Monday, December 23, 2024

PSI ಅಕ್ರಮ : ಸಂಚಲನ ಸೃಷ್ಠಿಸಿದ ಹೆಚ್​ಡಿಕೆ ಹೇಳಿಕೆ

ರಾಮನಗರ : ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿದೆ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ PSI ನೇಮಕಾತಿ ಪ್ರಕರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, PSI ಹಗರಣದ ವಿಚಾರವಾಗಿ ಹೊಸ ಬಾಂಬ್ ಸಿಡಿಸಿದ್ದಾರೆ. ಈ ವಿಚಾರವಾಗಿ ನನಗಿರುವ ಮಾಹಿತಿಯೇ ಬೇರೆಯಾಗಿದೆ. ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿದೆ. ಚಾಮರಾಜಪೇಟೆಯಲ್ಲಿ ನಡೆದ ಘಟನೆಗೂ ಇದಕ್ಕೂ ದೊಡ್ಡ ಕಥೆಯೇ ಇದೆ. ಕಾಂಗ್ರೆಸ್ ನಾಯಕರ ಬಳಿ ದಾಖಲೆ ಎಲ್ಲಿದೆ ? ಅಶ್ವಥ್ ನಾರಾಯಣ ವಿರುದ್ಧ ದಾಖಲೆ ಎಲ್ಲಿದೆ ? ಎಂದು ವಾಗ್ದಾಳಿ ನಡೆಸಿದ್ದಾರೆ.

ಅದುವಲ್ಲದೇ ಬಿಜೆಪಿಯ ಒಬ್ಬ ವಕ್ತಾರ ನಿಷ್ಠಾವಂತ ಪೊಲೀಸ್ ಅಧಿಕಾರಿ ಕಮಲ್ ಪಂಥ್ ವಿರುದ್ಧ ಚಾಮರಾಜಪೇಟೆಯಲ್ಲಿ ನಡೆದ ಕೊಲೆಯ ವಿಚಾರವಾಗಿ ಆರೋಪ ಮಾಡಿದ್ದರು. ಪೊಲೀಸ್ ಇಲಾಖೆ ಆಕ್ಸಿಡೆಂಟ್ ಎಂದು ಹೇಳಿತ್ತು. ಆದರೆ, ಬಿಜೆಪಿ ನಾಯಕರು ಉರ್ದು ವಿಚಾರವಾಗಿ ಗಲಾಟೆಯಾಗಿ ಕೊಲೆಯಾಯ್ತು ಎಂದು ಕಥೆ ಕಟ್ಟಿದ್ದರು. ಅಲ್ಲಿಂದ PSI ವಿಚಾರವಾಗಿ ಲಿಂಕ್ ಹೋಯ್ತು. ಆ ವ್ಯಕ್ತಿಗೆ ಈಗ ಕಲಬುರ್ಗಿಯಲ್ಲಿ ಅರೆಸ್ಟ್ ಆಗಿರುವವರ ಲಿಂಕ್ ಇತ್ತು. ಅದಕ್ಕಾಗಿ ಈಗ PSI ಹಗರಣ ಫಿಕ್ಸ್ ಆಗಿದೆ, ಇದರ ಬಗ್ಗೆ ದೊಡ್ಡ ಕಥೆ ಇದೆ.

ಪೊಲೀಸ್ ಇಲಾಖೆಯ ಪ್ರಾಮಾಣಿಕ ಅಧಿಕಾರಿ ಕಮಲ್ ಪಂಥ್​​ಗೆ ಬಿಜೆಪಿ ನಾಯಕರು ಅವಮಾನ‌ ಮಾಡಿದ್ದರು. ಅದಕ್ಕಾಗಿ ಅವರ ಅಭಿಮಾನಿಗಳು ಸರ್ಕಾರಕ್ಕೆ ಬುದ್ಧಿ ಕಲಿಸಲು ಈ ಹಗರಣವನ್ನು ಅವರೇ ಹೊರತೆಗೆದಿದ್ದಾರೆ, ಇದು ಸರ್ಕಾರದಿಂದ ಹೊರಬಂದಿಲ್ಲ
ಪೊಲೀಸ್ ಇಲಾಖೆಯಿಂದಲೇ ಇದು ಹೊರಬಂದಿದೆ. ಈ ಸರ್ಕಾರದ ನಡವಳಿಕೆ ವಿರುದ್ಧ ಇಲಾಖೆಯವರೇ ಹೊರತೆಗೆದಿದ್ದಾರೆ ಎಂದರು.

ಇನ್ನು ಪಿಎಸ್​​ಐ ಪ್ರಕರಣದಲ್ಲಿ ಎಲ್ಲಾ ಅಭ್ಯರ್ಥಿಗಳು ದುಡ್ಡು ಕೊಟ್ಟು ಅಗಿದ್ದಾರೆ ಎನ್ನಲು ಆಗಲ್ಲ, 30% ದುಡ್ಡು ಕೊಟ್ಟು ಆಗಿರಬಹುದು. 30 – 40 % ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರಬಹುದು ಎಂದು ಪ್ರತಿಕ್ರಿಯಿಸಿದರು.

 

RELATED ARTICLES

Related Articles

TRENDING ARTICLES