ಬೆಂಗಳೂರು: 4೦% ಕಮೀಷನ ಕಿರುಕುಳಕ್ಕೆ ಸಂತೋಷ ಪಾಟೀಲ್ ಕಾಂಟ್ರಾಕ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ಪ್ರೆಸ್ ಮೀಟ್ನಲ್ಲಿ ಹೇಳಿದ್ದಾರೆ.
ಬಿಜೆಪಿಯ ಈಶ್ಚರಪ್ಪನವರ ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ ಪಕ್ಷ ಹೋರಾಟ ಮಾಡಿದ ಮೇಲೆ ಈಶ್ವಪ್ಪನವರು ರಾಜಿನಾಮೆ ಸಲ್ಲಿಸಿದ್ದಾರೆ. ಈಶ್ವಪನವರ ರಾಜಿನಾಮೆ ನಮ್ಮ ಮುಖ್ಯ ಉದ್ದೇಶ ಅಲ್ಲ . ಸಂತೋಷ ಪಾಟೀಲ್ ವಾಟ್ಸಪ್ ಮೂಲಕ ಡೆತ್ ನೋಟ್ ಕಳುಹಿಸಿದ್ದಾರೆ. ತಡವಾಗಿ ಪ್ರಕರಣ ದಾಖಲಾಗಿದೆ. ಅದರಲ್ಲಿ ಕೇವಲ ಸೆಕ್ಷನ್ 305 ಅಷ್ಟೆ ದಾಖಲಾಗಿದೆ. ಸಂತೋಷ ಸಹೋದರ ಪ್ರಶಾಂತ ಕಂಪ್ಲೆಂಟ್ ನಲ್ಲಿ ೪೦% ಕಮಿಷನ್ ಉಲ್ಲೇಖವಿದೆ. ಆದರೆ ಭ್ರಷ್ಟಾಚಾರ ಅಡಿಯಲ್ಲಿ ಕೇಸ್ ದಾಖಲಾಗಿಲ್ಲ. ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಬೇಕು ಎಂದರು.
ಮೋದಿಯವರು ನಾ ಖಾಯುಂಗಾ ನಾ ಖಿಲಾಯುಂಗಾ ಅಂತಾ ಹೇಳಿದ್ದಾರೆ. ಅವರದ್ದೇ ಕಾರ್ಯಕರ್ತ ಸಂತೋಷ 4೦% ಕಮೀಷನ್ ಬಗ್ಗೆ ಸಾಕಷ್ಟು ಪತ್ರಗಳು ಬರೆದಿದ್ದರು. 8 ತಿಂಗಳುಗಳ ಹಿಂದೇ ನೇ ಪತ್ರ ಬರೆದಿದ್ದ ಸಂತೋಷ ಚೌಕಿದಾರ್ ಮೋದಿ ಈಗ ಏನು ಮಾಡ್ತಾ ಇದ್ದಾರೆ …? ಇಲ್ಲಿ ಯಾಕೆ ಪ್ರಧಾನಿ ಸುಮ್ಮನಿದ್ದಾರೆ ? ಕೂಡಲೇ ಈಶ್ವರಪ್ಪನವರ ಮೇಲೆ ಭ್ರಷ್ಟಾಚಾರದ ಪ್ರಕರಣ ದಾಖಲಿಸಿ ಬಂಧಿಸಬೇಕು. ಈಶ್ವರಪ್ಪನವರ ಪ್ರಕರಣ ಕೂಡ ಹೈ ಕೋರ್ಟ ಸುಪರವಿಜನ್ ದಲ್ಲಿ ಮಾನಿಟರ್ ಮಾಡಬೇಕು. ಈ ಪ್ರಕರಣದ ಮೂಲಕ ಜನಾಂದೋಲನ ನಡೆಸುತ್ತೇವೆ. ಈ ರಾಜ್ಯದಲ್ಲಿ 4೦% ಸರ್ಕಾರ ಇದೆ. ಇದರ ಮೂಲಕ ರಾಜ್ಯದ ಎಲ್ಲ ಮೂಲೆಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ. ಜನರಲ್ಲಿ ಸರ್ಕಾರದ ಭ್ರಷ್ಟಾಚಾರ ಕುರಿತು ಜಾಗೃತಿ ಮೂಡಿಸುತ್ತೇವೆ. ಈ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಬರಬೇಕು. 2013ರಿಂದ 2018ರವರೆಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಒಳ್ಳೆಯ ಆಡಳಿತ ನೀಡಿದ್ದೇವೆ. ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಎಂ ಬಿ ಪಟೀಲ್ ಹೇಳಿದ್ದಾರೆ.