Monday, December 23, 2024

‘ಬೈರಾಗಿ’ ಶಿವಣ್ಣನ ನೆಕ್ಸ್ಟ್ ಲೆವೆಲ್​ ಡ್ಯಾನ್ಸ್​ಗೆ ಭೀಮ ಬೋಲ್ಡ್

ಎನರ್ಜಿ ಹೌಸ್​ಗೆ ಕೇರ್ ಆಫ್ ಅಡ್ರೆಸ್ ಅಂದ್ರೆ ಅದು ಒನ್ ಅಂಡ್ ಓನ್ಲಿ ಕರುನಾಡ ಚಕ್ರವರ್ತಿ ಡಾ ಶಿವರಾಜ್​ಕುಮಾರ್. ಡ್ಯಾನ್ಸ್​ನಲ್ಲೂ ಶಿವಣ್ಣ ನಾಟ್ಯಸಾರ್ವಭೌಮ. ಇವ್ರು ಸ್ಟೆಪ್ ಹಾಕೋದನ್ನ ಯಾರಾದ್ರು ನೋಡಿದ್ರೆ ಮೈಕೈ ಕುಣಿಯುವಂತೆ ಮಾಡುತ್ತೆ. ಸದ್ಯ ಬೈರಾಗಿಗಾಗಿ ಅಂಥದ್ದೊಂದು ಡ್ಯಾನ್ಸಿಂಗ್ ನಂಬರ್ ಮಾಡಿದ್ದಾರೆ. ಅದಕ್ಕೆ ಸ್ಯಾಂಡಲ್​ವುಡ್ ಭೀಮ ಬೋಲ್ಡ್ ಆಗಿರೋದು ಇಂಪ್ರೆಸ್ಸೀವ್.

ಎಲ್ಲೆಲ್ಲೂ ‘ಶಿವಪ್ಪ ಕಾಯಿ ತಂದೆ.. ಪೂಜೆಗೆ ಮಾಲೆ ತಂದೆ’ :

ಇದು ರೀಸೆಂಟ್ ಆಗಿ ರಿಲೀಸ್ ಆದ ಬೈರಾಗಿ ಚಿತ್ರದ ನಕರನಖಾ ಸಾಂಗ್​ನ ಲಿರಿಕಲ್ ವಿಡಿಯೋ ಝಲಕ್. ಸ್ಯಾಂಡಲ್​ವುಡ್ ಕಿಂಗ್ ಡಾ. ಶಿವರಾಜ್​ಕುಮಾರ್​ ಟಪ್ಪಾಂಗುಚ್ಚಿ ಸ್ಟೈಲ್​ನಲ್ಲಿ ಸ್ಟೆಪ್ ಹಾಕಿರೋ ಪಕ್ಕಅ ಲೋಕಲ್ ಬೀಟ್ಸ್ ಇರೋ ಮಾದಪ್ಪನ ಸಾಂಗ್.

ಶಿವಪ್ಪ ಕಾಯಿ ತಂದೆ, ಪೂಜೆಗೆ ಮಾಲೆ ತಂದೆ ಅನ್ನೋ ಅರ್ಥಪೂರ್ಣ ಸಾಲುಗಳಿಗೆ ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಪೋಣಿಸಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಟಗರು ಟೈಟಲ್ ಟ್ರ್ಯಾಕ್ ಸಿಂಗರ್ ಆಂಟೋನಿ ದಾಸನ್ ಈ ಹಾಡನ್ನ ಹಾಡಿದ್ದು, ಅದ್ರ ಗಮ್ಮತ್ತು ಮತ್ತಷ್ಟು ಹೆಚ್ಚಿದೆ.

