Thursday, December 19, 2024

ಮೌಳಿ ಒಪ್ಪಿದ ಕಿರೀಟಿ.. ಬೆವರಿನ ಜೊತೆ ಹರಿಸಿದ್ರು ರಕ್ತ..!

ಡೈರೆಕ್ಟರ್​ಗಳ ಡೈರೆಕ್ಟರ್ ರಾಜಮೌಳಿಯೇ ಮೆಚ್ಚಿದಂತಹ ಕನ್ನಡ ಪ್ರತಿಭೆ ಕಿರೀಟಿ, ಸಿನಿಮಾಗಾಗಿ ಬೆವರಿನ ಜೊತೆ ರಕ್ತ ಕೂಡ ಹರಿಸಿದ್ದಾರೆ. ಟೀಸರ್ ನೋಡಿ ವ್ಹಾವ್ ಅಂತ ಹುಬ್ಬೇರಿಸಿದ್ದವ್ರಿಗೆ ಅದ್ರ ಹಿಂದಿನ ಶ್ರಮ, ಪರಿಶ್ರಮವೆಷ್ಟು ಅನ್ನೋದನ್ನ ಗೊತ್ತು ಮಾಡಿದ್ದಾರೆ. ನಿಜಕ್ಕೂ ಕಿರೀಟಿ ಡೆಡಿಕೇಷನ್ ನೆಕ್ಸ್ಟ್​ ಲೆವೆಲ್​ಗಿದ್ದು, ಆ ರೋಚಕ ಜರ್ನಿಯ ಝಲಕ್ ರಿವೀಲ್ ಆಗಿದೆ.

ಬಿದ್ದು ಎದ್ದು ಗೆದ್ದ ಕಿರೀಟಿ. ಯೆಸ್.. ಬಳ್ಳಾರಿ ಕುವರ ಕಿರೀಟಿ ಹೀರೋ ಇಂಟ್ರಡಕ್ಷನ್ ಟೀಸರ್ ನೋಡಿ, ಎಲ್ರೂ ಫಿದಾ ಆಗಿದ್ರು. ಗಣಿದಣಿ ಮಗ ಅನ್ನೋದಕ್ಕಿಂತ ಹೆಚ್ಚಾಗಿ ಪ್ರತಿಭಾನ್ವಿತ ಕಲಾವಿದ ಅನ್ನೋ ಶಹಬ್ಬಾಶ್​ಗಿರಿ ನೀಡಿದ್ರು. ಯಾಕಂದ್ರೆ ಟೀಸರ್​ನಲ್ಲಿ ಆತನ ಹಾರ್ಡ್​ ವರ್ಕ್​ ಹಾಗೂ ಡೆಡಿಕೇಷನ್ ಕಾಣ್ತಿತ್ತು.

ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ ಕಿರೀಟಿ ನಟನೆಯ ಮೊದಲ ಸಿನಿಮಾದ ಇಂಟ್ರೂಡಕ್ಷನ್ ಟೀಸರ್ ಯೂಟ್ಯೂಬ್​ನಲ್ಲಿ ಧೂಳೆಬ್ಬಿಸ್ತಿದೆ. ಕಿರೀಟಿ ಸ್ಟಂಟ್ಸ್, ಡ್ಯಾನ್ಸ್, ಆ್ಯಕ್ಷನ್ ಸೀಕ್ವೆನ್ಸ್ ಕಂಡು ಚಿತ್ರರಸಿರಷ್ಟೇ ಅಲ್ಲ, ಕ್ಲಾಪ್ ಮಾಡಲು ಬಂದ ರಾಜಮೌಳಿಯೇ ಹುಬ್ಬೇರಿಸಿದ್ರು. ಇಷ್ಟೆಲ್ಲಾ ಮೆಚ್ಚುಗೆ ಪಡೆದಿರೋ ಕಿರೀಟಿ ಸಾಹಸದ ಹಿಂದೆ ಇರೋ ಆ ಪರಿಶ್ರಮ, ನೋವು, ರಕ್ತದ ಪರಿಚಯ ನಿಮಗೆ ತಿಳಿಸೋ ಸಮಯ ಬಂದಿದೆ.

