Monday, December 23, 2024

ಸಚಿವ ಸಿ.ಎನ್​​​ ಅಶ್ವತ್ಥ್‌ ನಾರಾಯಣ್​​ ಕಡು ಭ್ರಷ್ಟ : ಡಿ ಕೆ ಶಿವಕುಮಾರ್​​

ರಾಮನಗರ : ಅಶ್ವಥ್ ನಾರಾಯಣ್​​​ one of the most corrupted minister of Karnataka politics ಅದರಲ್ಲಿ ಅನುಮಾನವೇ ಇಲ್ಲ ಎಂದು ಕನಕಪುರದ ದೊಡ್ಡಾಲಹಳ್ಳಿ ಗ್ರಾಮದಲ್ಲಿ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶ್ವಥ್ ನಾರಾಯಣ ಅತ್ಯಂತ ಭ್ರಷ್ಟಾಧಿಕಾರಿ. ಆದರೆ ಅವರು ನಾನು ಬ್ರಾಹ್ಮಣನ ತರ ಇದ್ದೀನಿ , ಶುದ್ಧ ರಾಜಕಾರಣಿ ಇದೆಲ್ಲ ಯಾಕೆ ಬೇಕು. ಅವರ ಮಾತುಗಳನ್ನ ನೋಡಿದ್ರೆ ಯಾರು ಸಂಸ್ಕೃತಿ ಇರೋರು ಈ ರೀತಿ ಮಾತನಾಡಲ್ಲ. ನಾವು ಯಾರನ್ನು ಟಾರ್ಗೆಟ್ ಮಾಡಿಲ್ಲ, ಜಿಲ್ಲೆಯಲ್ಲಿ ನಡೆದ ಅನಾಹುತಕ್ಕೆ ಇದು ಸತ್ಯ. ಬಿಚ್ಚುತ್ತೀನಿ ಅಂದಿದ್ದಾರೆ, ಎಲ್ಲವನ್ನು ಬಿಚ್ಚಲಿ, ಯಾರು ಬೇಡ ಅಂತಾರೆ, ನನಗೆ ಏನು ಬೇಕಾದರೂ ಮಾಡಲಿ, ಎದುರಿಸಲು ಸಿದ್ಧರಾಗಿದ್ದೇವೆ ಶಿಕ್ಷೆ ಕೊಟ್ಟರು ಅನುಭವಿಸಲು ಸಿದ್ಧರಿದ್ದೇವೆ ಎಂದರು.

ಇನ್ನು ಬಿಜೆಪಿಯ ಕೆಲವರು ನಮ್ಮ ಜೊತೆ ಮಾತನಾಡಿದ್ದಾರೆ . ಅದನ್ನೆಲ್ಲ ಹೇಳಲು ಆಗಲ್ಲ. ನನಗೆ ಸಾಮಾನ್ಯವಾಗಿ ಹತ್ತಿರ ಇರೋರೆ ಮಾಹಿತಿ ಕೊಡೋದು. ಇದೊಂದೇ ಇಲಾಖೆ ಅಲ್ಲ, ಶಿಕ್ಷಣ ಇಲಾಖೆ, ಕೆಪಿಎಸ್ಸಿಯಲ್ಲೂ ಅಕ್ರಮ ಆಗಿದೆ. ಇದರ ಬಗ್ಗೆ ಬೊಮ್ಮಾಯಿಯವರು ಯಾಕೆ ಕೇಸ್ ದಾಖಲಿಸಿಲ್ಲ ? ಎಸಿಬಿಗೆ ದೂರು ನೀಡಿ FIR ಮಾಡಬೇಕಿತ್ತು ?ಅವರನ್ನು ವಿಚಾರಣೆ ಮಾಡಬೇಕಿತ್ತು, ಯಾಕೆ ಮಾಡಿಲ್ಲ ? ಗೌವರ್ನರ್, ಮುಖ್ಯಕಾರ್ಯದರ್ಶಿ ಯಾಕೆ ಸುಮ್ಮನ್ನಿದ್ದಾರೆ ? ಎಂದು ಪ್ರಶ್ನೆ ಮಾಡಿದರು.

ಅದುವಲ್ಲದೇ 40 % ವಿಚಾರವಾಗಿ ಎಷ್ಟೋ ಡೆತ್ ನೋಟ್ ಗಳು ಬರುತ್ತಿವೆ ನಮ್ಮ ಬಳಿ ಒಂದೊಂದಾಗಿಯೇ ತೆಗೆದುಕೊಳ್ತೇವೆ. ದೇವೆಗೌಡರು, ಕುಮಾರಸ್ವಾಮಿ ಕ್ಲೀನ್ ಮಾಡ್ತೀವಿ ಅಂತಾ ಬಂದ್ರೂ, ಈಗ ಅಶ್ವಥ್ ನಾರಾಯಣ ಬಂದಿದ್ದಾರೆ ಮಾಡಲಿ. ಭ್ರಷ್ಟಾಚಾರ ಬಿಜೆಪಿ ಕಾಲದಲ್ಲಿ ಪ್ರತಿ ತಾಲೂಕಿನಲ್ಲೂ ತಾಂಡವ ಆಡುತ್ತಿದೆ ಎಂದು ಕಿಡಿಕಾರಿದರು.

ರಾಮನಗರದಲ್ಲಿ ಯಾರಾದರೂ ಗಂಡಸರು ಇದ್ದಾರ ಅಂತಾ ಕೇಳಿದರು. ಸಿಎಂ ಇದ್ದರೂ, ಸಚಿವರು ಇದ್ದರೂ ಅವರು ಹೇಳಬೇಕು ಯಾರು ಗಂಡಸರು ಅಂತಾ ?ನಾವೆಲ್ಲರೂ ಹೆಂಗಸರು, ಸೀರೆ ಕೊಟ್ಟರೆ ಉಟ್ಕೋತ್ತೀವಿ. ಇವರಿಗೆಲ್ಲ ನಾವು ಟೆಸ್ಟ್ ಮಾಡಿಸಬೇಕು ಎಂದು ಕಾರ್ಯಕರ್ತರಿಗೆ ಕೈ ತೋರಿಸಿ ಹೇಳಿದರು.

RELATED ARTICLES

Related Articles

TRENDING ARTICLES