Friday, November 22, 2024

ಬೊಮ್ಮಾಯಿ ಬಗ್ಗೆ ಏನೋ ಅಂದುಕೊಂಡಿದ್ದೆ : ಡಿಕೆ ಶಿವಕುಮಾರ್​​

ಬೆಂಗಳೂರು : ಯಾವ ಧರ್ಮ ಕೂಡ ಒಡೆಯಬಾರದು ಎಂಬುದು ನನ್ನ ನಂಬಿಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

ನಗರದಲ್ಲಿಂದು  ಸುದ್ದಿಗಾರದೊಂದಿಗೆ ಮಾತನಾಡಿದ ಅವರು ಕೇದಾರನಾಥ ಸ್ವಾಮೀಜಿ ಅವರ ಹತ್ತಿರ ನಾನು ವೀರಶೈವ ಲಿಂಗಾಯತ ಧರ್ಮ ಪ್ರಸ್ತಾಪ ಮಾಡಿದ್ದೆ ಅದಕ್ಕೆ ಮೆಚ್ಚಿದರು ಅದಕ್ಕೆ ನಮ್ಮ‌ಮನೆಗೆ ಬಂದಿದ್ದರು. ವೀರಶೈವ ಧರ್ಮದಲ್ಲಿ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶವಿದೆ. ನಾನು ಪಾದಪೂಜೆ ಮಾಡಿದ್ದೇನೆ.  ಬೇರೆ ಕೆಲ ವಿಷಯಗಳನ್ನ ಚರ್ಚೆ ಮಾಡಿದ್ದೇವು ಎಂದು ಹೇಳಿದರು.

ಇನ್ನು ಇದೇ ವೇಳೆ  ಹರ್ಷ ಕೊಲೆ ಬಳಿಕ ಷಡ್ಯಂತ್ರ ಮಾಡಿದ್ದಾರೆ. ಕೆಲವರು ಏನೇನೋ ಮಾಡಬೇಕು ಅಂತಾ ಪ್ಲಾನ್ ಮಾಡಿದ್ದಾರೆ. ಒಂದು ಟ್ರಸ್ಟ್ ಇದೆ ಅದರಲ್ಲಿ ದೊಡ್ಡವರು ಇದ್ದಾರೆ. ತನಿಖೆಯಲ್ಲಿ ಬೇಕಾದ ವಸ್ತುಗಳನ್ನ ಸಂಗ್ರಹ ಮಾಡಿದ್ದಾರೆ ಎಂದರು.

ಈಶ್ವರಪ್ಪ ಅವರ ಎಫ್ ಐ ಆರ್ ವಿರುದ್ದ ಎಲ್ಲಿ ಹಾಕಿದ್ದಾರೆ‌. ಭ್ರಷ್ಟಾಚಾರದಲ್ಲಿ ಸಿಕ್ಕಿ ಹಾಕೊಂಡವರ ವಿರುದ್ದ ಎಲ್ಲಿದೆ ಕೇಸ್ ? ಈಶ್ವರಪ್ಪ ಅವರನ್ನ ರಕ್ಷಣೆ ಮಾಡ್ತಾ ಇದ್ದಾರೆ. ಸಿಎಂ‌ ಹಾಗೂ ಯಡಿಯೂರಪ್ಪ ನೇರವಾಗಿ ಬಂದು ಈಶ್ವರಪ್ಪ ತಪ್ಪು ಮಾಡಿಲ್ಲ ಅಂತಾರೆ.  ತನಿಖೆ ಮೊದಲೇ ಕ್ಲೀನ್ ಚಿಟ್ ನೀಡಿದರು. ನಾನು ಬೊಮ್ಮಾಯಿ ಬಗ್ಗೆ ಏನೋ ಅಂದುಕೊಂಡಿದ್ದೆ, ನಾನು ಅವರ ಬಗ್ಗೆ ಪ್ರಜ್ಞಾವಂತ ಮುಖ್ಯಮಂತ್ರಿ ಎಂದುಕೊಂಡಿದ್ದೆ. ಆದರೆ ರಾಜ್ಯದಲ್ಲಿ ಆಡಳಿತ ಹಾಳಾಗ್ತಾ ಇರೋದಕ್ಕೆ ಅವರೇ ಕಾರಣ. ಅವರು ತನಿಖೆ ಹಾದಿಯ‌ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಡಿ ಕೆ ಶಿವಕುಮಾರ್​​ ಕಿಡಿಕಾರಿದರು.

RELATED ARTICLES

Related Articles

TRENDING ARTICLES