Wednesday, January 22, 2025

4ನೇ ರ‍್ಯಾಂಕ್‌​ನವರನ್ನ ಬಿಟ್ಟಿದೀರಲ್ಲ ಇದು ಸರಿನಾ?: ಡಿಕೆಶಿ ಪ್ರಶ್ನೆ

ರಾಮನಗರ : ನಾಲ್ಕನೇ ರ್ಯಾಂಕ್​​ನವರನ್ನ ಬಿಟ್ಟಿದೀರಲ್ಲ ಇದು ಸರಿನಾ?? ಎಂದು ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.

ಇಂದು ಪಿಎಸ್‌ಐ ಅಕ್ರಮದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರ ಹಿನ್ನೆಲೆ ಮಾತನಾಡಿದ ಅವರು, ಪಿಎಸ್‌ಐ ಅಕ್ರಮದ ಆಂತರಿಕ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಅವರು ಈ ಹಿಂದೆ ಪ್ರಮುಖವಾದ ಸ್ಥಾನದಲ್ಲಿದ್ದರೂ. ಹೀಗಾಗಿ ಒಂದು ವೇಳೆ ಹಿರಿಯ ಅಧಿಕಾರಿಗಳು ಅವರಿಗೆ ತಿಳಿಸಿರಬಹುದು. ಆದ್ರೆ ನಡೆದ ಹಗರಣವನ್ನ ಯಾರಾದ್ರೂ ಮುಚ್ಚಿಹಾಕಲು ಸಾಧ್ಯನಾ.? ಕೇವಲ ಸರ್ಕಾರದ ಪ್ರಭಾವದಿಂದ ಮುಚ್ಚಿಹಾಕಬಹುದು ಎಂದು ಹೇಳಿದರು.

ಇನ್ನು ನಮ್ಮ ಜಿಲ್ಲೆಯಲ್ಲಿ ಮೂರ ಜನರಲ್ಲಿ ಮೊದಲ ರ್ಯಾಂಕ್ ಪಡೆದಿರುವವರು ಇದ್ದಾರೆ. ಅವರು ಕೂಡ ಈಗ ಒಳ ಹೋಗಿದ್ದಾರೆ. ಅವರೆಲ್ಲಾ ನಮಗೆ ಬೇಕಾದ ಹುಡುಗರೇ, ಅವರಿಗೆ ಸಹಾಯವನ್ನ ಮಂತ್ರಿ ಕುಟುಂಬದವರೋ ಅಥವಾ ಇನ್ನ್ಯಾರೋ, ಯಾವ ರೀತಿ ಸಹಾಯ ಮಾಡಿದ್ದಾರೋ ಗೊತ್ತಿಲ್ಲ. ನಾನು ಅವರ ಊರಿನ ಅಕ್ಕಪಕ್ಕದಲ್ಲಿ ಚೆಕ್ ಮಾಡಿದ್ದೇನೆ. ಪ್ರಭಾವಿ ರಾಜಕಾರಣಿಗಳು ತಿಳಿಸಿರುವುದರಿಂದ ಅವರು ಹೀಗೆ ಮಾಡಿದ್ದಾರೆ. ಅಲ್ಲದೆ ಈಗ ಮನೆ, ಆಸ್ತಿ ಮಾರಿ ಸಾಲ ಮಾಡಿ ಪ್ರಯತ್ನ ಮಾಡಿ ಈಗ ತಗಲಾಕಿಕೊಂಡಿದ್ದಾರೆ ಎಂದರು.

ಇನ್ನು ಲಂಚ ಕೊಟ್ಟೆ ಅಂತಾ ಯಾರು ಹೇಳೋದಿಲ್ಲ, ಇಸ್ಕೊಂಡೋನು ಯಾರು ಇಸ್ಕೊಂಡೆ ಅಂತ ಹೇಳಲ್ಲ. ಆ ಹುಡುಗರಿಗೆ ನೋಟಿಸ್ ಕೊಟ್ಟು ಪ್ರಭಾವಿ ಮಂತ್ರಿ ಕಡೆಯವರು ಹೇಳಿದ್ದಾನೆ ಅಂತ ನೀವು ವಾಪಸ್ ಕಳ್ಸಿದ್ದೀರಲ್ಲ. ನೀವು ಯಾರನ್ನ, ಹೇಗೆ, ಎಲ್ಲಿ ತನಿಖೆ ಮಾಡಿದ್ದೀರಾ ? ಮೊದಲನೇ ರ್ಯಾಂಕ್‌ನವರನ್ನ ಒಳಗೆ ಹಾಕಿಕೊಂಡಿದ್ದೀರಾ ಎಂದು ಕಿಡಿಕಾರಿದರು.

RELATED ARTICLES

Related Articles

TRENDING ARTICLES