Wednesday, January 22, 2025

‘ಹಗಲು ಕನಸು ಕಾಣಬೇಡಿ’ ಎಂದು ಸ್ವಪಕ್ಷದವರಿಗೆ ಟಾಂಗ್​​ ನೀಡಿದ ಆರ್.ಅಶೋಕ್

ಬೆಂಗಳೂರು: ಇಂದು ಬಸವ ಜಯಂತಿ ಜೊತೆಗೆ ಇವತ್ತು ಬಿಜೆಪಿಗೆ ಸಿಹಿ ಸಿಕ್ಕಿದೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾತನಾಡಿದ ಅವರು, ನಾಯಕತ್ವದ ಪ್ರಶ್ನೆ ಮಾಧ್ಯಮದಲ್ಲಿ ಬಂದಿದೆ ಅಷ್ಟೇ. ಬಿಜೆಪಿ ಕೇಂದ್ರದ ಸಹಕಾರ ಸಂಪೂರ್ಣವಾಗಿ ಸಿಎಂ ಬೊಮ್ಮಾಯಿ ಮೇಲಿದೆ. ಯಾರು ಕೂಡ ಹಗಲು ಕನಸು ಕಾಣಬೇಡಿ, ಬಿಸಿಲು ಕುದುರೆ ಹಿಂದೆ ಹೋಗಬೇಡಿ. ಅವರ ನೇತೃತ್ವದಲ್ಲೇ ಮುಂದಿನ ಕರ್ನಾಟಕ ಚುನಾವಣೆ 2023 ಎದುರಿಸುತ್ತೇವೆಂದು ಸ್ವಪಕ್ಷದವರಿಗೆ ಟಾಂಗ್ ನೀಡಿದ್ದಾರೆ.

ಇನ್ನು ಇದೇ ವೇಳೆ ಜೆಡಿಎಸ್​ ಪಕ್ಷದ ವಿಧಾನ ಪರಿಷತ್ ಸಭಾಪತಿಯೂ ಮತ್ತು ಜೆಡಿಎಸ್ ನಾಯಕರು ಆಗಿರುವ ಬಸವರಾಜ್ ಹೊರಟ್ಟಿ ಅವರು ಬಿಜೆಪಿ ಸೇರುವ ಮನಸ್ಸು ಮಾಡಿದ್ದಾರೆ. ಇಡೀ ಕರ್ನಾಟಕದಲ್ಲಿ ವರ್ಚಸ್ಸು ಬಿಜೆಪಿಗೆ ಬರುತ್ತದೆ. ಸಜ್ಜನ ಸರಳಿಕೆ ಇರುವಂತಹ ವ್ಯಕ್ತಿ. 2023 ರ ಪರ್ವ ಈಗ ಬಿಜೆಪಿಯಲ್ಲಿ ಶುರುವಾಗಿದೆ ಎಂದು ಅಶೋಕ್ ಪ್ರತಿಕ್ರಿಯಿಸಿದರು.

RELATED ARTICLES

Related Articles

TRENDING ARTICLES