ಸ್ಯಾಂಡಲ್​ವುಡ್ ಕಿಂಗ್​ನ ಕೊಂಡಾಡಿದ ದುನಿಯಾ ವಿಜಿ..! : 

ಟಗರು ನಂತ್ರ ಶಿವಣ್ಣ- ಡಾಲಿ ಕಾಂನಿನೇಷನ್​ನಲ್ಲಿ ಮೂಡಿಬರ್ತಿರೋ ಬೈರಾಗಿ ಪಾತ್ರಗಳು, ಕಥೆ, ಮೇಕಿಂಗ್ ಹಾಗೂ ಕಾಸ್ಟ್ಯೂಮ್ಸ್​ ಹೀಗೆ ಎಲ್ಲಾ ವಿಷಯಗಳಿಂದ ಸಖತ್ ಡಿಫರೆಂಟ್ ಅನಿಸಿಕೊಂಡಿದೆ. ಅದ್ರಲ್ಲೂ ಸಿನಿಮಾಟೋಗ್ರಫರ್ ಕಮ್ ಡೈರೆಕ್ಟರ್ ವಿಜಯ್ ಮಿಲ್ಟನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದು, ಯಂಗೆಸ್ಟ್ ಪ್ರೊಡ್ಯೂಸರ್ ಕೃಷ್ಣ ಸಾರ್ಥಕ್ ಬಂಡವಾಳ ಹಾಕಿದ್ದಾರೆ.

ಕನ್ನಡದ ಅಟ್ಟಹಾಸ, ಪೊಗರು ಚಿತ್ರಗಳಿಗೆ ಕ್ಯಾಮೆರಾ ಕೈಚಳಕ ತೋರಿಸಿದ್ದ ಗೋಲಿಸೋಡಾ ಡೈರೆಕ್ಟರ್ ವಿಜಯ್ ಮಿಲ್ಟನ್, ಇದನ್ನ ಕಲ್ಟ್ ಕ್ಲಾಸಿಕ್ ಮೂವಿ ಆಗಿಸಲು ಎಫರ್ಟ್​ ಹಾಕಿದ್ದಾರೆ. ಟೀಸರ್ ಸ್ಯಾಂಪಲ್ಸ್​ನಲ್ಲಿ ಅದ್ರ ಅಸಲಿಯತ್ತು ಗೊತ್ತಾಗ್ತಿದ್ದು, ಶಿವಣ್ಣ- ಡಾಲಿ ಕ್ಯಾರೆಕ್ಟರ್​ಗಳೇ ಚಿತ್ರಕ್ಕೆ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿವೆ.

ವಿಜಯ್ ಮಿಲ್ಟನ್ ಸಾರಥ್ಯದಲ್ಲಿ ನಾಡಹುಲಿ ಶಿವಣ್ಣ ಎಂಟ್ರಿ :

ಟೆಂಪಲ್ ಬ್ಯಾಗ್ರೌಂಡ್​​ನಲ್ಲಿ ಶಿವನ ಆರಾಧಿಸೋ ಅಂತಹ ಈ ಡ್ಯಾನ್ಸಿಂಗ್ ನಂಬರ್​​ಗೆ ಅನೂಪ್ ಸೀಳಿನ್ ಬಹಳ ವೆರೈಟಿ ಬೀಟ್ಸ್ ನೀಡೋ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಚರಣ್ ರಾಜ್ ಫ್ಲೇವರ್​ನ ಮ್ಯೂಸಿಕ್ ಇದಾಗಿದ್ದು, ಈ ಹಾಡನ್ನ ಸ್ಯಾಂಡಲ್​ವುಡ್ ಭೀಮ ದುನಿಯಾ ವಿಜಯ್ ಲಾಂಚ್ ಮಾಡಿ ಶುಭ ಕೋರಿದ್ದಾರೆ.

ಮುರಳಿ ಮಾಸ್ಟರ್ ಕೊರಿಯೋಗ್ರಫಿ ಇರೋ ಈ ಹಾಡಿಗೆ ವಿಜಯ್ ಮಿಲ್ಟನ್ ಅವ್ರೇ ಕ್ಯಾಮೆರಾದಲ್ಲಿ ಸೆರೆಹಿಡಿದಿರೋದು ವಿಶೇಷ. ಒಟ್ಟಾರೆ ಶಿವಣ್ಣ- ಡಾಲಿಯ ಸೂಪರ್ ಕಾಂಬೋನ ಮತ್ತೊಮ್ಮೆ ಕಣ್ತುಂಬಿಕೊಳ್ಳೋಕೆ ಪ್ರೇಕ್ಷಕರು ಬಹಳ ಕಾತರದಿಂದ ಕಾಯ್ತಿದ್ದು, ಇನ್ನು ಒಂದೊಂದೇ ಸಾಂಗ್ ಹೊರಬರಲಿವೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES