Wednesday, January 22, 2025

ಎಂಟಿಬಿ ಕೆಟ್ಟ ವಿಚಾರದವರಲ್ಲ : ಯತ್ನಾಳ್

ವಿಜಯಪುರ : ಎಂಟಿಬಿ ನಾಗರಾಜ್ ಒಬ್ಬ ಒಳ್ಳೆಯ ಮನುಷ್ಯ, ಸಾತ್ವಿಕ ಮನುಷ್ಯರಾಗಿದ್ದಾರೆ ಎಂದು ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್ ಅವರನ್ನು ಹೊಗಳಿದ್ದಾರೆ.

ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಇಂದು ಬೆಂಗಳೂರಿಗೆ ಆಗಮಿಸಿರುವ ಹಿನ್ನೆಲೆ ಮಾತನಾಡಿದ ಅವರು, ಸರ್ಕಾರ ರಚನೆಯಲ್ಲಿ ಎಂಟಿಬಿ ಅವರ ಪಾತ್ರ ಮಹತ್ವದಾಗಿದೆ ಹಾಗು ದೊಡ್ಡ ಕೊಡುಗೆಯು ಇದೆ. ಅಲ್ಲದೇ ಎಲ್ಲ ರೀತಿಯಿಂದ ಪಕ್ಷಕ್ಕೆ ತುಂಬಾ ಸಹಾಯ ಮಾಡಿದ್ದಾರೆ ಎಂದರು.

ಅದುವಲ್ಲದೇ ಆಫರೇಶನ್​​ನಲ್ಲಿ ತನು, ಮನ, ಧನದಿಂದ‌ ಸಹಾಯ ಮಾಡಿದ್ದಾರೆ. ಪಕ್ಷದ ಹಿರಿಯರು ಗೌರವದಿಂದ ಕಾಣುತ್ತಾರೆ ಎಂಬ ವಿಶ್ವಾಸವಿದೆ. ಆಧರೆ, ಎಂಟಿಬಿಗೆ ನೋವಿದೆ, ಅವರಿಗೆ ಹೆಚ್ಡಿಕೆ ಸರ್ಕಾರದಲ್ಲಿ ವಸತಿ ಖಾತೆ ಇತ್ತು. ಖಾತೆ ವಿಚಾರದಲ್ಲಿ ಅಲಕ್ಷ್ಯವಾಯ್ತು ಎನಿಸುತ್ತಿದೆ. ಎಂಟಿಬಿ ಕೆಟ್ಟ ವಿಚಾರದವರಲ್ಲ. ಹೀಗಾಗಿ ಪಕ್ದದಲ್ಲಿ ಆಗಿರುವ ಎಲ್ಲಾ ತೊಂದರೆಗಳನ್ನು ಸರಿಪಡಿಸಲು ಅಮೀತ್ ಶಾ ಬಂದಿದ್ದಾರೆ ಎಂದು ಪ್ರತಿಕ್ರಿಯಿಸಿದರು.

RELATED ARTICLES

Related Articles

TRENDING ARTICLES