Monday, December 23, 2024

ರಾಜ್ಯದಲ್ಲಿ 4೦% ಕಮಿಷನ್ ಸರ್ಕಾರದ ಇದೆ : ಎಂ ಬಿ ಪಾಟೀಲ್

ಬೆಂಗಳೂರು: 4೦% ಕಮೀಷನ ಕಿರುಕುಳಕ್ಕೆ ಸಂತೋಷ ಪಾಟೀಲ್ ಕಾಂಟ್ರಾಕ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ಪ್ರೆಸ್ ಮೀಟ್​ನಲ್ಲಿ ಹೇಳಿದ್ದಾರೆ.

ಬಿಜೆಪಿಯ ಈಶ್ಚರಪ್ಪನವರ ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ ಪಕ್ಷ ಹೋರಾಟ ಮಾಡಿದ ಮೇಲೆ ಈಶ್ವಪ್ಪನವರು ರಾಜಿನಾಮೆ ಸಲ್ಲಿಸಿದ್ದಾರೆ. ಈಶ್ವಪನವರ ರಾಜಿನಾಮೆ ನಮ್ಮ ಮುಖ್ಯ ಉದ್ದೇಶ ಅಲ್ಲ . ಸಂತೋಷ ಪಾಟೀಲ್ ವಾಟ್ಸಪ್ ಮೂಲಕ ಡೆತ್ ನೋಟ್ ಕಳುಹಿಸಿದ್ದಾರೆ. ತಡವಾಗಿ ಪ್ರಕರಣ ದಾಖಲಾಗಿದೆ. ಅದರಲ್ಲಿ ಕೇವಲ ಸೆಕ್ಷನ್ 305 ಅಷ್ಟೆ ದಾಖಲಾಗಿದೆ. ಸಂತೋಷ ಸಹೋದರ ಪ್ರಶಾಂತ ಕಂಪ್ಲೆಂಟ್ ನಲ್ಲಿ ೪೦% ಕಮಿಷನ್ ಉಲ್ಲೇಖವಿದೆ. ಆದರೆ ಭ್ರಷ್ಟಾಚಾರ ಅಡಿಯಲ್ಲಿ ಕೇಸ್ ದಾಖಲಾಗಿಲ್ಲ. ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಬೇಕು ಎಂದರು.

ಮೋದಿಯವರು ನಾ ಖಾಯುಂಗಾ ನಾ ಖಿಲಾಯುಂಗಾ ಅಂತಾ ಹೇಳಿದ್ದಾರೆ. ಅವರದ್ದೇ ಕಾರ್ಯಕರ್ತ ಸಂತೋಷ 4೦% ಕಮೀಷನ್ ಬಗ್ಗೆ ಸಾಕಷ್ಟು ಪತ್ರಗಳು ಬರೆದಿದ್ದರು. 8 ತಿಂಗಳುಗಳ‌ ಹಿಂದೇ ನೇ ಪತ್ರ ಬರೆದಿದ್ದ ಸಂತೋಷ ಚೌಕಿದಾರ್ ಮೋದಿ ಈಗ ಏನು ಮಾಡ್ತಾ ಇದ್ದಾರೆ …? ಇಲ್ಲಿ ಯಾಕೆ ಪ್ರಧಾನಿ ಸುಮ್ಮನಿದ್ದಾರೆ ? ಕೂಡಲೇ ಈಶ್ವರಪ್ಪನವರ ಮೇಲೆ ಭ್ರಷ್ಟಾಚಾರದ ಪ್ರಕರಣ ದಾಖಲಿಸಿ ಬಂಧಿಸಬೇಕು. ಈಶ್ವರಪ್ಪನವರ ಪ್ರಕರಣ ಕೂಡ ಹೈ ಕೋರ್ಟ ಸುಪರವಿಜನ್ ದಲ್ಲಿ ಮಾನಿಟರ್ ಮಾಡಬೇಕು. ಈ ಪ್ರಕರಣದ ಮೂಲಕ ಜನಾಂದೋಲನ ನಡೆಸುತ್ತೇವೆ. ಈ‌ ರಾಜ್ಯದಲ್ಲಿ 4೦% ಸರ್ಕಾರ ಇದೆ. ಇದರ ಮೂಲಕ ರಾಜ್ಯದ ಎಲ್ಲ‌ ಮೂಲೆಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ. ಜನರಲ್ಲಿ ಸರ್ಕಾರದ ಭ್ರಷ್ಟಾಚಾರ ಕುರಿತು ಜಾಗೃತಿ ಮೂಡಿಸುತ್ತೇವೆ. ಈ ರಾಜ್ಯದಲ್ಲಿ‌ ಮತ್ತೆ ಕಾಂಗ್ರೆಸ್ ಸರ್ಕಾರ‌ ಬರಬೇಕು. 2013ರಿಂದ 2018ರವರೆಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಒಳ್ಳೆಯ ಆಡಳಿತ ನೀಡಿದ್ದೇವೆ. ಚಿಕ್ಕೋಡಿಯಲ್ಲಿ‌ ಕಾಂಗ್ರೆಸ್ ಹಿರಿಯ ನಾಯಕ ಎಂ ಬಿ ಪಟೀಲ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES