Sunday, May 12, 2024

KPSC SCAM : ಡಿಕೆ ಬ್ರದರ್ಸ್ ಪರ ನಿಂತ ಬಿ.ಕೆ.ಹರಿಪ್ರಸಾದ್

ಬೆಂಗಳೂರು : ಸುರೇಶ್ ಈಗ ಆಡಳಿತದಲ್ಲಿಲ್ಲ, ಇದ್ದಿದ್ದರೇ ರಾಜೀನಾಮೆ ‌ಕೊಡುತ್ತಿದ್ದರು ಎಂದು  ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಡಿಕೆ ಸೋದರರ ಬೆಂಬಲಕ್ಕೆ ನಿಂತಿದ್ದಾರೆ.

ಡಿಕೆ ಬ್ರದರ್ಸ್​ ಅಕ್ರಮದ ಬಗ್ಗೆ ಕಾಂಗ್ರೆಸ್​ ನಾಯಕ ಮೊದಲ ಪ್ರತಿಕ್ರಿಯೆ ನೀಡುವ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಬ್ರದರ್ಸ್​ ಅಕ್ರಮಕ್ಕೆ ​ಉಡಾಫೆ ಉತ್ತರ ನೀಡಿದ್ದಾರೆ. ಸುರೇಶ್ ಈಗ ಆಡಳಿತದಲ್ಲಿಲ್ಲ, ಇದ್ದಿದ್ದರೇ ರಾಜೀನಾಮೆ ‌ಕೊಡುತ್ತಿದ್ದರು ಎಂದು ಹೇಳುವ ಮೂಲಕ ಡಿಕೆ ಸೋದರರಿಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ಸುರೇಶ್ ತಪ್ಪು ಮಾಡಿದರೆ ಕ್ರಮ ತೆಗೆದುಕೊಳ್ತಾರೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ನೋಟಿಸ್ ಕೊಟ್ಟರೆ ಹಾಜರ್ ಆಗುತ್ತೇವೆ, ನಾವು‌ ಭಯಪಡುವ ನರಹೇಡಿಗಳಲ್ಲ.

ಇನ್ನು PSI ಅಕ್ರಮದಲ್ಲಿ ಗೃಹ ಸಚಿವರು, ಉನ್ನತ ಶಿಕ್ಷಣ ಸಚಿವ ಆಶ್ವಥ್ ನಾರಾಯಣ್, ಈಗ ಮಾಜಿ ಸಿಎಂ ಹೆಸರು ಕೂಡ ಬರ್ತಾ ಇದೆ. ಅವರಿಗೂ ನೋಟಿಸ್ ಕೊಡಲಿ. ಎಲ್ಲರು ಒಟ್ಟಿಗೆ ವಿಚಾರಣೆಗೆ ಹೋಗ್ತಿವಿ. ಮಿಸ್ ಬಿಜೆಪಿ ದಿವ್ಯಾ ಹಾಗರಗಿಗೆ ಹಿಜಾಬ್ ಹಾಕಿಸಿಕೊಂಡು ಕರೆತಂದಿದ್ದಾರೆ. ಆಕೆ ಕೈಯಿಂದ ಮಹಿಳಾ ಪೋಲಿಸರು ಮುಟ್ಟಿಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಏಕೆ ಎಂದು ಮಲ್ಲೇಶ್ವರಂನಲ್ಲಿ ಎಲ್ಲರು ಮಾತನಾಡುತ್ತಾರೆ  ಎಂದರು.

ಅದುವಲ್ಲದೇ ಚುನಾವಣೆ ವರ್ಷ ಅಂತಾ ನಾವು ಆರೋಪ ಮಾಡ್ತಾ ಇಲ್ಲ. ಮತ್ತು ಇವರು ತರ ನಾವು ಬಾಂಬೆಗೆ ಹೋಗಿಲ್ಲ. ಇವರು ಬಾಂಬೆಯಲ್ಲಿ ಇದ್ದ ಹೋಟೆಲ್ ಖರ್ಚೇ ಕೋಟ್ಯಾಂತರ ಆಗಿದೆ. ಇದಕ್ಕಾಗಿ ಭ್ರಷ್ಟಾಚಾರ ಮಾಡ್ತಾ ಇದಾರೆ ಎಂದು ಕಿಡಿಕಾರಿದರು.

ಇನ್ನು ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡದೇ ಇರುವುದೇ ಒಳ್ಳೆಯದು ಎಂದು ವ್ಯಂಗ್ಯವಾಡಿದರು.

RELATED ARTICLES

Related Articles

TRENDING ARTICLES