Monday, December 23, 2024

‘ಬಿಜೆಪಿ ಸೇರಿ ದೊಡ್ಡ ತಪ್ಪು‌ ಮಾಡಿದೆ’ : ಎಂಟಿಬಿ ನಾಗರಾಜ್‌

ಚಿಕ್ಕಬಳ್ಳಾಪುರ : ‘ಬಿಜೆಪಿ ಸೇರಿ ದೊಡ್ಡ ತಪ್ಪು‌ ಮಾಡಿಬಿಟ್ಟೆ’. ಜೀವ‌ ಕಾಂಗ್ರೆಸ್, ದೇಹ ಬಿಜೆಪಿ ಅಂತ ನೊಂದ‌ಕೊಂಡ ಸಚಿವರು. ಪ್ರಸಕ್ತ ರಾಜಕೀಯ ವ್ಯವಸ್ಥೆ ಕುರಿತು‌ ಬಹಿರಂಗವಾಗಿ ಎಂಟಿಬಿ ನಾಗರಾಜ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷಾಂತರ ಪರ್ವಕ್ಕೆ‌ ವಿಷಾದ ತೋರಿಸಿ ಕುರಿತು‌ ಮಾತನಾಡಿದ ಅವರು ಒಂದು ಪಕ್ಷ‌ ಬಿಟ್ಟು ಮತ್ತೊಂದು ಪಕ್ಷ‌ ಸೇರಿದ್ದೇ ನಾನು ಮಾಡಿದ‌ ದೊಡ್ಡ ತಪ್ಪು. ಇಲ್ಲಿ ದುಡ್ಡು ಮಾಡಲು ನಾನು ಬಂದಿಲ್ಲ, ನನ್ನ ಬಳಿಯೇ ಸಾಕಷ್ಟು ಹಣವಿದೆ, ಜನರ ಸೇವೆ ಮಾಡೋಕೆ ರಾಜಕೀಯಕ್ಕೆ ಬಂದಿದ್ದೇನೆ. ಕೆಲವರ ಮಾತು‌ ಕೇಳಿ ತಪ್ಪು ನಿರ್ಧಾರ ಕೈಗೊಂಡೆ ಅನ್ನೋ ನೋವು ಕಾಡುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿ ಸೇರಿದ್ದಕ್ಕೆ ಪಶ್ಚಾತ್ತಾಪ ಪಡ್ತಿರುವ ಅವರು, ಕಾಂಗ್ರೆಸ್ ಹೈಕಮಾಂಡ್ ಸೈ‌ ಎಂದರೆ‌ ಕೈ ಹಿಡಿಯಲು‌ ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಕಾಂಗ್ರೆಸ್ ವರಿಷ್ಠರ ಜೊತೆಗೆ ಮಾತುಕತೆ ನಡೆಸಿ‌ ವಿಫಲರಾಗಿದ್ದರು. ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿ ಸೇರಿದ್ದಕ್ಕೆ ಬಹಿರಂಗವಾಗಿಯೇ ಎಂಟಿಬಿ ನಾಗರಾಜ್ ವಿಷಾದ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES