Wednesday, January 22, 2025

ಸಿಲಿಕಾನ್ ಸಿಟಿಯಲ್ಲಿ ಕಿಡ್ನಿ ಡೊನೇಷನ್ ಬಿಗ್ ರಾಕೆಟ್ ದಂಧೆ

ಬೆಂಗಳೂರು: ನಮ್ಮ ದೇಶದ ಎಜುಕೇಶನ್ ಸಿಸ್ಟಮ್ ಮೇಲೆ ಭರವಸೆ ಇಟ್ಟು ವಿದೇಶದಿಂದ ಬಂದು ಸಿಲಿಕಾನ್ ಸಿಟಿಯ ಕೆಲ ಕಾಲೇಜುಗಳಲ್ಲಿ ಸೀಟ್ ಪಡೆದು ಎಜುಕೇಶನ್ ವೀಸಾ ಮೇಲೆ ಭಾರತಕ್ಕೆ ಬರುವ ಕೆಲ ನೈಜೀರಿಯಾ ಪ್ರಜೆಗಳು ಓದನ್ನು ಬಿಟ್ಟು ಆಕ್ರಮ‌ ಚಟುವಟಿಕೆಗಳಲ್ಲಿ ಭಾಗಿಯಾಗಿ ಅಮಾಯಕ ಜನರನ್ನು ವಂಚನೆ ಮಾಡಿ ಶೋಕಿ ಮಾಡುತ್ತಿದ್ದಾರೆ. ಇಲ್ಲೊಂದು ಗ್ಯಾಂಗ್ ಕೋಟಿ ಕೋಟಿ ಹಣ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ಹಣ ವಂಚನೆ ಮಾಡುತಿದ್ದಾರೆ. ಇನ್ನು ಈ ಖದೀಮರು ಮಾಡುತಿದ್ದ ಐನಾತಿ ಕೆಲಸ ಕೇಳಿದರೆ ಬೆಚ್ಚಿ ಬೀಳುವುದು ಗ್ಯಾರಂಟಿ.

ಪ್ರತಿಷ್ಠಿತ ಆಸ್ಪತ್ರೆಗಳ ನಕಲಿ ವೆಬ್ ಸೈಟ್ ಸೃಷ್ಟಿಸಿ ಸಾರ್ವಜನಿಕರಿಗೆ ಕಿಡ್ನಿ ಸಂಬಂಧಿತ ವ್ಯವಹಾರದ ಹೆಸರಿನಲ್ಲಿ ಲಕ್ಷಾಂತರ ವಂಚಿಸಿದ ಮೂವರು ನೈಜೀರಿಯಾ ಪ್ರಜೆಗಳನ್ನ ಆಗ್ನೇಯ ವಿಭಾಗದ ಸೆನ್ ಪೊಲೀಸರು ಬಂಧಿಸಿದ್ದಾರೆ.

ಸಾಗರ್ ಅಪೋಲೋ, ಬ್ಯಾಪ್ಟಿಸ್ಟ್, ಕಾವೇರಿ ಆಸ್ಪತ್ರೆ ಸೇರಿದಂತೆ ಪ್ರಸಿದ್ಧ ಆಸ್ಪತ್ರೆಗಳ ನಕಲಿ ವೆಬ್ ಸೈಟ್ ಸೃಷ್ಟಿಸಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಕಿಡ್ನಿಯನ್ನು ಪಡೆದುಕೊಳ್ಳುತ್ತೇವೆ. ಅಗತ್ಯ ಇರುವ ರೋಗಿಗಳಿಗೆ ಕಿಡ್ನಿಯನ್ನು ಸಹ ಮಾರಾಟ ಮಾಡುತ್ತೇವೆಂದು ಜಾಹಿರಾತು ನೀಡಿ ಒಂದು‌ ಕಿಡ್ನಿ ನಾಲ್ಕು ಕೋಟಿ ನೀಡುತ್ತೇವೆ ಎಂದು ನಂಬಿಸುತ್ತಾರೆ ಮೊದಲಿಗೆ ಆರು ಸಾವಿರ ಡೆಪಸಿಟ್​​​ ಮಾಡಿ ಆಮೇಲೆ ನಿಮ್ಮ ಅಕೌಂಟ್​ಗೆ 2 ಕೋಟಿ ಬಂದಿದೆ ಆದ್ರೆ ನೀವು ಅದಕ್ಕೆ ನೀವು 20% ಹಣ ಟ್ಯಾಕ್ಸ್ ಹಾಕಬೇಕು ಎಂದು ಲಕ್ಷ ಲಕ್ಷ ಹಣ ವಂಚನೆ ಮಾಡುತಿದ್ದರು.

ಇದೇ ಮೋಸ ಹೋಗಿದ್ದ ಸಂತ್ರಸ್ತರು ಸಾಗರ್ ಆಪೋಲೋ ಆಸ್ಪತ್ರೆ ಹೋಗಿ ವಿಚಾರಣೆ ಮಾಡಿದಾಗ ಮೋಸ ಹೋಗಿರುವುದು ಪತ್ತೆಯಾಗಿದೆ. ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ನೈಜೀರಿಯಾ, ಮಿಮಿ, ವಿಲಿಯಂ, ಕೋಲಿನ್ ಎಂಬ ಮೂರು ಜನ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.. ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಇಂತಹ ಅನ್ ಲೈನ್ ವಂಚನೆಗಳು ಹೆಚ್ಚಾಗಿದ್ದು ಜಾಗೃತಿ ವಹಿಸುವುದು ಅಗತ್ಯವಾಗಿದೆ.

RELATED ARTICLES

Related Articles

TRENDING ARTICLES