Monday, December 23, 2024

ಹೆಚ್​​.ಡಿ ಕುಮಾರಸ್ವಾಮಿಗೆ ಮತ ನೀಡಿ ಅದೇ ನನ್ನ ಮದುವೆ ಉಡುಗೊರೆ

ಚಿತ್ರದುರ್ಗ: ಬಿಜೆಪಿ ದುರಾಡಳಿತ, ಭ್ರಷ್ಟಾಚಾರ, ಹಗರಣಗಳು ಹಾಗು ರಾಷ್ಟೀಯ ಪಕ್ಷಗಳ ಕಚ್ಚಾಟದ ಬಗ್ಗೆ ಬೇಸತ್ತಿರುವ ಯುವಕನೋರ್ವ ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುಂಭರುವ ಚುನಾವಣೆಯಲ್ಲಿ ನೀವು ಹೆಚ್ಡಿಕೆಗೆ ನೀಡುವ ಮತವೇ ನನಗೆ ನೀವು ಕೊಡುವ ಉಡುಗೊರೆ ಎಂದು ಅಚ್ಚು ಹಾಕಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪಿ.ಗೌರೀಪುರ ಗ್ರಾಮದ ಪುಟ್ಟಮ್ಮ ನಾಗರಾಜಪ್ಪ ದಂಪತಿಗಳ ಪುತ್ರ ಜಯಕುಮಾರ್ ಇಂತಹದ್ದೊಂದು ವಿಶೇಷ ಮದುವೆ ಆಮಂತ್ರಣ ಹಂಚುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದೆ.
ಮೇ 18 ರಂದು ನಡೆಯಲಿರುವ ತಮ್ಮ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ನವ ಕರ್ನಾಟಕ ನಿರ್ಮಾಣಕ್ಕಾಗಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂಬ ಹಂಬಲ ಹೊಂದಿರುವ ಮದುಮಗ ಜಯಕುಮಾರ್ ಸ್ನಾತಕೋತ್ತರ ಪಧವೀಧರರಾಗಿದ್ದು, ಮದುಮಗಳು ಕೂಡ ಸ್ನಾತಕೋತ್ತರ ಪದವೀಧರೆಯಾಗಿದ್ದಾರೆ.

ಈ ಹಿಂದೆ ಸಿಎಂ ಆಗಿ ಹೆಚ್ ಡಿ ಕುಮಾರಸ್ವಾಮಿ ಅವರು ನೀಡಿರುವ ಜನಪರ ಆಡಳಿತವನ್ನು ಸ್ಮರಿಸಿಕೊಳ್ಳುತ್ತಾ, ಮತ್ತೊಮ್ಮೆ ಕುಮಾರಣ್ಣ ಮುಖ್ಯಮಂತ್ರಿ ಆಗಬೇಕು ಎಂಬ ಕನಸು ಹೊತ್ತಿದ್ದಾರೆ.

RELATED ARTICLES

Related Articles

TRENDING ARTICLES