Monday, December 23, 2024

ಗುತ್ತಿಗೆದಾರರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ

ಬೆಂಗಳೂರು : ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಅದರ ಜೊತೆಗೆ ಕೂಡಲೇ ಬಾಕಿ ಇರುವ ಗುತ್ತಿಗೆ ಹಣ ಬಿಡುಗಡೆ ಮಾಡಬೇಕು. ಇಲ್ಲವಾದ್ರೆ ಸಂತೋಷ್ ಪಾಟೀಲರಂತೆ ನೂರಾರು ಸಂಖ್ಯೆಯಲ್ಲಿ ಆತ್ಮಹತ್ಯೆಗಳು ನಡೆಯುತ್ತವೆ ಅಂತ ಗುತ್ತಿಗೆದಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ದಿನ ಬೆಳಗಾದ್ರೆ ಸಾಕು ಗುತ್ತಿಗೆದಾರರು ಇರೋ ಬರೋ ಹಣವನ್ನೆಲ್ಲಾ ಕೊಟ್ಟು ಪ್ರತಿದಿನ ಟೇಬಲ್ ಟು ಟೇಬಲ್ ಅಲೆದಾಡುವುದು ತಪ್ಪಿದ್ದಲ್ಲ.ಇನ್ನು ಸಿದ್ದರಾಮಯ್ಯ ಸರ್ಕಾರದಲ್ಲಿ 10% ಸಮ್ಮಿಶ್ರ ಸರ್ಕಾರದಲ್ಲಿ 20% ಕಮಿಷನರ್ ಅನ್ನೋ ಆರೋಪವನ್ನ ಬಿಜೆಪಿ ಮಾಡ್ತಿತ್ತು. ಆದ್ರೆ ಈಗ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರ್ರ್ತಿದ್ದಂತೆ ಕಮೀಷನ್ ದಂಧೆ ಈಗ ಏಕಾಏಕಿ‌ 40 %ಗೆ ಏರಿಕೆಯಾಗಿದ್ದು, ಗುತ್ತಿಗೆದಾರರ ಬದುಕು ಬೀದಿಗೆ ಬರುವುದರ ಜೊತೆಗೆ ಈಗ ಆತ್ಮಹತ್ಯೆಗೂ ಕಾರಣವಾಗಿದೆ.ಇದಕ್ಕೆ ಸೂಕ್ತ ಉದಾಹರಣೆಗಳು ನಮ್ಮ ಮುಂದಿವೆ.

ಇನ್ನು ಸಂತೋಷ್‌ಗೂ ಮೊದಲು ಆತ್ಮಹತ್ಯೆ ಮಾಡಿಕೊಂಡಿರುವ ಕೆಲ ಕಾಂಟ್ರ್ಯಾಕ್ಟರ್‌ಗಳ ವಿವರ :

ಕಮಿಷನ್ ದಂಧೆಗೆ ಬಲಿಯಾದರಾ ಗುತ್ತಿಗೆದಾರರು..? 

27/5/2015 – ಬಿಬಿಎಂಪಿ ಕಾಂಟ್ರ್ಯಾಕ್ಟರ್ ಆತ್ಮಹತ್ಯೆ
3/12/2016 – 70 ವರ್ಷದ ಕಾಂಟ್ರ್ಯಾಕ್ಟರ್ ಸೂಸೈಡ್
9/7/2018 ರಲ್ಲಿ ಮತ್ತೊಬ್ಬ ಗುತ್ತಿಗೆದಾರನ ಆತ್ಮಹತ್ಯೆ
18/6/2020 ರಲ್ಲಿ ಇನ್ನೊಬ್ಬ ಕಾಂಟ್ರ್ಯಾಕ್ಟರ್ ಸೂಸೈಡ್‌
8/1/2021ರಲ್ಲಿ ಮತ್ತೊಬ್ಬ ಗುತ್ತಿಗೆದಾರ ಆತ್ಮಹತ್ಯೆ

ಇವರೆಲ್ಲರೂ ಕೂಡಾ ಬಿಬಿಎಂಪಿಲಿ ಕಾಮಗಾರಿ ಮಾಡಿ ಹಣ ಬಿಡುಗಡೆ ಮಾಡಿಲ್ಲ ಅಂತ ಆತ್ಮಹತ್ಯೆ ಮಾಡ್ಕೊಂಡವರು.ಎಷ್ಟು ಪೆರ್ಸೆಂಟ್ ಬೇಕಾದ್ರೂ ಕೊಡ್ತೀವಿ ಬಿಲ್ ದುಡ್ಡು ಕೊಡ್ರಿ ಅಂತ ಅಂಗಲಾಚಿದ್ರೂ ಹಣ ಬಿಡುಗಡೆ ಮಾಡ್ಲಿಲ್ಲ. ಇದ್ರಿಂದ ತಮ್ಮ ಹಣ ಪಡೆಯಲಾಗದೆ ಹಣಕ್ಕಾಗಿ ಹೆಣ ಆದ್ರು. ಅವರ ಸಾವಿಗೆ ಯಾರು ಕಾರಣ? ಅನ್ನೋ ಪ್ರಶ್ನೆ ಉದ್ಬವಿಸಿದೆ.

ಇನ್ನೂ ಇದೇ ರೀತಿ ಬಿಬಿಎಂಪಿ ಗುತ್ತಿಗೆದಾರರಿಗೂ ಕೂಡಾ ಕಳೆದ ಮೂರು ವರ್ಷಗಳಿಂದ ಬರೋಬ್ಬರಿ ಮೂರು ಸಾವಿರ ಕೋಟಿಗೂ ಹೆಚ್ಚು ಹಣ ಬಾಕಿ ಉಳಿಸಿಕೊಳ್ಳಲಾಗಿದೆ. ಇದ್ರಿಂದ ಬಡ್ಡಿ ಕಟ್ಟಲು ಸಾಧ್ಯವಾಗದೆ ಸಾಕಷ್ಟು ಗುತ್ತಿಗೆದಾರರು ಜೀವನ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.ಈಗಲಾದ್ರೂ ಸರ್ಕಾರ ಹಾಗೂ ಬಿಬಿಎಂಪಿ ಎಚ್ಚೆತ್ತುಕೊಳ್ಳದಿದ್ರೆ, ನೂರಾರು ಸಂಖ್ಯೆಯಲ್ಲಿ ಆತ್ಮಹತ್ಯೆಗಳು ನಡೆಯಲಿದೆ ಅಂತ ಬಿಬಿಎಂಪಿ ಗುತ್ತಿಗೆದಾರರು ಎಚ್ಚರಿಸಿದ್ದಾರೆ.

ಸದ್ಯ ಸಂತೋಷ್ ಪಾಟೀಲ್ ಆತ್ಮಹತ್ಯೆ ಹಾಗೂ 40 % ಕಮಿಷನ್ ದಂಧೆ ಮೂರು ನಾಲ್ಕು ವರ್ಷಗಳಿಂದ ಬಾಕಿ ಬಿಲ್‌ಗಳು ನೀಡುವಂತೆ ಒತ್ತಾಯಿಸಿ ಮೇ 25 ರಿಂದ ಒಂದು ತಿಂಗಳು ರಾಜ್ಯಾದ್ಯಂತ ಕೆಲಸ ಸ್ಥಗಿತಗೊಳಿಸೋದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ.

ಸದ್ಯ ರಾಜ್ಯ ಸರ್ಕಾರಕ್ಕೆ ಶೇ. ೪೦ ರಷ್ಟು ಕಮೀಷನ್ ಸರ್ಕಾರ ಅನ್ನೋ ದೊಡ್ಡ ಕಳಂಕ ಅಂಟಿಕೊಂಡಿದ್ದು, ಈಗಾಗಲೇ ಸಚಿವ ಈಶ್ವರಪ್ಪ ತಲೆದಂಡವಾಗಿದ್ದು, ಮತ್ತಷ್ಟು ಜನ ಇದೇ ರೀತಿ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗ್ತಾರಾ..? ಇನ್ನೆಷ್ಟು ಗುತ್ತಿಗೆದಾರರು ಪ್ರಾಣ ಕಳೆದು ಕೊಳ್ತಾರೆ ಎಂಬುದೇ ಸದ್ಯದ ಪ್ರಶ್ನೆ.

RELATED ARTICLES

Related Articles

TRENDING ARTICLES