Monday, May 20, 2024

PSI ಅಕ್ರಮದಡಿ ಇಬ್ಬರು ಪೊಲೀಸ್‌ ಅಧಿಕಾರಿಗಳು ಅರೆಸ್ಟ್‌

ಕಲಬುರಗಿ : ದಿನೇ ದಿನೇ 545 PSI ನೇಮಕಾತಿ ಪರೀಕ್ಷೆ ಅಕ್ರಮ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. CID ಬಗೆದಷ್ಟು ಅಕ್ರಮದ ಜಾಡು ಉದ್ದವಾಗುತ್ತಲೇ ಇದೆ. ಇದೀಗ ಪರೀಕ್ಷೆ ಅಕ್ರಮ ಕೆಲ ಪೊಲೀಸ್ ಅಧಿಕಾರಿಗಳಿಗೆ ಉರುಳಾಗ್ತಿದೆ. ಪರೀಕ್ಷೆ ಅಕ್ರದ ಆರೋಪದಡಿ ಇಂದು ಕಲಬುರಗಿ ಇಬ್ಬರು ಪೊಲೀಸ್ ಅಧಿಕಾರಿಗಳ ಬಂಧನವಾಗಿದೆ.

ರಾಯಚೂರು ಜಿಲ್ಲೆಯ ಲಿಂಗಸೂಗೂರು ಡಿವೈಎಸ್ ಪಿ ಮಲ್ಲಿಕಾರ್ಜುನ ಸಾಲಿ ಮತ್ತು ಕಲಬುರಗಿಯ ಬೆರಳಚ್ಚು ವಿಭಾಗದ ಸಿಪಿಐ ಆನಂದ ಮೇತ್ರೆ ಅವರನ್ನು ಸಿಐಡಿ ತನಿಖಾ ತಂಡ ಅರೆಸ್ಟ್ ಮಾಡಿದೆ. ವಿಚಾರಣೆ ವೇಳೆ ಕಿಂಗ್ ಆರ್ ಡಿ ಪಾಟೀಲ್ ಬಿಟ್ಟಿರೋ ಸುಳಿವಿನ ಮೇಲೆ ಸಿಐಡಿ ತನಿಖಾ ತಂಡ ಡಿವೈಎಸ್ಪಿ ಮಲ್ಲಿಕಾರ್ಜುನ ಪಾಟೀಲ್ ಮತ್ತು ಸಿಪಿಐ ಆನಂದ ಮೇತ್ರೆ ಅವರನ್ನು ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದಲ್ಲಿ ನಿನ್ನೆಯಿಂದ ತೀವ್ರ ವಿಚಾರಣೆ ನಡೆಸಿ ಸಾಕಷ್ಟು ಸಾಕ್ಷಾದಾರ ಮಾಹಿತಿಯನ್ನ ಕಲೆ ಹಾಕಿರೋ ಸಿಐಡಿ ತಂಡ ಇಬ್ಬರು ಪೊಲೀಸ್ ಅಧಿಕಾರಿಗಳನ್ನ ಬಂಧನ ಮಾಡಿದ್ದಾರೆ. ಅರೆಸ್ಟ್ ಮಾಡಿರೋ ಸಿಐಡಿ ತಂಡ ಇಬ್ಬರು ಅಧಿಕಾರಿಗಳನ್ನು ವೈಧ್ಯಕೀಯ ತಪಾಸಣೆಗೆ ಕರೆದೊಯ್ದಿದ್ದು, ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಮತ್ತಷ್ಟು ವಿಚಾರಣೆಗಾಗಿ ೧೪ ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರಿಗೆ ಕೊರಿಕೆ ಇಡಲಿದೆ.

ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಇಬ್ಬರು ಪೊಲೀಸ್ ಶಾಮಿಲು ಆರೋಪ ಹಿನ್ನೆಲೆ ಬಂಧನ ಆಗ್ತಿದ್ದಂತೆ ಪರೀಕ್ಷೆಯಲ್ಲಿ ಕಳ್ಳಾಟ ಆಡಿರೋ ಅಧಿಕಾರಿಗಳಿಗೆ ನಡುಕ ಶುರುವಾಗಿದೆ. ಯಾವಾಗ ಅಧಿಕಾರಿಗಳು ಮನೆ ಕದ ತಟ್ಟುತ್ತಾರೋ ಅನ್ನೋ ಭಯ ಶುರುವಾಗಿದೆ. ಇನ್ನು ಈ ಪರೀಕ್ಷೆ ಅಕ್ರಮದಲ್ಲಿ ಪೊಲೀಸ್ ಇಲಾಖೆಯ ಮತ್ತಷ್ಟು ಅಧಿಕಾರಿಗಳು ಶಾಮಿಲಾಗಿರೋ ಶಂಕೆ ಇದ್ದು ಅವರನ್ನು ಜಾಲಾಡಲು ಸಿಐಡಿ ತಂಡ ಬಲೆ ಬೀಸಿದೆ. ಆರ್ ಡಿ ಪಾಟೀಲ್ ಮತ್ಯಾರ ಹೆಸರುಗಳನ್ನು ಬಾಯಿ ಬಿಡ್ತಾನೋ ಅನ್ನೋ ಭಯ ಅಕ್ರಮದಲ್ಲಿ ಭಾಗಿಯಾಗಿರೋರಿಗೆ ಕಾಡತೊಡಗಿದೆ. ಪೊಲೀಸ್ ಇಲಾಖೆಯ ಇನ್ನಷ್ಟು ಅಧಿಕಾರಿಗಳ ಹೆಸರುಗಳು ಕೇಳಿಬರುತ್ತಿದ್ದು ಢವ ಢವ ಶುರುವಾಗಿದೆ. ಇನ್ನೊಬ್ಬ ನಿವೃತ್ತ ಡಿವೈಎಸ್ಪಿ ಹೆಸರು ಕೂಡ ಈ ಪರೀಕ್ಷೆ ಅಕ್ರಮದಲ್ಲಿ ಕೇಳಿಬರುತ್ತಿದ್ದು, ಈಗಾಗಲೆ ನಿವೃತ್ತ ಡಿವೈಎಸ್ಪಿಯ ಎರಡು ಮೊಬೈಲ್ ಗಳನ್ನು ಸಿಐಡಿ ತಂಡ ವಶಕ್ಕೆ ಪಡೆದು ತನಿಖೆ ಮುಂದುವರೆಸಿದೆ.

ಪಿಎಸ್ ಐ ಪರೀಕ್ಷೆ ಅಕ್ರಮ ಭೇದಿಸುತ್ತಿರೋ ಸಿಐಡಿ ತನಿಖಾ ಇಬ್ಬರು ಅಧಿಕಾರಿಗಳು ಸೇರಿ ಈವರೆಗೆ 31 ಜನರನ್ನ ಬಂಧಿಸಿದೆ. ಒಟ್ನಲ್ಲಿ ಬಹುಕೋಟಿ ಪಿಎಸ್ಐ ನೇಮಕಾತಿ ಅಕ್ರಮ ಜಾಲ ವಿಶಾಲವಾಗಿ ವ್ಯಾಪಿಸಿದ್ದು ಸಿಐಡಿ ತಂಡ ಶೋಧ ಕಾರ್ಯ ಚುರುಕುಗೊಳಿಸಿದೆ. ಹಂತ ಹಂತವಾಗಿ ಪೊಲೀಸ್ ಇಲಾಖೆಯ ಮತ್ಯಾವ ಅಧಿಕಾರಿಗಳು ಈ ಅಕ್ರಮದಲ್ಲಿ ಲಾಕ್ ಆಗ್ತಾರಾ ಅನ್ನೋ ಕೂತುಹಲ ಮೂಡಿಸಿದ್ದು, ಬೆಲಿಯೇ ಎದ್ದು ಹೊಲ ಮೈಯ್ದಿರೋದಂತು ಸತ್ಯ.

RELATED ARTICLES

Related Articles

TRENDING ARTICLES