Wednesday, January 22, 2025

ಸಿಎಂ ಬದಲಾವಣೆಯಿಲ್ಲ, ಅದೆಲ್ಲಾ ಊಹಾಪೋಹ : ಬಿಎಸ್‍ವೈ

ಬೆಂಗಳೂರು : 2-3 ದಿನಗಳಲ್ಲಿ ಕ್ಯಾಬಿನೆಟ್ ವಿಸ್ತರಣೆ ನಿಶ್ಚಿತವಾಗಿ ಆಗುತ್ತದೆ ಎಂಬ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬಂದಿದ್ದಾರೆ. ಆದರೆ ನಾನಿನ್ನು ಅವರನ್ನು ಭೇಟಿ ಮಾಡಿಲ್ಲ. ಆದರೆ ಕ್ಯಾಬಿನೆಟ್ ವಿಸ್ತರಣೆಯ ಬಗ್ಗೆ ನಿಶ್ಚಿತವಾದ ತೀರ್ಮಾನ ತೆಗೆದುಕೊಂಡೆ ಅಮಿತ್ ಶಾ ರಾಜ್ಯಕ್ಕೆ ಬಂದಿದ್ದಾರೆ ಎಂದುಕೊಂಡಿದ್ದೇನೆ ಎಂದು ಹೇಳಿದರು.

ಕ್ಯಾಬಿನೆಟ್ ವಿಸ್ತರಣೆ ಬಗ್ಗೆ ದೆಹಲಿಗೆ ಹೋಗಿ ಮೋದಿ ಅವರ ಜೊತೆ ಚರ್ಚಿಸಿ ತೀರ್ಮಾನ ಮಾಡಬಹುದು. ನಂತರ ಆದಷ್ಟು ಬೇಗ ಕ್ಯಾಬಿನೆಟ್ ವಿಸ್ತರಣೆ ಆಗುತ್ತದೆ ಎಂದ ಅವರು ಸಿಎಂ ಬದಲಾವಣೆಯ ಯಾವುದೇ ಸುದ್ದಿಯಿಲ್ಲ. ಅದೆಲ್ಲವೂ ಊಹಾಪೋಹ ಎಂದು ಸ್ಪಷ್ಟಪಡಿಸಿದರು.

RELATED ARTICLES

Related Articles

TRENDING ARTICLES