ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿ ಕೊರೋನಾ 4ನೇ ಅಲೆಯ ಆತಂಕ ಹೆಚ್ಚಾಗ್ತಿದೆ. ಸೋಂಕಿತರ ಸಂಖ್ಯೆ ಕೂಡ ಹೆಚ್ಚುತ್ತಿದ್ದು, ನಡುಕ ಹುಟ್ಟಿಸಿದೆ. ಸದ್ಯ ರಾಜ್ಯದಲ್ಲಿ ಕೊವಿಡ್ ರೂಪಾಂತರಿ ಪತ್ತೆಗೆ ಹೊಸ ಅಸ್ತ್ರ ಬಳಕೆಗೆ ಸಿದ್ಧತೆ ನಡೆದಿದೆ.
ದಕ್ಷಿಣ ಆಫ್ರಿಕಾ ಮಾದರಿಯಲ್ಲಿ ಹೊಸ ತಳಿ ಪತ್ತೆಗೆ BBMP ಪ್ಲ್ಯಾನ್ ಮಾಡಿದೆ. 2ನೇ ಕೊವಿಡ್ ಅಲೆ ವೇಳೆ ಬಳಸಿದ ಬಾಣವೇ ಈಗಲೂ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಕೊಳಚೆ ನೀರು ಪರೀಕ್ಷೆ ಮೂಲಕ ರೂಪಾಂತರಿ ವೈರಸ್ ಪತ್ತೆ ಹಚ್ಚಲು BBMP ಮುಂದಾಗಿದೆ. BBMP ಪಾಲಿಕೆ ವ್ಯಾಪ್ತಿಯ 34 STP ಕೊಳಚೆ ನೀರು ಪರೀಕ್ಷೆ ಮಾಡಿ ನೀರನ್ನು ಸಂಗ್ರಹಿಸಿ ಬಳಿಕ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಕೊಳಚೆ ನೀರಿನಲ್ಲಿ ರೂಪಾಂತರಿ ಪತ್ತೆಯಾಗಿತ್ತು. 15 ದಿನಗಳ ಹಿಂದೆಯೇ ಕೊಳಚೆ ನೀರು ಪರೀಕ್ಷೆ ಮಾಡಿದ ಬಳಿಕವೇ ಹೆಚ್ಚು ಜನರಿಗೆ ಸೋಂಕು ಹರಡಿತ್ತು. ಈ ಹಿನ್ನೆಲೆ BBMPಯಿಂದ ರೂಪಾಂತರಿ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ.
ಅದುವಲ್ಲದೇ ಲ್ಯಾನ್ಸೆಟ್ ಸಂಸ್ಥೆಯ ವರದಿ ಪ್ರಕಾರ 2020 ರ ಜನವರಿಯಿಂದ 2021ರ ಡಿಸೆಂಬರ್ ನಡುವೆ ಭಾರತದಲ್ಲಿ 4.89 ಲಕ್ಷ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ವೆಬ್‌ಸೈಟ್ ಪ್ರಕಾರ 2022ರ ಏಪ್ರಿಲ್ 28ರವರೆಗೆ ದೇಶಾದ್ಯಂತ ಕೊರೊನಾದಿಂದ 5.23 ಲಕ್ಷ ಸೋಂಕಿತರು ಮೃತರಾಗಿದ್ದಾರೆ. ಆ ಪೈಕಿ 2020ರಲ್ಲಿ 1.48 ಲಕ್ಷ, 2021ರಲ್ಲಿ 3.32 ಲಕ್ಷ ಮತ್ತು 2022ರಲ್ಲಿ 40,207 ಎಂದು ನಮೂದಿಸಲಾಗಿದೆ.