Monday, May 20, 2024

ಬೆಂಗಳೂರಿನಲ್ಲಿ ಎದುರಾಯಿತು ಭೀಕರ ಜಲಕ್ಷಾಮ

ಬೆಂಗಳೂರು : ರಾಜಧಾನಿಯಲ್ಲಿ ಬೇಸಿಗೆ ಧಗಧಗನೇ ಸುಡುತ್ತಿದೆ.ಭಾರಿ ಬಿಸಿಲಿನಿಂದ ಅಂತರ್ಜಲ ಮಟ್ಟ ಪಾತಾಳ ಸೇರುತ್ತಿದೆ.ನಗರದಲ್ಲಿ ತುಂಬಿ ತುಳುಕುತ್ತಿದ್ದ ಬಹುತೇಕ ಕೊಳವೆಬಾವಿಗಳ ಅಂತರ್ಜಲ ಈಗ ಬಿಸಿಲ ಬೇಗೆಯ ಪರಿಣಾಮ ಪಾತಾಳಕ್ಕೆ ಕಂಡಿದ್ದು ಜುಲೈ ಮುಗಿಯವರಿಗೆ ನೀರು ಪೂರೈಕೆ ಜಲಮಂಡಳಿಗೆ ಸವಾಲು ಆಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಅಂತರ್ಜಲ ಮಟ್ಟ ತೀರಾ ಕೆಳಮಟ್ಟಕ್ಕೆ ಕುಸಿಯುತ್ತಿದೆ.ನಗರದಲ್ಲಿ ಬಿಸಿಲಿನ ತಾಪ ಏರುತ್ತಿದ್ದು,ಕುಡಿಯುವ ನೀರಿಗೆ ಸಮಸ್ಯೆಯ ಬಿಸಿ ತಟ್ಟಲಾರಂಭಿಸಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಬಿಗಡಾಯಿಸುವ ಸಾದ್ಯತೆ ದಟ್ಟವಾಗಿದೆ.ನಗರದಲ್ಲಿ ಕೊಳವೆಬಾವಿಗಳು ಬೇಸಿಗೆ ಧಗೆಯಿಂದ ಅಂತರ್ಜಲ ಹಾವಿಯಾಗಿ ಸಂಪೂರ್ಣ ಬತ್ತಿವೆ.ಕಳೆದ ಎರಡು ಮೂರು ತಿಂಗಳಲ್ಲಿ ನೂರಾರು ಕೊಳವೆಬಾವಿಗಳ ಬತ್ತಿದ್ದು ಜುಲೈ ಮುಗಿಯವರಿಗೆ ಬೇಸಿಗೆ ಎದುರಿಸಲು ಜಲಮಂಡಳಿಗೆ ಸವಾಲು ಆಗಿ ಮಾರ್ಪಟ್ಟಿದೆ.

ಬೋರ್ ವೆಲ್ ಗಳು ಬೇಸಿಗೆ ಬಳಿಕ ಬತ್ತಿರೋ ಮಾಹಿತಿಯನ್ನ ನೀರು ಪೂರೈಸುವ ಹೊಣೆ ಹೊತ್ತಿರೋ ಜಲಮಂಡಳಿ ಅಧಿಕಾರಿಗಳೇ ಬಿಚ್ಟಿಟ್ಟಿದ್ದಾರೆ. ನಿವಾಸಿಗಳಿಗೆ ನೀರು ಪೂರೈಸುವ ಕೊಳವೆ ಬಾವಿಗಳು ಬೇಸಿಗೆಯಲ್ಲಿ ಒಂದೊಂದೇ ಬತ್ತಿ ಹೋಗ್ತಿರೋದು ಆತಂಕ ತಂದಿದೆ.ಹೀಗಾಗಿ ಮುಂದಿನ ದಿನಗಳಲ್ಲಿ ಜನ ನೀರಿಗೆ ಪರಿತಪ್ಪಿಸುವ ಸ್ಥಿತಿ ಎದುರಾಗುವ ಆತಂಕ ಕಾಡುತ್ತಿದೆ.

ಬೇಸಿಗೆ ಶುರುವಾದರೆ ಸಾಕು ಕಾವೇರಿಯಿಂದ ಪೂರೈಕೆಯಾಗುವ ನೀರಿನ ಪ್ರಮಾಣ ಕುಸಿತ ಆಗುತ್ತೆ.ಕಾವೇರಿ ಸಂಪರ್ಕ ಇರುವ ಪ್ರದೇಶದಲ್ಲೇ ನೀರಿಗೆ ಹಾಹಾಕಾರ ಕಾಣುತ್ತೆ. ಇತ್ತ ಹಣ ಕೊಟ್ಟರು ಸಮರ್ಪಕ ಟ್ಯಾಂಕರ್ ನೀರು ಸಿಗಲ್ಲ. ನಗರದ ಹಲವೆಡೆ ನಿವಾಸಿಗಳು ಬೋರ್ ಬೆಲ್ ಗಳನ್ನ ಅವಲಂಬಿಸಿದ್ದಾರೆ.ಪಾಲಿಕೆಗೆ ಸೇರ್ಪಡೆಯಾದ 110 ಹಳ್ಳಿಗಳು ಸೇರಿದಂತೆ ಕಾವೇರಿ ಸಂಪರ್ಕ ಇಲ್ಲದ ಪ್ರದೇಶದಲ್ಲಿ ಕೊಳವೆಬಾವಿಗಳೇ ಆಧಾರವಗಿದ್ದು,ಬೋರ್ ವೆಲ್ ಬತ್ತಿರೋದು ಜನರ ನಿದ್ದೆಗೆಡಿಸಿದೆ.ನಗರದೆಲ್ಲಡೆ ಅಂತರ್ಜಲ ಮಟ್ಟ ಕಡಿಮೆಯಾಗಿ ಬೋರ್ ವೆಲ್ ಗಳು ಒತ್ತಿವೆ ಅಂತ ಜಲಮಂಡಳಿ ಅಧಿಕಾರಿಗಳು ಹೇಳ್ತಾ ಇದ್ದಾರೆ.ನಗರದಲ್ಲಿ ಸುಮಾರು 9000 ಬೋರ್ ವೆಲ್ ಗಳು ಇವೆ.ಈ ಪೈಕಿ ಬೇಸಿಗೆ ಶುರುವಾದ ಬಳಿಕ ಹಲವು ಕೊಳವೆಬಾವಿಗಳು ಬತ್ತಿವೆ ಅನ್ನೋದನ್ನ ಜಲಮಂಡಳಿ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES