Monday, December 23, 2024

ಸಿದ್ದರಾಮಯ್ಯ ಅಲ್ಲ ಸುಳ್ಳಿನರಾಮಯ್ಯ : ಹೆಚ್​​ಡಿಕೆ

ಚಾಮರಾಜನಗರ : ಸಿದ್ದರಾಮಯ್ಯ ಅಲ್ಲ ಸುಳ್ಳಿನರಾಮಯ್ಯ, ಅದೇ ಸರಿಯಾದ ಹೆಸರು ಎಂದು ಹನೂರಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದರು.

ಹನೂರಿನಲ್ಲಿ ಆಯೋಜನೆಯಾಗಿರುವ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಡೀ ಸಮಾಜದ ಶಾಂತಿ ಕದಡುವ, ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿ ಮಾಡ್ತಾ ಇದೆ. ಕಾಂಗ್ರೆಸ್ ಪಕ್ಷವು ಆ ಬೆಂಕಿಗೆ ಪೆಟ್ರೋಲ್ ಸುರಿತಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಕೋಮುದಳ್ಳುರಿ ಉಂಟಾಗುತ್ತಿದೆ. ಸರ್ವಜನಾಂಗದ ಶಾಂತಿ ತೋಟವನ್ನು ಹಾಳು ಮಾಡ್ತಾ ಇದಾರೆ. ಆದರೆ ಜೆಡಿಎಸ್ ಪಕ್ಷವು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಲು ಕಾಪಾಡಲು ಶ್ರಮಿಸುತ್ತಿದ್ದೇವೆ ಎಂದರು.

ಅದುವಲ್ಲದೇ ಸುಳ್ಳಿನರಾಮಯ್ಯ ಮಾತಿನಲ್ಲೊಂದು ಮನಸಿನಲ್ಲೊಂದು ಎನ್ನೊದು ಜನರಿಗೆ ಗೊತ್ತಾಗಿದೆ. ಕಾಂಗ್ರೆಸ್ ಪಕ್ಷದ ಸಭೆಯ ಉಸ್ತುವಾರಿ ಕಾರ್ಯದರ್ಶಿ ಮುಂದೆ ಇದೇ ಸುಳ್ಳುರಾಮಯ್ಯ ಮಾತನಾಡ್ತಾ ಹೇಳಿದ್ದಾರೆ. ಈ ದೇಶದಲ್ಲಿ ಸಂವಿಧಾನ ಉಳಿಬೇಕಾದರೆ ಪ್ರಜಾಪ್ರಭುತ್ವ ಉಳಿಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಬುಡಸಮೇತ ಕಿತ್ತೊಗೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಇದರಲ್ಲೆ ಗೊತ್ತಾಗಲ್ವಾ ಬಿಜೆಪಿ ಸುಳ್ಳುರಾಮಯ್ಯ ಮನಸಿನಲ್ಲಿ ಬೇರೂರಿದೆ ಎಂದು. ಕಾಂಗ್ರೆಸ್ ಪಕ್ಷದವರ ನಿಲುವು ಏನಿದೆ?  ಇಡೀ ದೇಶದಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷವು ಧೂಳಿಪಟವಾಗಿದೆ. ಇಲ್ಲಿ ಅಲ್ಪಸ್ವಲ್ಪ ಉಳಿದಿದೆ ಅಷ್ಟೆ ಎಂದು, ಮುಂದೆ ಅದೂ ಕೂಡ ಇಲ್ಲವಾಗಲಿದೆ. ಜೆಡಿಎಸ್ ಪರ ಜನರ ಒಲವಿದೆ ಮುಂದೆ ನಾವು ಸಂಪೂರ್ಣ ಅಧಿಕಾರಕ್ಕೆ ಬರುತ್ತೇವೆ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES