Monday, December 23, 2024

ಕಮೀಷನ್ ಮತ್ತು ಕಾಂಗ್ರೆಸ್ ಒಟ್ಟಿಗೆ ಹುಟ್ಟಿದ್ದು : ಸಚಿವ ಸುನೀಲ್ ಕುಮಾರ್

ಬಾಗಲಕೋಟೆ : ಕಮೀಷನ್ ಮತ್ತು ಕಾಂಗ್ರೆಸ್ ಎರಡೂ ಒಟ್ಟಿಗೆ ಹುಟ್ಟಿದ್ದು.ಕಾಂಗ್ರೆಸ್ ಎಲ್ಲಿಯತನಕ ಬೆಳೆಯುತ್ತೋ ಅಲ್ಲಿತನಕ ಕಮೀಷನ್ ಕೂಡ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ ಎಂದು ಬಾಗಲಕೋಟೆಯಲ್ಲಿ ಇಂಧನ ಸಚಿವ ಸುನೀಲ್ ಕುಮಾರ್ ಕಾಂಗ್ರೆಸ್​​ ವಿರುದ್ಧ ಕಿಡಿಕಾರಿದರು.

ಮಠಗಳ ಅನುದಾನದಲ್ಲಿ ಕಮೀಷನ್ ಆರೋಪದ ವಿಚಾರಕ್ಕೆ ಪ್ರತಿಕ್ರಿಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ಕಾಲಾವಧಿ ಸರ್ಕಾರದ ಎಲ್ಲ ಹಂತದಲ್ಲಿ ಕಮಿಷನ್ ಮುಖಾಂತರ ಇಡೀ ವ್ಯವಸ್ಥೆ ಹಾಳು ಮಾಡಿದ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ. ಅದನ್ನ ಸರಿ ಮಾಡುವ ಪ್ರಯತ್ನ ನಮ್ಮ ಸರ್ಕಾರದಲ್ಲಿ ನಾವು ಮಾಡ್ತಿದ್ದೇವೆ. ನಾವು ಪ್ರಧಾನಿ ಮೋದಿ ನೇತೃತ್ವದಲ್ಲಿ ಸರ್ಕಾರ ನಡೆಸುತ್ತಿರುವುದು. ಹೀಗಾಗಿ ಯಾವುದೇ ಕಾರಣಕ್ಕೂ ಯಾವುದೇ ಹಂತದಲ್ಲಿ ಅವಕಾಶ ಕೊಡೋದಿಲ್ಲ.ಅದರ ನಿರೀಕ್ಷೆ ಮಾಡುವ ಪ್ರಶ್ನೆ ಇಲ್ಲ ಎಂದು ತಿಳಿಸಿದರು.

ಇನ್ನು ಮಾನ್ಯ ಮುಖ್ಯಮಂತ್ರಿಗಳು ದೂರ ದೃಷ್ಟಿವುಳ್ಳ ಬಜೆಟ್ ಕೊಡೋ ಮುಖಾಂತರ ರಾಜ್ಯದ ಜನರನ್ನು ಅಭಿವೃದ್ಧಿ ಕಡೆ ತೆಗೆದುಕೊಂಡು ಹೋಗೋ ನವ ಕರ್ನಾಟಕ ನಿರ್ಮಾಣದ ಕಡೆಗೆ ಪ್ರಯತ್ನ ಮಾಡಿದ್ದಾರೆ. ಯಾರು ಈ ರೀತಿ ಆರೋಪ ಮಾಡ್ತಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನ ಕೊಟ್ಟರೆ ನಾನು ತನಿಖೆ ಮಾಡಿಸುತ್ತೇನೆ ಎಂದಿದ್ದಾರೆ.

ಅದುವಲ್ಲದೇ ಧರ್ಮದ ಕುರಿತಂತೆ ಸಾಧು ಸಂತರ ಬಗ್ಗೆ ನಮಗೆ ವಿಶೇಷವಾದ ಗೌರವ ಇದೆ. ಹೀಗಾಗಿ ಯಾವುದನ್ನು ನೀವು ಬಹಿರಂಗವಾಗಿ ಹೇಳಿದ್ರೋ, ಆ ದಾಖಲೆಗಳನ್ನೂ ಕೂಡ ಅಷ್ಟೇ ದೊಡ್ಡ ಪ್ರಮಾಣದಲ್ಲಿ ನೀವು ಬಹಿರಂಗವಾಗಿ ಕೊಡಬೇಕು.  ಬಹಿರಂಗವಾಗಿ ಕೊಡೋಕೆ ಆಗಲ್ಲ ಅಂದ್ರೆ, ಮುಖ್ಯಮಂತ್ರಿಗಳ ಹತ್ತಿರ ಬಂದು ಮಾತನಾಡಿ ದಾಖಲೆಗಳನ್ನ ಕೊಡಿ, ನಾವು ತನಿಖೆ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್​​ಗೆ ಮಾತಾಡುವ ನೈತಿಕತತೆನೇ ಇಲ್ಲ.ಕಮೀಷನ್ ಮತ್ತು ಕಾಂಗ್ರೆಸ್ ಒಟ್ಟಿಗೆ ದೇಶದಲ್ಲಿ ಜನ್ಮತಾಳಿದೆ ಹೀಗಾಗಿ ಅವರು ಈ ಬಗ್ಗೆ ಮಾತನಾಡುವ ಅಗತ್ಯ ಇಲ್ಲ. ಅವತ್ತಿಂದ ಇವತ್ತಿನವರೆಗೂ ಯಾವ ಯಾವ ರಾಜ್ಯದಲ್ಲಿ ಕಮೀಷನ್ ವಿಪರೀತ ಹಂತಕ್ಕೆ ತೆಗೆದುಕೊಂಡು ಹೋಗಿ ವಿಸರ್ಜನೆ ಆಗಿದೆ. .ಕರ್ನಾಟಕದಲ್ಲೂ ಕೂಡ ಇದೇ ರೀತಿಯ ವಾತಾವರಣ ಅವರ ಕಾಲಾವಧಿಯಲ್ಲಿ ಸೃಷ್ಟಿ ಮಾಡಿಕೊಂಡಿದ್ದರು. ಅದನ್ನ ಶೂನ್ಯಕ್ಕೆ ತರುವ ಪ್ರಯತ್ನ ಮಾಡುತ್ತಿದೇವೆ. ಇಂತಹ ಸಂದರ್ಭದಲ್ಲಿ ಜನರ ದಿಕ್ಕನ್ನು ಬೇರೆ ಕಡೆ ಸೆಳೆಯಬೇಕು ಅನ್ನೋ ಪ್ರಯತ್ನದಲ್ಲಿ ಆರೋಪ ಮಾಡ್ತಿದ್ದಾರೆ ಎಂದು ಸಚಿವ ಸುನೀಲ್ ಕುಮಾರ್ ಆಕ್ರೋಶ ಹೊರಹಾಕಿದರು.

RELATED ARTICLES

Related Articles

TRENDING ARTICLES