ಇದು ಟೀಸರ್ ಮೇಕಿಂಗ್ ವಿಡಿಯೋ ಝಲಕ್. ಟೀಸರ್ ಹಿಂದಿನ ಪರಿಶ್ರಮದ ಸಣ್ಣದೊಂದು ಝಲಕ್​ನ ವಿಡಿಯೋ ಮೂಲಕ ಪರಿಚಯಿಸೋ ಪ್ರಯತ್ನ ಚಿತ್ರತಂಡ ಮಾಡಿದೆ.  ಆ ವಿಡಿಯೋ ತುಣುಕಿನಲ್ಲಿ ಕಿರೀಟಿ ಪರಿಶ್ರಮ ಎದ್ದು ಕಾಣ್ತಿದೆ. ಬಿದ್ದು, ಎದ್ದು, ಪೆಟ್ಟು ಮಾಡಿಕೊಂಡ್ರೂ ಛಲ ಬಿಡಡರ ಕಿರೀಟಿ ಸ್ಟಂಟ್​ಗಳನ್ನ ಅದ್ಭುತವಾಗಿ ಮಾಡಿದ್ದಾರೆ. ಖ್ಯಾತ ಸ್ಟಂಟ್ ಮಾಸ್ಟರ್ ಪೀಟರ್ ಹೇನ್ ಸಾರಥ್ಯದಲ್ಲಿ ಮೂಡಿ ಬಂದಿರುವ ಸ್ಟಂಟ್ಸ್ ಅಕ್ಷರಶಃ ಮೈ ಜುಮ್ ಎನಿಸುತ್ತವೆ.

ಕಿರೀಟಿ ಕಾರ್ ಮೇಲೆ ಜಂಪ್ ಮಾಡೋ ದೃಶ್ಯ, ಡ್ಯೂಪ್ ಇಲ್ಲದೆ ಸ್ವತೈ ಅವ್ರೇ ರಿಯಲ್ ಆಗಿ ಮಾಡಿದ್ದು, ಆ ವೇಳೆ ಕಾರಿನ ಗ್ಲಾಸ್ ಬ್ರೇಕ್ ಆಗಿ ಕಾಲು ಹಾಗೂ ಬೆರಳುಗಳಲ್ಲಿ ರಕ್ತ ಕಾಣಿಸಿಕೊಂಡಿತ್ತು. ಅಲ್ಲಿಗೂ ಸ್ಟಂಟ್ ಮಾಸ್ಟರ್ ಪೀಟರ್ ಹೇನ್ ಬಳಿಯೇ ಬ್ಯಾಂಡೇಜ್ ಹಾಕಿಸಿಕೊಂಡು, ಮತ್ತೆ ಶೂಟಿಂಗ್​ನಲ್ಲಿ ಭಾಗಿಯಾಗಿದ್ರು ಕಿರೀಟಿ. ಇದು ಅವ್ರ ಸಿನಿಮಾ ಪ್ಯಾಷನ್​ನ ಕೈಗನ್ನಡಿಯಾಗಿದೆ.

ತೆಲುಗಿನ ಬಿಗ್ ಬ್ಯಾನರ್ ವಾರಾಹಿ ಫಿಲ್ಮ್ ಪ್ರೊಡಕ್ಷನ್ ನಡಿ ಅದ್ಧೂರಿ ಬಜೆಟ್ ನಲ್ಲಿ ಪ್ರೊಡಕ್ಷನ್ ನಂ.15 ತಯಾರಾಗ್ತಿದೆ. ಮಯಾಬಜಾರ್ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ನಿರ್ದೇಶನ, ಬಾಹುಬಲಿ ಛಾಯಾಗ್ರಾಹಕ ಸೆಂಥಿಲ್ ಕುಮಾರ್ ಕ್ಯಾಮೆರಾ ಕೈಚಳಕ ಹಾಗೂ ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಕಿರೀಟಿ ಸಿನಿಮಾಗಿದೆ. ಕಿರೀಟಿ ತಂದೆ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಬಣ್ಣ ಹಚ್ಚಿದ್ದು, ಶ್ರೀಲೀಲಾ ನಾಯಕನಟಿಯಾಗಿ ನಟಿಸ್ತಿದ್ದು, ಜೆನಿಲಿಯಾ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರಕ್ಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES