ ಆಗಿಲ್ಲ. ಕೇವಲ ನೋಟಿಸ್ ಕೊಡುವ ಕೆಲಸ ಆಗಿದೆ. ಶಬ್ದದಿಂದ ಆಗುವ ದೊಡ್ಡ ತೊಂದರೆ ನಿಂತಿಲ್ಲ. ಹೀಗಾಗಿ ಎಲ್ಲ ಹಿಂದೂ ಸಂಘಟನೆ ಸಭೆ ಮಾಡಿ ಈ ತೀರ್ಮಾನ ಮಾಡಿದ್ದೇವೆ.
ಆಜಾನ್‌ಗೆ ನಮ್ಮ ವಿರೋಧವಿಲ್ಲ, ಮೈಕ್ ಶಬ್ಧದ ಕಿರಿಕಿರಿ ವಿರುದ್ಧ ನಮ್ಮ ಹೋರಾಟ, ಸರ್ಕಾರ, ಮುಸ್ಲಿಂ ಮಾನಸಿಕತೆಯ ವಿರುದ್ಧ ನಮ್ಮ ಹೋರಾಟ. ನಮ್ಮ ವಿರುದ್ಧ ಕ್ರಮಕ್ಕೆ ಮುಂದಾದ್ರೆ ಸಂಘರ್ಷ ಎದುರಿಸಬೇಕಾಗುತ್ತೆ. ಸರ್ಕಾರ ಕೂಡಲೇ UP ಮಾದರಿಯಲ್ಲಿ ಮೈಕ್ ಹಿಂತೆಗೆಸಬೇಕು ಎಂದರು.
ಸಾರ್ವಜನಿಕ, ವಸತಿ ಸ್ಥಳಗಳಲ್ಲಿ ಆಜಾನ್ ಕೂಗಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಇದೆ. ಡೆಸಿಬಲ್ ಕಡಿಮೆ ಇಡಬೇಕು ಅಂತಾ ಸುಪ್ರೀಂ ಕೋರ್ಟ್ ಸ್ಪಷ್ಟವಾದ ಆದೇಶ ನೀಡಿದೆ. ಆದರೆ ಸರ್ಕಾರ ಮಾತ್ರ ಯಾವುದೇ ಕ್ರಮ ಜರುಗಿಸಿಲ್ಲ. ಸರ್ಕಾರಕ್ಕೆ ನೀಡಿದ್ದ ಗಡುವು ಅಂತ್ಯವಾದ ಹಿನ್ನೆಲೆ ಹಿಂದೂಪರ ಸಂಘಟನೆಗಳಿಂದ ಆಜಾನ್ ವಿರುದ್ಧ ಹೋರಾಟ ನಡೆಯಲಿದೆ ಎಂದು ಸಂಘಟನೆಗಳು ತಿಳಿಸಿವೆ.