Wednesday, January 22, 2025

ಕಾಂಗ್ರೆಸ್‍ನವರು ದೇವೇಗೌಡರಿಗೆ ವಿಷ ಕೊಟ್ಟರು : ಸಿಎಂ ಇಬ್ರಾಹಿಂ

ತುಮಕೂರು : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನವರು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ತುಮಕೂರಿಗೆ ಕರೆದೊಯ್ದು ಸೋಲಿಸಿ ವಿಷ ಕೊಟ್ಟರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.

ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರ ಮಾಡಿದಾಗ ಸಿಎಂ ಕುಮಾರಸ್ವಾಮಿಗೆ ಬಿಜೆಪಿಗಿಂತ ಕಾಂಗ್ರೆಸ್‍ನವರೇ ಹೆಚ್ಚು ಕಾಟ ಕೊಟ್ಟರು. ಹಾಗಾಗಿ ಅಧಿಕಾರದಿಂದ ಕೆಳಗೆ ಇಳಿಯುವಂತಾಯಿತು. ಮುಕ್ಕಣ್ಣಿಗೆ ಮೂರನೇ ಕಣ್ಣಿರುವಂತೆ ಮುಂದಿನ ಬಾರಿ ಜನತಾದಳ ಶಿವನ ಮೂರನೇ ಕಣ್ಣಿನಂತೆ ಅಧಿಕಾರಕ್ಕೆ ಬರಲಿದೆ.

ದೇವೇಗೌಡರನ್ನು ಬಲವಂತವಾಗಿ ತುಮಕೂರಿಗೆ ಕರೆದುಕೊಂಡು ಬಂದು ವಿಷ ಹಾಕಿದ್ದಾರೆ. ಮುಂದೆ 123 ಸೀಟ್ ಗೆಲ್ತೀವಿ, ಅಷ್ಟೆ ಅಲ್ಲ ಲೋಕಸಭೆಯಲ್ಲೂ ಬಹುಮತ ತರುತ್ತೀವಿ. ತುಮಕೂರಿನಲ್ಲಿ 11 ಸ್ಥಾನ ಜನತಾದಳ ಗೆಲ್ಲಲಿದೆ ಎಂದರು.

RELATED ARTICLES

Related Articles

TRENDING ARTICLES