Monday, December 23, 2024

ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಪ್ರತಿ ಕುಟುಂಬಕ್ಕೆ ಮನೆ : ಹೆಚ್​​ಡಿಕೆ

ಬಳ್ಳಾರಿ : 2023 ರ ಚುನಾವಣೆಯಿಂದ ನಿಮ್ಮ ಬದುಕನ್ನು ಸರಿಪಡಿಸೋಕೆ ಮತ್ತು ಪರ್ಸೆಂಟೇಜ್ ಸರ್ಕಾರ ತೆಗೆಯೋಕೆ ಅವಕಾಶ ಮಾಡಿಕೊಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್​​ ಡಿ ಕುಮಾರಸ್ವಾಮಿ ಜನರ ಹತ್ತಿರ ಮನವಿ ಮಾಡಿಕೊಂಡರು.

ಇಂದು ಬಳ್ಳಾರಿಯಲ್ಲಿ ಜನತಾ ಜಲಧಾರೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 15 ಕಳಸದ ವಾಹನದಲ್ಲಿ ನೀರನ್ನು ಸಂಗ್ರಹಿಸಿ ಜನತೆಯಲ್ಲಿ ಜಾಗೃತಿ ತರುವ ಕಾರ್ಯಕ್ರಮವಾಗಿದೆ. ಇವತ್ತು ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಬಿಜೆಪಿ ರೈತರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ಹಾಗೂ ರಾಜ್ಯದಲ್ಲಿ ನೀರಿನ ಹಂಚಿಕೆ ವಿಚಾರದಲ್ಲಿ ಸಮಸ್ಯೆಗಳಿವೆ. ಈ ಸರ್ಕಾರಗಳ ನಡುವಳಿಕೆ ನೋಡಿದರೆ ಇನ್ನೂ 100 ವರ್ಷ ಆದರೂ ಈ ಸಮಸ್ಯೆಯನ್ನು ಬಗೆಹರಿಸುವ ಹಾಗೇ ಕಾಣುತ್ತಿಲ್ಲ. ಅಲ್ಲದೇ ತುಂಗಭದ್ರ ಜಲಾಶಯದ ಹೂಳನ್ನು ತೆಗೆಸುವ ಕೆಲಸ ಮಾಡಿಲ್ಲ. ಅಪ್ಪರ್ ಕೃಷ್ಣಾ ಮಹದಾಯಿ ಸಮಸ್ಯೆ ಹಾಗೇ ಇದೆ ಎಂದು ಹೇಳಿದರು.

ಇನ್ನು ನಾಡಿನ ಜನತೆಗೆ ಮನವಿ ಮಾಡ್ತೇನೆ ಕಳೆದ ಬಾರಿ ರೈತರ ಸಾಲ ಮನ್ನಾ ಮಾಡ್ತೀನಿ ಅಂದಿದ್ದೆ ಹಾಗೇ ಮಾಡಿದ್ದೇನೆ ಕೂಡ. ಆಡಳಿತ ಸರ್ಕಾರವನ್ನು ಜನರು ಈಗಾಗಲೇ 40 ಪರ್ಸೆಂಟ್ ಸರ್ಕಾರ ಅಂತಾರೆ, ಹಗರಣದ ಸರ್ಕಾರ ಅಂತಾರೆ ಇಂತಹ ಸರ್ಕಾರ ತೊಲಗಿಸಿ ನಿಮ್ಮ ಬದುಕು, ಮಕ್ಕಳ ಭವಿಷ್ಯದ ದೃಷ್ಟಿಯಿಂದ 2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸಿ ಎಂದರು. ನೀವು ಒಂದು ವೇಳೆ ಬರುವ ಎಲೆಕ್ಷನ್​​ನಲ್ಲಿ ಜನತಾದಳ ಪಕ್ಷವನ್ನು ಗೆಲ್ಲಿಸಿದರೆ ಪ್ರತಿ ಕುಟುಂಬಕ್ಕೆ ಸೇರಿದ ರೈತರ ಜಮೀನಿಗೆ ನೀರು ಕೊಡ್ತೀನಿ. ಇಲ್ಲವಾದಲ್ಲಿ ನಾನು ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ತಿಳಿಸಿದರು.

ಅದುವಲ್ಲದೇ ಪಂಚರತ್ನ ಯೋಜನೆಯನ್ನು ಮನೆಮನೆಗೂ ತಲುಪಿಸುತ್ತೇನೆ. ಒಂದು ಪೈಸೆ ಖರ್ಚಿಲ್ಲದೆ ಉಚಿತ ಶಿಕ್ಷಣವನ್ನು ನಿಮ್ಮ ಮಕ್ಕಳಿಗೆ ಒದಗಿಸುತ್ತೇನೆ. ಪ್ರತಿ ಪಂಚಾಯತಿ ಮಟ್ಟದಲ್ಲಿ 30 ಹಾಸಿಗೆ ಇರುವ ಆಸ್ಪತ್ರೆಗಳನ್ನು ಕಟ್ಟಿಸುತ್ತೇವೆ. ಸಾಲಮನ್ನಾ ಒಂದೇ ನಿಮಗೆ ಪರಿಹಾರ ಅಲ್ಲ. ರೈತರ, ಯುವಕರ ಬದುಕು ಕಟ್ಟೋಕೆ ಯೋಜನೆಯಿದೆ. ಪ್ರತಿ ಕುಟುಂಬಕ್ಕೆ ಮನೆಯನ್ನು ಕೊಡ್ತೇನೆ. ಮಾನವಿ ಜಲಾಶಯಕ್ಕೂ ನೀರು ತುಂಬಿಸೋ ಕಾರ್ಯಕ್ರಮವನ್ನು ಜಾರಿಗೆ ತರುತ್ತೇನೆ. ನನ್ನ ಮೇಲೆ ವಿಶ್ವಾಸ ಇದ್ದರೆ, ನನ್ನ ಪಕ್ಷವನ್ನು ಗೆಲ್ಲಿಸಿ ಎಂದು ಭರವಸೆಯ ಮಾತುಗಳನ್ನಾಡಿದರು.

ಇನ್ನು ಹಿಂದೂ ಮುಸಲ್ಮಾನ್ ಬಂಧುಗಳು ನಡುವೆ ಬಿಜೆಪಿ ಸರ್ಕಾರವು ಯಾವ ರೀತಿ ನಡೆದುಕೊಳ್ಳುತ್ತಿದೆ ಎಂಬುದು ನಿಮಗೇ ಗೊತ್ತು. ಮೋದಿ ನೋಡಿ ಓಟು ಹಾಕ್ತೀರಿ ಬೇರೆಯವರನ್ನು ನೋಡಿ ಓಟ್ ಹಾಕ್ತೀರಾ ? ಅದರೆ ಒಂದು ಬಾರಿ ನನಗೆ ಸ್ವತಂತ್ರವಾಗಿ ಅಧಿಕಾರ ಕೊಟ್ಟಿ ನೋಡಿ ಮುಂದೆ ಇಲ್ಲಿಗೆ ಬಂದು ದೊಡ್ಡ ಕಾರ್ಯಕ್ರಮ ಮಾಡುತ್ತೇನೆಂದು ಪ್ರತಿಕ್ರಿಯಿಸಿದರು.

RELATED ARTICLES

Related Articles

TRENDING ARTICLES