Wednesday, January 22, 2025

ಶಾಂತಿಯ ತೋಟಕ್ಕೆ ಬಿಜೆಪಿ ಬೆಂಕಿ ಹಚ್ಚುತ್ತಿದೆ : ಹೆಚ್​​ಡಿಕೆ

ಶಿವಮೊಗ್ಗ : ರಾಜ್ಯದಲ್ಲಿ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬಿಜೆಪಿಯವರು ಬೆಂಕಿ ಹಚ್ಚುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್​​ನ ಕೆಲವರು ಪೆಟ್ರೋಲ್ ಸುರಿಯುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೆಚ್​​ಡಿ ಕುಮಾರಸ್ವಾಮಿ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕಳೆದ ಒಂದುವರೆ ತಿಂಗಳಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳು ಸಮಾಜದಲ್ಲಿ ಶಾಂತಿ ಹಾಳುಮಾಡುತ್ತಿವೆ. ಈ ಘಟನೆಗಳಿಗೆ ಸರ್ಕಾರ ಬಿಗಿಯಾದ ನಿಲುವು ತೆಗೆದುಕೊಳ್ಳಬೇಕಿತ್ತು. ಸರ್ಕಾರದ ಕೆಲವು ನಿರ್ಲಕ್ಷ್ಯದ ಮನೋಭಾವಗಳು ಮತ್ತು ಇಲ್ಲಿ ಅಹಿತಕರ ಘಟನೆಗಳಿಗೆ ಕಾಣದ ಕೈಗಳ ಹಿನ್ನೆಲೆ ಇದೆ ಎಂದರು.

ಸರ್ಕಾರ ಜನತೆಯ ಮುಂದೆ ಸತ್ಯಾಂಶದ ವರದಿ ನೀಡಬೇಕು. ಡಿಜೆ ಹಳ್ಳಿ ಘಟನೆಗೆ ಯಾರು ಕಾರಣಕರ್ತರು ಅವರಿಗೆ ಶಿಕ್ಷೆ ಆಗಿದೀಯಾ? ಆ ಪ್ರಕರಣಲ್ಲಿ ಭಾಗಿಯಾದವರು ಪಕ್ಷದ ಅಧ್ಯಕ್ಷರ ಜೊತೆ ಆರಾಮಾಗಿ ಓಡಾಡಿಕೊಂಡಿದ್ದಾರೆ. ಅಮಾಯಕರನ್ನು ಜೈಲಿನಲ್ಲಿ ಹಾಕಲಾಗಿದೆ. ಸಮಾಜದಲ್ಲಿ ಉದ್ರೇಕ ವಾತವರಣ ಸೃಷ್ಟಿಸಿರುವುದೇ ತಪ್ಪು. ಹುಬ್ಬಳ್ಳಿ ಸೇರಿದಂತೆ ರಾಜ್ಯದ ಎಲ್ಲಾ ಘಟನೆಗಳಿಗೆ ಸರ್ಕಾರದ ವೈಫಲ್ಯ ಕಾರಣ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಮೈಕ್ ಕಿತ್ತುಹಾಕುತ್ತೇನೆ ಎನ್ನುವರರನ್ನು ಮೊದಲೇ ಬಂಧಿಸಬೇಕು. ಸಮಾಜದಲ್ಲಿ ಶಾಂತಿಯ ವಾತಾವರಣ ಇರಬೇಕಾದರೆ ವಿಷಯಗಳನ್ನ ಕೆದಕಿ ಕೆದಕಿ ಸಮಾಜದಲ್ಲಿ ಕಂದಕಗಳನ್ನಸೃಷಿಮಾಡುತ್ತಿದ್ದಾರೆ.
ಅಂತವರು ಚಿಲ್ಲರೆ ಪುಂಡರು, ಇವರಿಂದ ಹಿಂದು ಧರ್ಮ ಉಳಿಯಲು ಸಾಧ್ಯವೇ? ನಾವೇನು ರಾಮನ ಭಕ್ತರಲ್ಲವೆ. ನಾವೂ ಪ್ರತಿನಿತ್ಯ ರಾಮನ ಪೂಜೆ ಮಾಡುವುದಿಲ್ಲವೇ? ಅವರು ರಾಮನ್ನು ಗುತ್ತಿಗೆ ತೆಗೆದುಕೊಂಡಿದ್ದಾರೆಯೇ? ಸಮಾಜದ ಆಚರಣೆಗಳಿಗೆ ನಾವೇಕೆ ಧಕ್ಕೆ ತರುವಂತಹ ಕೆಲಸ ಮಾಡಬೇಕು ಎಂದು ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES