Thursday, January 23, 2025

ಕಾಂಗ್ರೆಸ್​​​ನವರು ತಪ್ಪು ದಾರಿ ಹಿಡಿದಿದ್ದಾರೆ : ಸಚಿವ ಡಾ ಕೆ ಸುಧಾಕರ್

ಚಿಕ್ಕಬಳ್ಳಾಪುರ : ಎರಡು ವರ್ಷದಲ್ಲಿ ಕೋಲಾರ-ಚಿಕ್ಕಬಳ್ಳಾಪುರ-ಬೆಂಗಳೂರು ಗ್ರಾಮಾಂತರಕ್ಕೆ‌ ನೀರು ಕೊಡುವ ಕೆಲಸ ಮಾಡ್ತೀನಿ ಅಂತ ಸಿ ಎಂ ಬಸವರಾಜ ಬೊಮ್ಮಾಯಿ ನಮಗೆ ಭರವಸೆ ನೀಡಿದ್ದಾರೆ ಆ ಆ ಭರವಸೆಯನ್ನ ನಾನು ನಂಬಿದ್ದೇನೆ ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದರು.

ರಾಜ್ಯ ಸರ್ಕಾರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಎತ್ತಿನಹೊಳೆ‌ ಯೋಜನೆಯಿಂದ ೨ ವರ್ಷದಲ್ಲಿ ನೀರು ಬರಲಿದೆ ಎಂದು ಮುಖ್ಯಮಂತ್ರಿ  ಭರವಸೆ ನೀಡಿದ್ದಾರೆ ಎಂದರು.

ಇನ್ನು ರಾಜ್ಯ ಸರ್ಕಾರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಚುನಾವಣೆಗಳು ಹತ್ತಿರ ಇರುವಾಗ ವಿಪಕ್ಷಗಳ ಹೋರಾಟ ಸ್ವಾಭಾವಿಕವಾದದ್ದು. ಆದರೆ ಅವರು ಸಾಗುತ್ತಿರುವ ಹಾದಿ ತಪ್ಪು ದಾರಿ.
ಕಾಂಗ್ರೆಸ್​​ನವರು ತಪ್ಪು ದಾರಿ ಹಿಡಿದಿದ್ದಾರೆ. ರಾಜ್ಯ ಸುಸಂಸ್ಕೃತ ರಾಜಕಾರಣಕ್ಕೆ ಮಾದರಿಯಾಗಿದೆ. ಆ ಹಾದಿ ಹಿಡಿದರೆ ಒಳ್ಳೆಯದಾಗುತ್ತದೆ ತಪ್ಪು ದಾರಿ ಹಿಡಿದರೆ ಹಳ್ಳ ಹಿಡಿಯೋದು ಗ್ಯಾರಂಟಿ ಎಂದು ವಿರೋಧ ಪಕ್ಷದ ವಿರುದ್ದ ಕಿಡಿಕಾರಿದರು.

RELATED ARTICLES

Related Articles

TRENDING ARTICLES