Thursday, January 23, 2025

ಅರ್ಧ ಜ್ಞಾನವಿರೋ ಜ್ಞಾನೇಂದ್ರ ರಾಜೀನಾಮೆ ಕೊಡ್ಬೇಕು : ನಲಪಾಡ್

ಧಾರವಾಡ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅರ್ಧ ಜ್ಞಾನೇಂದ್ರದವರಾಗಿದ್ದಾರೆ ಹೀಗಾಗಿ ಅವರು ಗೃಹ ಸಚಿವರ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ ಯೂಥ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಕಿಡಿಕಾರಿದರು.

ಪಿಎಸ್​​ಐ ಅಕ್ರಮ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವರಿಗೆ ಪೂರ್ತಿ ಜ್ಞಾನ ಇದ್ದಿದ್ದರೆ ಈ ರೀತಿಯ ಕಷ್ಟ ರಾಜ್ಯದಲ್ಲಿ ಯಾರಿಗೂ ಬರುತ್ತಿರಲಿಲ್ಲ. ಆದರೆ, ಅವರು ಅರ್ಧ ಜ್ಞಾನ ಇಟ್ಟುಕೊಂಡು ಇಂತಹ ಕೆಲಸಗಳನ್ನ ಮಾಡಿಕೊಂಡು ಹೋಗುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಇರುವವರೇ ಹಗರಣ ಮಾಡಿದ್ದಾರೆ ಹಾಗೂ 56 ಸಾವಿರ ಯುವಕರ ಜೀವನದ ಜೊತೆಗೆ ಆಟವಾಡಿದ್ದಾರೆ. ಈ ಆಡಳಿತ ಸರ್ಕಾರಕ್ಕೆ ಮಾನ, ಮರ್ಯಾದೆ,ಇದ್ದು ಸ್ವಲ್ಪವಾದರೂ ಬೇಜಾರು ಮತ್ತು ಜನಪರವಾದ ಕಾಳಜಿ ಇದ್ದರೆ ಬಂದಿರುವ ಸಮಸ್ಯೆಯನ್ನ ಹೇಗೆ ಬಗೆ ಹರಿಸುತ್ತಾರೆ ಎಂಬುದನ್ನು ಕಾಯ್ದು ನೋಡಬೇಕು ಎಂದರು.

ಅಲ್ಲದೇ ಇದರಲ್ಲಿ ಕಷ್ಟಪಟ್ಟು ಓದಿ ಬರೆದವರು ಇರುತ್ತಾರೆ. ಪರೀಕ್ಷೆ ಬರೆದ ಎಲ್ಲರಿಗೂ ಸರ್ಕಾರವು ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.

RELATED ARTICLES

Related Articles

TRENDING ARTICLES