Sunday, May 12, 2024

KPSC SCAM: ಡಿಕೆ ಬ್ರದರ್ಸ್​​ಗೆ ಬಿಜೆಪಿ ಖಡಕ್​ ಪ್ರಶ್ನೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹಾಗೂ ಅವರ ತಮ್ಮ ಕಾಂಗ್ರೆಸ್​ ಸಂಸದ ಡಿ.ಕೆ ಸುರೇಶ್​ ಅವರು ಕೆಪಿಎಸ್​ಸಿಯಲ್ಲಿ ಉದ್ಯೋಗ ಕೊಡಿಸೋದಾಗಿ ಹೇಳಿ ಅಭ್ಯರ್ಥಿ ಬಳಿ 25 ಲಕ್ಷ ಹಣ ಪಡೆದಿರುವ ಬಗ್ಗೆ ನಿನ್ನೆ ಪವರ್ ಟಿವಿ ಸಾಕ್ಷ್ಯ ಸಮೇತ ಸುದ್ದಿ ಬಿತ್ತರಿಸಿತ್ತು. ಈ ವಿಚಾರವನ್ನು ಇಂದು ಬಿಜೆಪಿ ಟ್ವಿಟ್​ ಮೂಲಕ ಪ್ರಶ್ನೆ ಮಾಡಿದೆ.

ಬಿಜೆಪಿ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಕಾಂಗ್ರೆಸ್​ಅನ್ನು ಪ್ರಶ್ನೆ ಮಾಡಿದ್ದು, ಡಿಕೆ ಸಹೋದರರು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೆಪಿಎಸ್‌ಸಿಯನ್ನು ಅಕ್ರಮದ ಗೂಡನ್ನಾಗಿ ಪರಿವರ್ತಿಸಿದ್ದರು. ತಮ್ಮ ಸಂಬಂಧಿಯನ್ನು ಕೆಪಿಎಸ್‌ಸಿ ಸದಸ್ಯರಾಗಿ ನೇಮಿಸಿಕೊಂಡ ಡಿಕೆ ಶಿವಕುಮಾರ್​ ಹಾಗೂ ಡಿಕೆ ಸುರೇಶ್​ ಅವರು ನಡೆಸಿದ ಅಕ್ರಮಕ್ಕೆ ಇಲ್ಲಿದೆ ಸಾಕ್ಷ್ಯ. ನೇಮಕಾತಿಗೆ 25 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದು ಏಕೆ(?) ಎಂದು ಬಿಜೆಪಿ ಖಡಕ್​ ಆಗಿ ಪ್ರಶ್ನಿಸಿದೆ.

ಮಜವಾದಿ ನಾಯಕ ಸಿದ್ದರಾಮಯ್ಯ ಅವರೇ, ಪಿಎಸ್ಐ ನೇಮಕ ಹಗರಣದ ಬಗ್ಗೆ ವೃಥಾರೋಪ ಮಾಡುವ‌ ಮುನ್ನ ನಿಮ್ಮ ಸರ್ಕಾರದ ಅವಧಿಯಲ್ಲಿ‌ ನಡೆದ ನೇಮಕ ದಂಧೆಯ ಬಗ್ಗೆ  ಸ್ವಲ್ಪ ಕಣ್ಣು ಹಾಯಿಸುವಿರಾ(?)ಕೆಪಿಸಿಸಿಯ #ಭ್ರಷ್ಟಾಧ್ಯಕ್ಷರ ಕಮಾಯಿ ಬಗ್ಗೆ ಮಾತನಾಡುವ ತಾಕತ್ತು ತೋರುವಿರಾ(?) ಎಂದು ಕಾಂಗ್ರೆಸ್​ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದೆ.

ಅಲ್ಲದೇ, ಕಾಮಾಲೆ ಕಣ್ಣಿಗೆ ಲೋಕವೆಲ್ಲಾ ಹಳದಿ ಕಾಣುವಂತೆ ಕಾಂಗ್ರೆಸ್‌ ಕಾಲದಲ್ಲಿ ಮಾಡಿದ ಅಕ್ರಮಗಳ ಫಲಶ್ರುತಿಯೇ ಇಂದಿನ ಪರಿಸ್ಥಿತಿಗೆ ಕಾರಣ. ಕಾಂಗ್ರೆಸ್ ಅವಧಿಯಲ್ಲಿ ನಡೆದ ನೇಮಕಾತಿ ಅಕ್ರಮಗಳನ್ನು ತನಿಖೆಗೆ ಒಳಪಡಿಸಿಲ್ಲವೇಕೆ‌, ಸಿದ್ದರಾಮಯ್ಯ(?) ಬಿಜೆಪಿ ಸರ್ಕಾರ ತನಿಖೆಯ ಆಳ ಇಳಿದಂತೆ ಬಿಸಿ ತಟ್ಟಿತೇ(?) ಎಂದು ಕಾಂಗ್ರೆಸ್​ಗೆ ಟಾಂಗ್​ ಕೊಟ್ಟಿದೆ.

RELATED ARTICLES

Related Articles

TRENDING ARTICLES