Wednesday, January 22, 2025

ಯಾರೋ ಕಿಟ್ ಕೊಟ್ರೆ, ನಾನು ರಿಯಾಕ್ಟ್ ಮಾಡ್ಬೇಕಾ? : ಸಿದ್ದರಾಮಯ್ಯ

ಬಾಗಲಕೋಟೆ: ಹುಬ್ಬಳ್ಳಿ ಗಲಭೆ ಆರೋಪಿಗಳ ಕುಟುಂಬಕ್ಕೆ ಶಾಸಕ ಜಮೀರ್ ಅಹ್ಮದ್​ ಸಹಾಯ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಯಾರೋ ಕಿಟ್ ಕೊಟ್ರೆ, ನಾನು ಅದಕ್ಕೆ ರಿಯಾಕ್ಟ್ ಮಾಡಬೇಕಾ ಎಂದು ಮರು ಪ್ರಶ್ನಿಸಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್​ ಅಹ್ಮದ್​ ಉಮ್ರಾದಲ್ಲಿದ್ದಾನೆ. ಅವರು ಯಾರೋ ಕೊಟ್ರೆ ನಾನೇನು ಮಾಡೋಕಾಗುತ್ತೆ?. ಯಾರೋ ಪುಡ್ ಕಿಟ್​ ಕೊಟ್ರೆ ಜಮೀರ್ ಕೊಟ್ಟ ಅಂದ್ರೆ ಹೇಗೆ ಎಂದು ಗರಂ ಆದರು.

ಇನ್ನು ಇದೇ ವೇಳೆ ಡಿ.ಕೆ ಸುರೇಶ್ ಜಮೀರ್ ಪರ ಬ್ಯಾಟ್ ಬೀಸಿದ್ದಾರೆ. ಜಮೀರ್ ಅಹಮದ್ ಹುಬ್ಬಳ್ಳಿ ಗಲಭೆ ಕೋರರ ಮನೆಗೆ ಬೇಟಿ ನೀಡಲಿದ್ದಾರೆ. ಫುಡ್​ ಕಿಟ್​ ವಿತರಿಸಲಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಆನೇಕಲ್​​​ನ ಬೊಮ್ಮಸಂದ್ರದಲ್ಲಿ ಮಾತನಾಡಿದ ಅವರು, ಮುಸ್ಲಿಮರಲ್ಲಿ ಒಂದು ಪದ್ದತಿ ಇದೆ. ಹಬ್ಬದ ಸಮಯದಲ್ಲಿ ಅವರು ಸಂಪಾದಿಸಿರುವುದರಲ್ಲಿ ಅಲ್ಪ ಪ್ರಮಾಣ ದಾನ ಮಾಡಬೇಕು ಹಾಗಾಗಿ ಜಮೀರ್ ಅಹಮದ್ ರೇಷನ್ ಕೊಡಲು ಹೋಗಿದ್ದಾರೆ.

ಎಲ್ಲರಿಗೂ ಸಹ ಹೊಟ್ಟೆ ಇದೆಯಲ್ಲ ಅವರಿಗೆ ಆಹಾರ ಬೇಕಲ್ವಾ ಎಂದು ಪ್ರಶ್ನಿಸಿರುವ ಸುರೇಶ್ ಅವರು ಜಮೀರ್ ನಡೆಯನ್ನ ಸಮರ್ಥಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES