Thursday, January 23, 2025

ಮುಸ್ಲಿಂ ವೋಟಿಗಾಗಿ ದೇಶ ಮಾರಾಟ: ಯತ್ನಾಳ್

ವಿಜಯಪುರ : ಮುಸ್ಲಿಂ ವೋಟಿನ ಸಲುವಾಗಿ ದೇಶದ ಮಾರಾಟಕ್ಕೆ ತಯಾರಾಗಿದ್ದಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹುಬ್ಬಳ್ಳಿ ಗಲಾಟೆಯಲ್ಲಿ ಆರ್ ಎಸ್ ಎಸ್ ಮುರ್ದಾಬಾದ್, ಐ ಎಸ್ ಐ ಜಿಂದಾಬಾದ್ ಘೋಷಣೆ ವಿಡಿಯೋ ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಅಲ್ಲದೇ ಮುಗ್ಧ, ಅಮಾಯಕ ಜನರನ್ನು ಬಂಧಿಸಬಾರದು ಅಂತ ಒಬ್ಬರು ನಾಯಕರು ಟ್ವಿಟ್ ಮಾಡ್ತಾರೆ. ಅವರಿಗೆ ಅಮಾಯಕರು ಅಂತ ರಾತ್ರಿ ಕನಸು ಬಿದ್ದಿತ್ತಾ..? ಮುಸ್ಲಿಂ ವೋಟಿನ ಸಲುವಾಗಿ ದೇಶದ ಮಾರಾಟಕ್ಕೆ ತಯಾರಾಗಿದ್ದಾರೆ. ಮುಂದಿನ ಬಾರಿ ಮುಸ್ಲಿಂ ವೋಟ್​​ನಿಂದಷ್ಟೇ ಆಯ್ಕೆಯಾಗಿ ಬರ್ತಿರಾ..?  ತಾಕತ್, ದಮ್ ಇದ್ದರೆ ಆಯ್ಕೆಯಾಗಿ ಬನ್ನಿ ನೋಡೋಣ ಅಂತ ಹೆಚ್​​ಡಿಕೆಗೆ ಚಾಲೆಂಜ್ ಹಾಕಿದರು.

ಇನ್ನು ಹಿಂದೂಗಳು ಯಾಕೆ ವೋಟ್ ಹಾಕಬೇಕು. ನೀವು ಹಿಂದೂಗಳ ಮನೆ, ದೇಗುಲ ಮೇಲೆ ಕಲ್ಲು ಹೊಡೆದಿರುವ ಬಗ್ಗೆ ಖಂಡಿಸುವುದಿಲ್ಲ. ಪೊಲೀಸರ ಮೇಲೆ ಹಲ್ಲೆ ಮಾಡಿರೋದು ಖಂಡಿಸುವುದಿಲ್ಲ. ನಾಳೆ ನಿಮ್ಮ ಸರ್ಕಾರ ಬಂದ್ರೆ ಪೊಲೀಸರಿಗೆ ಏನು ರಕ್ಷಣೆ ಕೊಡ್ತೀರಿ..?  ಅವರು ಹೇಳಿದ್ದಂತೆ ಸರ್ಕಾರ ನಡೆಸ್ತಿರಾ? ಈ ಎಲ್ಲಾ ಘಟನೆಗಳಿಂದ ಇವರ ಬಣ್ಣ ಬಯಲಾಗುತ್ತಿದೆ ಎಂದು ಕಿಡಿಕಾರಿದರು.

ನನ್ನ ಮಗನಿಗೆ ಗುಳಗಿ ಕೊಡಬೇಕು ಅಂತ ಅಳ್ತಾರೆ. ಇದು ನಾಟಕ ಅಂತ ಗೊತ್ತಿದೆ. ಯಾವಾಗ ಅಳತ್ತಾರೋ ಯಾವಾಗ ಕುತ್ತಿಗೆ ಕುಯ್ತಾರೆ ಗೊತ್ತಿಲ್ಲ. ಕಾಶ್ಮೀರ ಫೈಲ್ ಸಿನಮಾದಿಂದ ಸ್ವಲ್ಪ ಸತ್ಯಘಟನೆಯನ್ನು ತೋರಿಸಿದ್ದಾರೆ.
ಮುಸ್ಲಿಮರು ಶೇಕಡಾ 50 ರಷ್ಟಾದರೆ ಒಬ್ಬ ಹಿಂದೂವನ್ನು ಜೀವನ ಮಾಡೋಕೆ ಬಿಡಲ್ಲ. ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಏನಿದೆ ? ಇದರ ಬಗ್ಗೆ ಒಮ್ಮೆಯಾದರೂ ಸಿದ್ದರಾಮಯ್ಯ, ಡಿಕೆಶಿ ಮಾತನಾಡ್ತಾರಾ ?

ಇನ್ನು ಬ್ರದರ್ಸ್ ಮುಸ್ಲಿಮರು ಶೇಕಡಾ 50 ರಷ್ಟಾದರೆ ಯಾವ ಡಿಕೆಶಿ, ಯಾವ ಸಿದ್ದರಾಮಯ್ಯ, ಯಾವ ಎಂ.ಬಿ ಪಾಟೀಲ್, ಅದರಲ್ಲೂ ಕುಮಾರಣ್ಣಗೆ ಮೊದಲೇ ವೋಟ್ ಹಾಕಲ್ಲ ಮತ್ತು ಕ್ಯಾರೆ ಅನ್ನಲ್ಲ ಎಂದು ಯತ್ನಾಳ್ ವಿರೋಧ ಪಕ್ಷದ ನಾಯಕರ ವಿರುದ್ದ ವ್ಯಂಗ್ಯವಾಡಿದರು.

RELATED ARTICLES

Related Articles

TRENDING ARTICLES