Monday, December 23, 2024

ರಿಲೀಸ್ ಆಗ್ತಿದೆ ಅಪ್ಪು ಆಶಯದ ಮ್ಯಾನ್ ಆಫ್ ದಿ ಮ್ಯಾಚ್

ಹಾಲು- ಜೇನು ಕಥೆಯಂತಹ ಸಿನಿಮಾ ಕನಸು ಕಂಡಿದ್ದ ಅಪ್ಪು

ಅಣ್ಣಾವ್ರ ಹಾಲು-ಜೇನು ಕಥೆಯಂತಹ ಸಿನಿಮಾವೊಂದು ಮಾಡಲು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯ ಪ್ರಕಾಶ್ ಬಳಿ ಹೇಳಿಕೊಂಡಿದ್ರು ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್. ಆದ್ರೆ ಅದಕ್ಕೂ ಮುನ್ನ ಮ್ಯಾನ್ ಆಫ್ ದಿ ಮ್ಯಾಚ್​ ಕೇಳಿ ಅಪ್ಪು ಹಣ ಹೂಡೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ರು. ಅದ್ರ ಟ್ರೈಲರ್ ರಿಲೀಸ್ ಆಗಿದ್ದು, ಒಟಿಟಿಗೆ ಲಗ್ಗೆ ಇಡ್ತಿದೆ ಸಿನಿಮಾ.

ಚಿತ್ರರಂಗದಲ್ಲಿ ಹೊಸ ಜಾನರ್​ಗೆ ನಾಂದಿ ಹಾಡಿದ ಸತ್ಯ ಪ್ರಕಾಶ್:

ಇದು ಒಟಿಟಿಯಲ್ಲಿ ರಿಲೀಸ್​ ಆಗ್ತಿರೋ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರದ ಟ್ರೈಲರ್. ರೀಸೆಂಟ್ ಆಗಿ ಈ ಟ್ರೈಲರ್ ರಿಲೀಸ್ ಆಗಿದ್ದು, ದಿವಂಗತ ಪುನೀತ್ ರಾಜ್​ಕುಮಾರ್ ನಿರ್ಮಾಣದಲ್ಲಿ ತಯಾರಾದ ಅವ್ರ ಕನಸಿನ ಕೂಸು ಕೂಡ ಹೌದು. ರಾಮಾ ರಾಮಾ ರೇ ಚಿತ್ರದ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ಈ ಸಿನಿಮಾಗೆ ಌಕ್ಷನ್ ಕಟ್ ಹೇಳಿದ್ದು, ಒಂದು ವಿಶಿಷ್ಟ ಬಗೆಯ ಜಾನರ್​ಗೆ ನಾಂದಿ ಹಾಡೋ ಮನ್ಸೂಚನೆ ನೀಡಿದೆ.

ಹಾಲು- ಜೇನು ಸಿನಿಮಾ ಎಷ್ಟೇ ದಶಕಗಳು ಕಳೆದ್ರೂ ಎವರ್​ಗ್ರೀನ್. ಕಾರಣ ಚಿತ್ರದ ಕಥೆ, ಪಾತ್ರಗಳು ಹಾಗೂ ಮಾಧುರ್ಯಭರಿತ ಸಂಗೀತ. ಪುನೀತ್ ಕೂಡ ಅಣ್ಣಾವ್ರ ಹಾಲು- ಜೇನು ಕಥೆಯಂತಹ ಸಿನಿಮಾ ಮಾಡಲು ನ್ಯಾಷನಲ್ ಅವಾರ್ಡ್​ ಪಡೆದ ಡೈರೆಕ್ಟರ್ ಸತ್ಯ ಪ್ರಕಾಶ್​​ರಿಗೆ ಹೇಳ್ತಾರೆ. ಆದ್ರೆ ಸತ್ಯ ಪ್ರಕಾಶ್ ಎಷ್ಟು ಪ್ರಯತ್ನ ಪಟ್ರೂ ಅದು ಸಾಕಾರವಾಗಲಿಲ್ಲ. ಕೊನೆಗೆ ಅದಕ್ಕೂ ಮುನ್ನ ಹೊಳೆದ ಒಂದು ಲೈನ್​ ಕಥೆಯನ್ನ ಅಪ್ಪು ಮೆಚ್ಚಿ, ಅದಕ್ಕೆ ಹಣ ಹೂಡಲು ಅವ್ರೇ ಸ್ವತಃ ಮುಂದಾಗ್ತಾರೆ.

