Thursday, January 23, 2025

ಕರ್ನಾಟಕಕ್ಕೆ ಒಬ್ಬ ಸ್ಟ್ರಾಂಗ್ ಹೋಮ್ ಮಿನಿಸ್ಟರ್ ಬೇಕು : ಯತ್ನಾಳ್

ವಿಜಯಪುರ : ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದಕ್ಕೆ ಸಾಮರಸ್ಯ ಕದಡುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಕರ್ನಾಟಕಕ್ಕೆ ಒಬ್ಬ ಸ್ಟ್ರಾಂಗ್ ಹೋಮ್ ಮಿನಿಸ್ಟರ್ ಬೇಕಾಗಿದೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಲ್ಲೆಲ್ಲಿ ಸ್ವಲ್ಪ ವೀಕ್ ಇದೆ, ಅಲ್ಲಿ ಇಂತಹ ಗಲಾಟೆ ಆಗುತ್ತಿವೆ. ಅಲ್ಲದೇ ಈ ಕಮ್ಯೂನಲ್ ಇಸ್ಯೂ ತಡೆಯಲು ಗೃಹ ಸಚಿವರು ವಿಫಲರಾಗಿದ್ದಾರೆ. ಮತ್ತು ರಾಜ್ಯದಲ್ಲಿ ಇದನ್ನು ಮಾಡಿಸುತ್ತಿದ್ದಾರೆ. ಆದ್ದರಿಂದ  ಕರ್ನಾಟಕಕ್ಕೆ ಒಬ್ಬ ಸ್ಟ್ರಾಂಗ್ ಹೋಮ್ ಮಿನಿಸ್ಟರ್ ಬೇಕು. ಬೇಕಾದ್ರೆ ಟಿವಿ ಪೇಪರ್​​ನಲ್ಲಿ ಹಾಕಿ ಒಬ್ಬ ಒಳ್ಳೆ ಗೃಹ ಮಂತ್ರಿ ಬೇಕಾಗಿದ್ದಾರೆ ಅಂತ ಎಂದು ಗೃಹ ಸಚಿವರ ವಿರುದ್ಧ ಕಿಡಿಕಾರಿದರು.

ಇನ್ನು ಉತ್ತರ ಪ್ರದೇಶದಲ್ಲಿ ಐದು ವರ್ಷದಲ್ಲಿ ಯಾವುದೇ ಗಲಾಟೆ ಆಗಿಲ್ಲ. ಗುಜರಾತ್​​ನಲ್ಲಿ 1 ಘಟನೆ ಬಿಟ್ಟರೆ ಬಿಜೆಪಿ 20 ವರ್ಷ ಆಡಳಿತದಲ್ಲಿದೆ ಎಲ್ಲಿ ಗಲಾಟೆ ಆಗಿದೆ ಎಂದರು.

ಅದುವಲ್ಲದೇ ಹುಬ್ಬಳ್ಳಿ ಗಲಭೆ ವಿಚಾರಕ್ಕೆ ಪ್ರತಿಕ್ರಿಯಿಸಿ ಪ್ರತಿಯೊಂದು ಮನೆಯ ಸರ್ಚ್ ಆಪರೇಷನ್ ಆಗಬೇಕು. ಗಲಭೆಯಲ್ಲಿ ಕೆಲವೊಂದು ಶಕ್ತಿಗಳು ಕೆಲಸ ಮಾಡುತ್ತಿವೆ. ಮೆರವಣಿಗೆ ಹೋಗುವ ಮೊದಲು ಮನೆಯ, ಅಂಗಡಿಯ ಮೇಲೆ ಸರ್ಚ್ ಮಾಡಬೇಕು. ಯಾರ ಮನೆಯಲ್ಲಿ ತಲ್ವಾರ್, ಜಂಬೆ ಕುರಿತು ಸರ್ಚ್ ಮಾಡಬೇಕು. ಎಂದು ತಿಳಿಸಿದರು.

ಗೃಹ ಸಚಿವ ಪರಿಶೀಲನೆ ಕೆಲಸ ಕೈ ಬಿಡಬೇಕು. ಇನ್ಮೇಲೆ ಓನ್ಲಿ ಆ್ಯಕ್ಷನ್ ಆಗಬೇಕು ಅಷ್ಟೇ. ಬರೀ ಕಥೆ ಹೇಳುವ ಕೆಲಸ ಆಗಬಾರದು.ಕಾಂಗ್ರೆಸ್​​ನವರು ಕುಮ್ಮಕ್ಕು ಕೊಟ್ಟಿದ್ದಾರೆ ಅಂತ ಕಥೆ ಹೇಳೋದು ಬೇಡಾ. ಬಿಜೆಪಿ ಅಧಿಕಾರ ಇದೆ, ನೀವೇನು ಮಾಡ್ತೀರಾ ಅಂತ ಜನತೆ ಕೇಳ್ತಾರೆ. ಅದಕ್ಕಾಗಿ ಬರೀ ಆ್ಯಕ್ಷನ್ ಆಗಬೇಕು ಎಂದು ವಾಗ್ದಾಲಿ ನಡೆಸಿದರು.

RELATED ARTICLES

Related Articles

TRENDING ARTICLES