Sunday, December 22, 2024

ಕಾಂಗ್ರೆಸ್​​-ಜೆಡಿಎಸ್​​ ಯಶ್​​ ಪಿಕ್ಚರ್​ ತರ – ಸಚಿವ ಅಶೋಕ್​

ಹಾಸನ: ನಾವು ‘ಎ’ ಟೀಂ! ‘ಬಿ’ ಟೀಂ ಮಾತು ಕೇಳಲ್ಲ, ನಮ್ಮ ಬಿಜೆಪಿ ಸರ್ಕಾರ ಇದೆ ಎಂದು ಕಂದಾಯ ಸಚಿವ ಆರ್​. ಅಶೋಕ್​ ಅವರು ಕಾಂಗ್ರೆಸ್​​ ಟೀಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬುಧವಾರ ಹಾಸನದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿತ್ತು. ಧರ್ಮಸಿಂಗ್ ಇದ್ದಾಗ ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ರಿ(?) ಕುಮಾರಸ್ವಾಮಿ ಸಿಎಂ ಆದಾಗ ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ರಿ(?) ನಮ್ಮ ಜೊತೆ ಒಂದೇ ಒಂದು ಸಲ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿತ್ತು. ಉಳಿದಿದ್ದೆಲ್ಲಾ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿವೆ ಎಂದರು.

ಇನ್ನು ಹೆಚ್.ಡಿ ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ರಿ. ಹತ್ತು ಸಲ ಹೊಂದಾಣಿಕೆ ಮಾಡಿಕೊಂಡು, ಈಗ ನಮ್ಮ ಜೊತೆ ಅಂದ್ರೆ ಹೆಂಗೆ(?) ಪಕ್ಕಾ ಇವರಿಬ್ಬರು ಅಣ್ಣ-ತಮ್ಮ. ಯಶ್ ಪಿಕ್ಚರ್ ಬಂದಿತ್ತಲ್ಲ ಅಣ್, ತಮ್ಮಾಸ್ ಆ ರೀತಿ. ಇವತ್ತು ಸಹ ದೇವೇಗೌಡರಿಗೆ ಕಾಂಗ್ರೆಸ್ ಕಡೆನೇ ಒಲವು, ನೀವೇ ನೋಡಿದ್ದಿರಿ. ನಮಗೆ ಎ ಟೀಂ, ಬಿ ಟೀಂ ಅವಶ್ಯಕತೆ ಇಲ್ಲ. ಅಭಿವೃದ್ಧಿ ವಿಚಾರವಾಗಿ ನಮ್ಮ ಸರ್ಕಾರ ನಮ್ಮದೇ ನಿಲುವು ತೆಗೆದುಕೊಳ್ಳುತ್ತೀವಿ ಎಂದು ಆರ್​ ಅಶೋಕ್ ಅವರು ಸ್ಪಷ್ಟನೆ ನೀಡಿದರು.

RELATED ARTICLES

Related Articles

TRENDING ARTICLES