Wednesday, January 22, 2025

ಕಾಂಗ್ರೆಸ್​​ನವರು ಅಧಿಕಾರದಲ್ಲಿ ಇಲ್ಲ ಅಂದ್ರೆ ಚಡಪಡಿಸುತ್ತಾರೆ : ಕಟೀಲ್​​

ಬೆಂಗಳೂರು : ಸಮಾಜದ ಧೈರ್ಯ ಸ್ಥೈರ್ಯ ಕುಸಿಯುವಂತೆ ಮಾಡೋದು ಭಯೋತ್ಪಾದನೆಗೆ ಸಮ. ಅಂತವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಇದನ್ನು ಪಾರ್ಟಿ ನಿರ್ಧಾರ ಮಾಡುತ್ತದೆ ಎಂದು ನಳಿನ್ ಕುಮಾರ್ ಕಟೀಲ್  ಹೇಳಿದರು.

ಸಿಎಂ‌ ಒಳ್ಳೊಳ್ಳೆಯ ಕೆಲಸಗಳನ್ನು ಮಾಡ್ತಿದಾರೆ. ಮತ್ತು ಹೊಸಪೇಟೆ ಕಾರ್ಯಕಾರಿಣಿ ಸಭೆ ನಮಗೆ ಮತ್ತಷ್ಟು ಪ್ರೇರಣೆ ಕೊಟ್ಟಿದೆ. ಸರ್ಕಾರ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿ ಕಾಪಾಡುತ್ತಿದೆ. ಆದರೆ, ಕಾಂಗ್ರೆಸ್ ಜನರಿಗೆ ತಪ್ಪು ಮಾಹಿತಿ ಕೊಡ್ತಿದೆ. ಮತೀಯವಾದದ ಹೆಸರಲ್ಲಿ ಕಾಂಗ್ರೆಸ್ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದರು.

ಅದುವಲ್ಲದೇ ಡಿಜೆ ಹಳ್ಳಿ, ಕೆಜಿ ಹಳ್ಳಿ, ಹರ್ಷ ಕೊಲೆ ಪ್ರಕರಣ, ಹಿಜಾಬ್, ಹುಬ್ಬಳ್ಳಿ‌ ಪ್ರಕರಣಗಳಲ್ಲಿ ಕಾಂಗ್ರೆಸ್  ಮತೀಯವಾದ ಅನುಸರಿಸುತ್ತಿದೆ. ಕಾಂಗ್ರೆಸ್​​ನವರು ಅಧಿಕಾರದಲ್ಲಿ ಇಲ್ಲ ಅಂದ್ರೆ ಚಡಪಡಿಸುತ್ತಾರೆ. ಹೀಗಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್​​ನಿಂದ ಅರಾಜಕತೆ ಸೃಷ್ಟಿಯಾಗಿದೆ ಎಂದು ಕಿಡಿಕಾರಿದರು.

ಇನ್ನು ರಾಜ್ಯದಲ್ಲಿ ಬುಲ್ಡೋಜರ್ ಪ್ರಯೋಗ ವಿಚಾರಕ್ಕೆ ಪ್ರತಿಕ್ರಿಯಿಸಿ ಸರ್ಕಾರ ಎಲ್ಲ‌ ತೀರ್ಮಾನಗಳನ್ನು ಮಾಡುತ್ತದೆ. ಗಲಭೆಗಳನ್ನು ತಡೆಯಲು ಕಠೋರವಾದ ಕಾನೂನು‌ಬೇಕು. ಜಾತಿ ಮತ ಪಂಥ ಭೇದ ಇಲ್ಲದ ಕಠಿಣ ಕಾನೂನುಬೇಕು. ದಂಗೆಕೋರರ ಆಸ್ತಿ‌ಮುಟ್ಟುಗೋಲು ಹಾಕಿಕೊಳ್ಳಬೇಕು. ಅಗತ್ಯ ಇದ್ರೆ ಕಾನೂನು ಮಾಡುವ ಮೂಲಕ ಮನೆ, ಕಟ್ಟಡ ನೆಲಸಮ ಕ್ರಮ‌ ತೆಗೆದುಕೊಳ್ಳಲಿ ಎಂದು ಬುಲ್ಡೋಜರ್ ಪ್ರಯೋಗಕ್ಕೆ ಕಟೀಲ್ ಸಮರ್ಥನೆ ಮಾಡಿಕೊಂಡರು.

RELATED ARTICLES

Related Articles

TRENDING ARTICLES