Thursday, December 26, 2024

ಕಾಂಗ್ರೆಸ್, ಜೆಡಿಎಸ್ ಪಾಪದ ಕೂಸು : ಹೆಚ್​ ​ಡಿ. ಕುಮಾರಸ್ವಾಮಿ

ದೇವನಹಳ್ಳಿ : ಪಿ ಎಸ್​​ ಐ ನೇಮಕಾತಿ ಅಕ್ರಮದಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಆದರೆ ನಾನು ಯಾರನ್ನು ಟಾರ್ಗೆಟ್ ಮಾಡ್ತಾ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಪಿಎಸ್ ಐ ನೇಮಕಾತಿ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇಂದು ಅನೇಕ ಅಭ್ಯರ್ಥಿಗಳು ಪ್ರೊಟೆಸ್ಟ್ ಮಾಡ್ತಾ ಇದ್ದಾರೆ. ನ್ಯಾಯಯುತವಾಗಿ ಪಾಸ್ ಮಾಡಿದವರು ಅಳಲು ತೋಡಿಕೊಳ್ತಾ ಇದ್ದಾರೆ. ಏಕಾಏಕಿ ಪರೀಕ್ಷೆ ರದ್ದು ಮಾಡೋದಕ್ಕಿಂತ ತನಿಖೆ ನಡೆಸಿದ್ದರೆ ಸೂಕ್ತ ಇರುತಿತ್ತು. ಅಲ್ಲದೇ ಅನೇಕ ವಿದ್ಯಾರ್ಥಿಗಳು ನಮ್ಮನ್ನು ಕೂಡ ಭೇಟಿ ಮಾಡಿ ಅವರ ಕಷ್ಟ ಹೇಳಿಕೊಂಡಿದ್ದಾರೆ. ಅನೇಕ ಮಾಹಿತಿಗಳು ಕೂಡ ನನಗೆ ಬರ್ತಾ ಇವೆ. ಪೂರ್ಣ ವರದಿ ನಂತರ ಪರೀಕ್ಷೆ ರದ್ದು ಮಾಡಿದ್ದರೆ ಸೂಕ್ತ ಇತ್ತು. ಪೂರ್ಣ ಮಾಹಿತಿ ಬಂದರೆ ನಂತರ ನಾನು ಎಲ್ಲವನ್ನು ನಿಮ್ಮ ಮುಂದೆ ಇಡ್ತೀನಿ, ನನಗೆ ಯಾವುದೇ ರೀತಿ ಮುಚ್ಚು ಮರೆ ಇಲ್ಲ ಎಂದು ಪ್ರತಿಕ್ರಿಯಿಸಿದರು.

ಅದುವಲ್ಲದೇ ಈ ಪ್ರಕರಣವು ಕಲಬುರ್ಗಿಗೆ ಮಾತ್ರ ಸೀಮಿತವಾಗಿಲ್ಲ. ಇದು ಬೆಂಗಳೂರಿಗೂ ಸಂಬಂಧಪಟ್ಟಿದೆ. ದೊಡ್ಡ ದೊಡ್ಡ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ. ನಾನು ಯಾರನ್ನು ಟಾರ್ಗೆಟ್ ಮಾಡ್ತಾ ಇಲ್ಲ. ಹೊಸದಾಗಿ ಪರೀಕ್ಷೆಗೆ ಸರ್ಕಾರ ತೀರ್ಮಾನ ಮಾಡಿದೆ ಎಂದು ಹೇಳಿದರು.

ಇನ್ನು ಇದೇ ವೇಳೆ ನೈಸ್ ರಸ್ತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೊನ್ನೆ ಕಂದಾಯ ಸಚಿವರು ಹೇಳ್ತಾ ಇದ್ದರು, ನೈಸ್ ಏನಿದೆ ಅದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಪದ ಕೂಸು ಅಂತ. ನಾನು ಈ ವಿಚಾರವಾಗಿ ಕಠಿಣ ನಿರ್ಧಾರ ಮಾಡಿ ಕ್ಯಾಬಿನೆಟ್​​ಗೆ ತಂದೆ, ಆಗ ಕ್ಯಾಬಿನೆಟ್ ಅನ್ನೇ ಬಾಯ್ಕಾಟ್ ಮಾಡಿದ್ರು ಬಿಜೆಪಿ ನಾಯಕರು. ಕಲಾಪದಲ್ಲೂ ಈ ವಿಚಾರ ಪ್ರಸ್ತಾಪ ಮಾಡಿದಾಗ ಐದು ಗಂಟೆಗೆ ನನಗೆ ಉತ್ತರ ಕೊಟ್ಟರು. ಇದು ಬಿಜೆಪಿ ಹಾಗೂ ಕಾಂಗ್ರೆಸ್​​ನ ಪಾಪದ ಕೂಸು. ನೈಸ್​​ ರೋಡ್​​ ಜೆಡಿಎಸ್ ಪಕ್ಷದ ಪಾಪದ ಕೂಸಲ್ಲ. ಇದರ ಕುರಿತು ನಿರಂತರ ಹೋರಾಟ ಮಾಡಿದ್ದು ನಮ್ಮ ಪಕ್ಷವೇ ಹೀಗಾಗಿ ಲಘುವಾಗಿ ಹೀಗೆ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದರು.

RELATED ARTICLES

Related Articles

TRENDING ARTICLES