ಟ್ರೈಲರ್ ಸೂಪರ್.. ಸಿನಿಮಾ ಕಣ್ತುಂಬಿಕೊಳ್ಳೋಕೆ  ವೆಯ್ಟಿಂಗ್ :

ಕಡಿಮೆ ಬಜೆಟ್, ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ಸಿನಿಮಾನ ಖುದ್ದು ಪುನೀತ್ ಅವ್ರೇ ಪ್ರೀತಿಯಿಂದ ತಮ್ಮ ಪಿಆರ್​ಕೆ ಬ್ಯಾನರ್​ನಡಿ ನಿರ್ಮಿಸಲು ಗ್ರೀನ್ ಸಿಗ್ನಲ್ ಕೊಡ್ತಾರೆ. ಆದ್ರೆ ಇಂದು ಅಪ್ಪು ನಮ್ಮೊಂದಿಗಿಲ್ಲ. ಆದ್ರೆ ಅವ್ರು ಓಕೆ ಮಾಡಿದ ಸ್ಕ್ರಿಪ್ಟ್, ಸಿನಿಮಾ ರೂಪದಲ್ಲಿ ನಮ್ಮ ಮುಂದಿದೆ.

ರಾಮಾ ರಾಮಾ ರೇ ಚಿತ್ರದ ನಾಯಕ ದೀಪಕ್ ಈ ಚಿತ್ರದ ನಾಯಕನಟ. ಇನ್ನು ಧರ್ಮಣ್ಣ ಹಾಸ್ಯನ ಹೊನಲು ಹರಿಸಲಿದ್ದಾರೆ. ವೀಣಾ ಸುಂದರ್ ದಂಪತಿ ಪೋಷಕ ಪಾತ್ರಗಳಲ್ಲಿ ನೋಡುಗರಿಗೆ ಫ್ರೆಶ್ ಫೀಲ್ ಕೊಡಲಿದೆ. ಸಿನಿಮಾ ಆಡಿಷನ್ಸ್​ಗೆ ಬರೋರಿಗೆ ಡೈರೆಕ್ಟರ್ ಏನೆಲ್ಲಾ ಮಾಡ್ತಾನೆ ಅನ್ನೋದೇ ಈ ಚಿತ್ರದ ಅಸಲಿ ಕಥೆ. ನೋಡೋಕೆ ಬಹಳ ಸಹಜ ಹಾಗೂ ಸ್ವಾಭಾವಿಕವಾಗಿ ಮೂಡಿಬಂದಿದ್ದು, ಟ್ರೈಲರ್​ಗೆ ಎಲ್ಲೆಡೆಯಿಂದ ಉತ್ತಮ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ಬರ್ತಿವೆ.

ವಾಸುಕಿ ವೈಭವ್, ಅಥರ್ವ ಪ್ರಕಾಶ್, ಮಯೂರಿ ನಟರಾಜ್, ಬೃಂದಾ ವಿಕ್ರಮ್, ಶ್ರೀ ದತ್ತ, ಮಂಜುನಾಥ ಹೀಗೆ ದೊಡ್ಡ ತಾರಾಗಣವಿರೋ ಈ ಸಿನಿಮಾ ಹತ್ತು ಹಲವು ವಿಶೇಷತೆಗಳಿಂದ ನೋಡುಗರ ತಲೆಗೆ ಹುಳ ಬಿಡ್ತಿದೆ. ಅಶ್ವಿನಿ ಪುನೀತ್ ರಾಜ್​ಕುಮಾರ್ ಅವ್ರೇ ಸದ್ಯ ಈ ಸಿನಿಮಾದ ಒಟಿಟಿ ರಿಲೀಸ್ ಉಸ್ತುವಾರಿ ವಹಿಸಿಕೊಂಡಿದ್ದು, ಈ ವಾರ ಅಮೆಜಾನ್ ಪ್ರೈಮ್​​​ಗೆ ಲಗ್ಗೆ ಇಡ್ತಿದೆ. ಇದು ನೋಡುಗರಿಗೆ ರುಚಿಸುತ್ತಾ ಇಲ್ವಾ ಅನ್ನೋದು ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES