Monday, December 23, 2024

ಕಾಂಗ್ರೆಸ್ ಭ್ರಷ್ಟಚಾರವನ್ನು ಸಂಸ್ಕೃತಿಯಾಗಿ ಬೆಳೆಸಿದೆ : ಅಶ್ವತ್ ನಾರಾಯಣ್

ಹಾಸನ : ಭ್ರಷ್ಟಾಚಾರವನ್ನು ಕಾಂಗ್ರೆಸ್ ಬೆಳೆಸಿಬಿಟ್ಟಿದೆ. ದೇಶದಲ್ಲಿ ಭ್ರಷ್ಟಾಚಾರ ‌ಒಂದು ಸಂಸ್ಕೃತಿಯಾಗಿ ಬೆಳೆದಿದೆ. ಇದನ್ನು ಸರಿ ಮಾಡೋಕೆ ನಮ್ಮ ಪ್ರಧಾನಿಯವರು ಹೋರಾಟ ಮಾಡುತ್ತಿದ್ದಾರೆ ಎಂದು ಹಾಸನದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ ನಾರಾಯಣ್ ಹೇಳಿದರು.

ರಾಜ್ಯದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಯಲ್ಲಿ ಭ್ರಷ್ಟಾಚಾರ ಆರೋಪ ವಿಚಾರ ಸಂಬಂಧಪಟ್ಟಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೆ ಭೌತಶಾಸ್ತ್ರ ವಿಷಯದಲ್ಲಿ ದೂರು ಬಂದಿತ್ತು. ದೂರು ಕೇಳಿ ಬಂದ ತಕ್ಷಣ ಕ್ರಮ ವಹಿಸಲಾಗಿದೆ. ವಿಚಾರಣೆ ನಡೆಯುತ್ತಿದ್ದು ತನಿಖೆ ಪೂರ್ಣ ಗೊಂಡ ಬಳಿಕ ಕ್ರಮ ಕೈಗೊಳ್ಳಲಿದ್ದೇವೆ ಎಂದರು.

ಅದುವಲ್ಲದೇ ಹಣವನ್ನು ಅಕೌಂಟಬಲ್ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಕೆಲವರಿಗೆ ಹಣ ಮಾಡಬೇಕು ಎನ್ನೋದು ಒಂದು ಖಾಯಿಲೆಯಾಗಿದೆ. ಆದ್ದರಿಂದಲೇ ಈ ರೀತಿ ಭ್ರಷ್ಟಚಾರವಾಗುತ್ತಿದೆ. ಇದರ ಸಂಪೂರ್ಣ ನಿರ್ಮೂಲನೆ ಮಾಡಲು ಎಲ್ಲಾ ಪ್ರಯತ್ನಗಳು ಆಗುತ್ತಿವೆ. ಈ ದಿಕ್ಕಿನಲ್ಲಿ ನಮ್ಮ ಸಿಎಂ ಅವರು ಗುತ್ತಿಗೆದಾರರನ್ನು ಕರೆಸಿ ನೇರವಾಗಿ ಮಾತಾಡಿದ್ದಾರೆ ಎಂದು ತಿಳಿಸಿದರು.

ಇನ್ನು ಗೃಹ ಸಚಿವರು ಪರೀಕ್ಷಾ ಅಕ್ರಮದ ಬಗ್ಗೆ ತಮಗೆ ಮಾಹಿತಿ ಬರುತ್ತಲೆ ಕ್ರಮವಹಿಸಿದ್ದಾರೆ. ನಮ್ಮ ಗೃಹ ಸಚಿವರು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ. ಬೇರೆ ಯಾವ ಸರ್ಕಾರದಲ್ಲೂ ಇಂತಹ ಕ್ರಮ ಆಗಿರಲಿಲ್ಲ.  ನಾವು ಎಲ್ಲೊ ಒಂದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಮಾಡುವಾಗ ಕಾಪಿ ಹೊಡೆಸಿಬಿಟ್ಟರೆ ಏನು ಮಾಡೋಕೆ ಆಗುತ್ತದೆ ಎಂದು ಪ್ರಾಧ್ಯಾಪಕರ ಹುದ್ದೆ ನೇಮಕದಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ಚರ್ಚೆ ವಿಚಾರವಾಗಿ ಸಚಿವರು ಅಸಹಾಯಕತೆಯ ಉತ್ತರ ನೀಡಿದರು.

RELATED ARTICLES

Related Articles

TRENDING ARTICLES