Friday, January 10, 2025

ರಾಷ್ಟ್ರೀಯ ಪಕ್ಷಗಳಿಗೆ ಮಾನ ಮರ್ಯಾದೆ ಇಲ್ಲ : ಶಾಸಕ ಸುರೇಶ್ ಗೌಡ

ಮಂಡ್ಯ: ಎರಡೂ ರಾಷ್ಟ್ರೀಯ ಪಕ್ಷಕ್ಕೆ ಮಾನ ಮರ್ಯಾದೆ ಇಲ್ಲ ಎಂದು ಕಾಂಗ್ರೆಸ್-ಬಿಜೆಪಿ ಸರ್ಕಾರದ ವಿರುದ್ದ ನಾಗಮಂಗಲ ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅವರು, ಇವರಿಗೆ ಮಂಡ್ಯ ಜನರ ಬಳಿ ಮತ ಕೇಳುವ ನೈತಿಕತೆ ಇಲ್ಲ. ಅವರು ಬರಿ ಮಾತನಾಡುವುದು ಬಿಟ್ಟರೆ ಬೇರೆ ಏನು ಕೆಲಸ ಮಾಡುತ್ತಿಲ್ಲ. ಈ ಬಾರಿ ಕರ್ನಾಟಕ ಚುನಾವಣಾದಿಂದ ರಾಜ್ಯದ ಜನರು ಎರಡು ರಾಷ್ಟ್ರೀಯ ಪಕ್ಷಕ್ಕೆ ಬುದ್ದಿ ಕಲಿಸುತ್ತಾರೆ ಎಂದು ಹೇಳಿದರು.

ಮಂಡ್ಯದಲ್ಲಿ ಏಳಕ್ಕೆ ಏಳು ಕ್ಷೇತ್ರದಲ್ಲಿ ಕಮಲ ಹರಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ನಾವು ಹುಡುಕುತ್ತಿದ್ದೇವೆ, ಯಾವ ಯಾವ ಕೆರೆಯಲ್ಲಿ ಕಮಲ ಇದೆ ಅಂತಾ. ನೋಡೋಣ ಯಾವ ಯಾವ ಕೆರೆಯಲ್ಲಿ ಕಮಲ ಅರಳಿಸುತ್ತಾರೆ ಎಂದು, ಪೂಜೆಗೆ ಕಮಲ ಬೇಕಾಗಿದೆ ನಾನು ಹುಡುಕುತ್ತಿದ್ದೀನಿ ಸಿಕ್ತಿಲ್ಲ, ಎಂದು ಬಿಜೆಪಿ ವಿರುದ್ದ ವ್ಯಾಂಗ್ಯವಾಡಿದರು.

RELATED ARTICLES

Related Articles

TRENDING ARTICLES